Home Karnataka State Politics Updates V Somanna: ಕಾಂಗ್ರೆಸ್ ಸೇರ್ಪಡೆ ವಿಚಾರ- ಮಹತ್ವದ ಹೇಳಿಕೆ ಕೊಟ್ಟ ವಿ ಸೋಮಣ್ಣ!!

V Somanna: ಕಾಂಗ್ರೆಸ್ ಸೇರ್ಪಡೆ ವಿಚಾರ- ಮಹತ್ವದ ಹೇಳಿಕೆ ಕೊಟ್ಟ ವಿ ಸೋಮಣ್ಣ!!

V Somanna

Hindu neighbor gifts plot of land

Hindu neighbour gifts land to Muslim journalist

V Somanna: ರಾಜ್ಯದಲ್ಲಿ ಬಿಜೆಪಿ(BJP) ಸೋತು ಸಣ್ಣವಾದ ಬಳಿಕ ಬಿಜೆಪಿಯ ಅನೇಕ ಪ್ರಬಲ ನಾಯಕರು ಕಾಂಗ್ರೆಸ್ ಸೇರುವ ಕುರಿತು ಚಿಂತನೆ ನಡೆಸಿದ್ದಾರೆ. ಅದರಲ್ಲಿಯೂ ಅವರ ಹೇಳಿಕೆಗಳು ಬಿಜೆಪಿಗೆ ಆಗಿದ್ದಾಂಗೆ ನಿದ್ದೆಗೆಡಿಸುತ್ತಿದೆ. ಅಂತಯೇ ಇದೀಗ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ ವಿ. ಸೋಮಣ್ಣ(V Somanna) ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ(Assembly election) ಎರಡೈ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡು, ಯಾವ ಅಧಿಕಾರವೂ ಇಲ್ಲದೆ ಅತಂತ್ರವಾಗಿರುವ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವಾದರೂ ಸಿಗುತ್ತದೆ ಎಂದು ನಿರೀಕ್ಷಿಸಿಸಿದ್ದರು. ನಾನು ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ ಇದು ವಿಜಯೇಂದ್ರ ಪಾಲಾದಾಗ ಅವರ ಆಕ್ರೋಶ ಸ್ಪೋಟಗೊಂಡಿತು. ಇನ್ನು
ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಹಲವು ಸಮಯದಿಂದ ಭಾರೀ ಚರ್ಚೆಯಾಗುತ್ತಿತ್ತು. ಸ್ವಪಕ್ಷದ ವಿರುದ್ಧ, ನಾಯಕರ ವಿರುದ್ಧ ಅವರು ನೀಡುವ ಹೇಳಿಕೆಗಳು ಇದಕ್ಕೆ ಬಲ ನೀಡುತ್ತಿದ್ದವು. ಜೊತೆಗೆ ರಾಜ್ಯಾಧ್ಯಕ್ಷ ಪಟ್ಟ ತಪ್ಪಿದ ಬಳಿಕ ಅವರು ಸಿದ್ದರಾಮಯ್ಯ ಹಾಗೂ ಡಿಕೆಶಿ ಛೊತೆ ಕೂಡ ಗೌಪ್ಯ ಮಾತುಕತೆ ನಡೆಸಿದ್ದರು. ಬಳಿಕ ಡಿಸೆಂಬರ್‌ 6 ರಂದು ನನ್ನ ನಿರ್ಧಾರವನ್ನ ತಿಳಿಸುವುದಾಗಿ ಹೇಳಿದ್ದರು. ಆದರೀಗ ಈ ಕುರಿತು ವಿ ಸೋಮಣ್ಣ ಉಲ್ಟಾ ಹೊಡೆದಿದ್ದಾರೆ.

ಇದನ್ನು ಓದಿ: Parliment sessions: ಜುಮ್ಮು ಕಾಶ್ಮೀರದ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡ ಮೋದಿ ಗೌರ್ಮೆಂಟ್ !!

ಹೌದು, ಕೆಲ ದಿನಗಳ ಹಿಂದಷ್ಟೇ ಸಿದ್ದಗಂಗಾ ಮಠಕ್ಕೆ ಬೇಟಿನೀಡಿದಾಗ ಸೋಮಣ್ಣ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ನನ್ನ ನಿರ್ಧಾರ ಏನೇ ಇದ್ದರೂ ಡಿಸೆಂಬರ್‌ 6 ರಂದು ನನ್ನ ನಿರ್ಧಾರವನ್ನ ತಿಳಿಸುವುದಾಗಿ ಹೇಳಿದ್ದರು. ಅಂತೆಯೇ ಇಂದು ಮತ್ತೆ ಅವರು ತುಮಕೂರಿನ ಕಾರ್ಯಕ್ರಮವೊಂದಕ್ಕೆ ಬಂದಾಗ ಮಾಧ್ಯಮಗಳು ಇಂದು ಡಿಸೆಂಬರ್ 6, ಹೊಸ ಘೋಷಣೆ ಏನು ಎಂದು ಕೇಳಿದ್ದಾರೆ. ಆಗ ಇದಕ್ಕೆ ಉತ್ತರಿಸಿದ ಸೋಮಣ್ಣ ಡಿಸೆಂಬರ್ 6 ರವರೆಗೆ ಕಾಯಿರಿ, ಎಲ್ಲ ಹೇಳ್ತೀನಿ ಅಂದಿದ್ದರು. ಆರನೇ ತಾರೀಖು ನಂತರ ಅಂತ ಹೇಳಿದ್ದೆ, ಅರರಂದು ಅಂತ ಅಲ್ಲ. ತಾನು ಕಾಂಗ್ರೆಸ್ ಸೇರಬೇಕೆಂದಿದ್ದ ವಿಚಾರವನ್ನು ಮನಸ್ಸಿನಿಂದ ತೆಗೆದುಬಿಡಿ ಎಂದು ಹೇಳಿದ್ದಾರೆ.

ಕೆಲ ಸಂದರ್ಭದಲ್ಲಿ ನನ್ನ ದುರಹಂಕಾರದಿಂದ ನನಗೆ ತೊಂದರೆ ಆಗಿದೆ. ಕೆಲ ವೇಳೆ ನಾನು ಮಾಡಿದ ತೀರ್ಮಾನ ನನಗೆ ತೊಂದರೆ ಕೊಟ್ಟಿದೆ. ನಾನು ಮಾಡಿದ ತೀರ್ಮಾನ ನನ್ನ ಮುಖದ ಮೇಲೆ ನಾನೇ ಉಗುಳಿಕೊಂಡಂತೆ ಆಗಿದೆ. ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಚಿಂತನೆ ಮಾಡುತ್ತಾರೋ ಏನೋ ಗೊತ್ತಿಲ್ಲ. ನಾನು ತೆರೆದ ಪುಸ್ತಕ, ಓಡಿ ಹೋಗುವವನಲ್ಲ. ಅನಾವಶ್ಯಕವಾಗಿ ನನ್ನನ್ನು ಸಣ್ಣಪುಟ್ಟವರ ಜೊತೆ ಹೋಲಿಕೆ ಮಾಡಬೇಡಿ ಎಂದು ಹೇಳಿದರು.