Home Interesting Ram Mandir: ರಾಮ ಮಂದಿರ ಉದ್ಘಾಟನೆ ದಿನ ದೇಶದ ಮಸೀದಿಗಳಲ್ಲಿ ‘ಜೈ ಶ್ರೀರಾಮ್ ಘೋಷಣೆ’ !!...

Ram Mandir: ರಾಮ ಮಂದಿರ ಉದ್ಘಾಟನೆ ದಿನ ದೇಶದ ಮಸೀದಿಗಳಲ್ಲಿ ‘ಜೈ ಶ್ರೀರಾಮ್ ಘೋಷಣೆ’ !! ಏನಿದು ಹೊಸ ಸುದ್ದಿ?!

Ram Mandir
Image source: Times Of India

Hindu neighbor gifts plot of land

Hindu neighbour gifts land to Muslim journalist

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಜನವರಿ 22 ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು (Pran Prathistha) ಪ್ರಧಾನಿ ಮೋದಿ (PM Narendra Modi) ನೆರವೇರಿಸಲಿದ್ದಾರೆ. ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ವೇಳೆಗೆ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಲು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಹಿರಿಯ ನಾಯಕರೊಬ್ಬರು ದೇಶಾದ್ಯಂತ ಮುಸ್ಲಿಮರಲ್ಲಿ ಮನವಿ ಸಲ್ಲಿಸಿದ್ದಾರೆ.

ಆರ್ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ರಾಷ್ಟ್ರ ರಾಜಧಾನಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ , ಈ ತಿಂಗಳ ಕೊನೆಯಲ್ಲಿ ರಾಮ ಜನ್ಮಭೂಮಿ ಮಂದಿರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮುಸ್ಲಿಮರು “ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್” ಎಂದು ಘೋಷಣೆಗಳನ್ನು ಕೂಗುವಂತೆ ಮನವಿ ಮಾಡಿದ್ದಾರೆ.

ಇದನ್ನು ಓದಿ: Heart Health: ನೀರನ್ನು ಹೇಗ್ ಹೇಗೋ ಕುಡಿಬೇಡಿ, ಹಾರ್ಟ್ ಪ್ರಾಬ್ಲಮ್ ಪಕ್ಕಾ ಆಗುತ್ತೆ!

ಭಾರತದಲ್ಲಿ ಸರಿಸುಮಾರು 99 ಪ್ರತಿಶತದಷ್ಟು ಮುಸ್ಲಿಮರು ಮತ್ತು ಇತರ ಹಿಂದೂಯೇತರರು ದೇಶಕ್ಕೆ ಸೇರಿದವರಾಗಿದ್ದಾರೆ. “ನಾವು ಸಾಮಾನ್ಯ ಪೂರ್ವಜರನ್ನು ಹೊಂದಿರುವ ಹಿನ್ನೆಲೆ ಅವರು ಹಾಗೆಯೇ ಮುಂದುವರಿಯುತ್ತಾರೆ. ಅವರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆಯೇ ಹೊರತು ದೇಶವನ್ನಲ್ಲ. ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಧರ್ಮ ಅಥವಾ ಇತರ ಯಾವುದೇ ಧರ್ಮವನ್ನು ಆಚರಿಸುವ ಜನರು ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವಕ್ಕಾಗಿ ಆಯಾ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮುಖಾಂತರ ಅಯೋಧ್ಯೆಯಲ್ಲಿ ನಡೆಯುವ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗಿಯಾಗಬೇಕು” ಎಂದು ಆರ್ಎಸ್‌ಎಸ್‌ ನಾಯಕ ಮನವಿ ಮಾಡಿದ್ದಾರೆ.