

MLA Ravikumar Ganiga: ಶಾಸಕ ರವಿಕುಮಾರ್ ಗಣಿಗ ಅವರು ಹೊರಗಿನಿಂದ ಬಂದು ವಿಷ ಹಾಕಿದ್ದು, ಕೈಮುಗಿದು ಬೇಡಿಕೊಳ್ತೀನಿ ಶಾಂತವಾಗಿರಿ. ಸುಮ್ಮನೆ ಊರಿಗೆ ಬೆಂಕಿ ಹಚ್ಚಲಾಗಿದೆ. 7,9 ರಂದು ದಯವಿಟ್ಟು ನಮ್ಮೂರು ಬಂದ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೆರಗೋಡಿನ ಹಲ್ಲೆಗೆರೆ ಬಳಿ ಬರಾಕ್ ಒಬಾಮಾ, ದಲೈಲಾಮ ಬರೋರಿದ್ದಾರೆ. ಈ ಸಮಯದಲ್ಲಿ ಈ ರೀತಿ ಬಂದ್ ಮಾಡಿ ಅಡ್ಡಿಯುಂಟು ಮಾಡಬೇಡಿ, ಶಾಂತಿಯಿಂದ ಇರಿ. ಇದೇ ವೇಳೆ ಮಂಡ್ಯವನ್ನು ಮಂಗಳೂರು ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಹನುಮ, ರಾಮ ಇಬ್ಬರು ನಮ್ಮವರೇ. ಅವರನ್ನು ನಾನು ಪೂಜಿಸುತ್ತೇನೆ. ಹನುಮಧ್ವಜವನ್ನು ನಮ್ಮನೆಗೂ ತಂದುಕೊಡಿ, ನಾನು ಹನುಮನ ಭಕ್ತ ಎಂದು ಹೇಳಿದರು. ಚುನಾವಣೆ ಸಮೀಪ ಬರುತ್ತಿರುವುದರಿಂದ ನಮ್ಮನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.













