Home Karnataka State Politics Updates Murder of a BJP worker: ಬಿಜೆಪಿ ಕಾರ್ಯಕರ್ತನ ಕೊಲೆ! ದೇವಸ್ಥಾನದಲ್ಲೇ ಕಾದು ಕುಳಿತಿದ್ದ ಹಂತಕರು!!!

Murder of a BJP worker: ಬಿಜೆಪಿ ಕಾರ್ಯಕರ್ತನ ಕೊಲೆ! ದೇವಸ್ಥಾನದಲ್ಲೇ ಕಾದು ಕುಳಿತಿದ್ದ ಹಂತಕರು!!!

Murder of a BJP worker
Source: newsfirstlive

Hindu neighbor gifts plot of land

Hindu neighbour gifts land to Muslim journalist

Murder of a BJP worker: ಬಿಜೆಪಿ (bjp) ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ನಡೆಸಿ ಬೀಕರ ಹತ್ಯೆಗೈದಿರುವ (Murder of a BJP worker) ಘಟನೆ ಗುಜರಾತ್‌ನ (Gujarath) ವಲ್ಪಾದ್ ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪರಿಚತರ ದಾಳಿಗೆ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತನನ್ನು ಶೈಲೇಶ್ ಪಟೇಲ್ ಎಂದು ಹೇಳಲಾಗಿದೆ. ಈತ ಬಿಜೆಪಿ ತಾಲೂಕು ಘಟಕ ಉಪಾಧ್ಯಕ್ಷರಾಗಿದ್ದರು ಎನ್ನಲಾಗಿದೆ.

ಶೈಲೇಶ್ ಪಟೇಲ್ ಇಂದು ಬೆಳಗ್ಗೆ 7.30ರ ಹೊತ್ತಿಗೆ ತನ್ನ ಪತ್ನಿಯ ಜೊತೆ ವಾಪಿ ನಗರದ ದೇವಸ್ಥಾನಕ್ಕೆ ತೆರಳಿದ್ದರು. ಶೈಲೇಶ್ ದೇವರಲ್ಲಿ ಬೇಡಿ, ಪೂಜೆ ಮುಗಿಸಿ ಹೊರಬಂದು ತಮ್ಮ ಕಾರಿನಲ್ಲಿ ಹೆಂಡತಿಯ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ, ಪತ್ನಿಗಿಂತ ಮೊದಲೇ ಅವರು ಬಳಿಗೆ ಯಮರಾಯ ಬಂದು ಬಿಟ್ಟ. ಹೌದು, ಬೈಕ್‌ನಲ್ಲಿ ಆಗಮಿಸಿದ ಅಪರಿಚಿತರು ಕಾರಿನಲ್ಲಿ ಕುಳಿತಿದ್ದ ಶೈಲೇಶ್ ಪಟೇಲ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸದ್ದು ಕೇಳಿ ಹೊರಬಂದ ಪತ್ನಿಗೆ ಆಘಾತ ಉಂಟಾಗಿದೆ. ಗುಂಡಿನ ದಾಳಿಗೆ ಶೈಲೇಶ್ ಗಂಭೀರ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಶೈಲೇಶ್ ಪತ್ನಿ ಕಾರಿನ ಬಳಿ ಓಡಿ ಬರುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದು, ಶೈಲೇಶ್ ನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತಿಯ ಸಾವಿನಿಂದ ಕಾರ್ಯಕರ್ತನ ಕುಟುಂಬ ಕಣ್ಣೀರು ಸುರಿಸುತ್ತಿದೆ.

ಸದ್ಯ ಗುಜರಾತ್‌ನಲ್ಲಿ ನಡೆದ ಈ ಬರ್ಬರ ಹತ್ಯೆಗೆ ಬಿಜೆಪಿ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಇನ್ನು ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿರಬಹುದು ಎಂದು ಊಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ.

ಇದನ್ನೂ ಓದಿ:Karnataka Election 2023: ಕರ್ನಾಟಕ ಚುನಾವಣೆ; ಎಲ್ಲೆಲ್ಲೂ ಕಾಂಚಾಣದ ಆಟ, ಮರದಲ್ಲಿ, ರಸ್ತೆಯಲ್ಲಿ ಬರೀ ನೋಟುಗಳೇ!!!