Home Karnataka State Politics Updates KSRTC Ashwamedha Classic Buses: ಮಹಿಳೆಯರಿಗೆ ಸಂತಸದ ಸುದ್ದಿ, ಇನ್ನು ಮುಂದೆ ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ...

KSRTC Ashwamedha Classic Buses: ಮಹಿಳೆಯರಿಗೆ ಸಂತಸದ ಸುದ್ದಿ, ಇನ್ನು ಮುಂದೆ ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಉಚಿತ ಪ್ರಯಾಣ- KSRTC ಮಹತ್ವದ ಘೋಷಣೆ!!!

Hindu neighbor gifts plot of land

Hindu neighbour gifts land to Muslim journalist

KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತನ್ನ ಹೊಸದಾದ ಅಶ್ವಮೇಧ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಿದೆ. ಒಟ್ಟು ನಾಲ್ಕು ಸಾವಿರ ಹೊಸ ಬಸ್‌ಗಳು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸೇರಲಿದ್ದು, ಇದರ ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್‌ ಬಸ್‌ಗಳು ಬಂದಿದ್ದು, ಈ ಅಶ್ವಮೇಧ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಲಿದ್ದಾರೆ. ಮಹಿಳೆಯರು ಈ ಬಸ್ಸುಗಳಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಇದನ್ನೂ ಓದಿ: Dakshina kannada: ಕರಾವಳಿಯ ದಾರಿ ತಪ್ಪಿದ ಶಿಕ್ಷಕರನ್ನು ದಾರಿಗೆ ತರುತ್ತೇನೆ. ಮಧು ಬಂಗಾರಪ್ಪ!!.

ಕರ್ನಾಟಕ ಕಾಂಗ್ರೆಸ್‌ ಸರಕಾರದ ಫ್ರೀ ಗ್ಯಾರಂಟಿ ಪ್ರಕಾರ, ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿಯಂಥ ವಿಶೇಷ ಬಸ್ಗಳನ್ನು ಹೊರತುಪಡಿಸಿ ಇತರ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇದೆ. ಇದೀಗ ಅಶ್ವಮೇಧ ಬಸ್ಗಳಲ್ಲೂಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಘೋಷಣೆ ಮಾಡಲಾಗಿದೆ.

ಮಹಿಳೆಯರ ಸುರಕ್ಷತೆಗೆ ಹಲವು ಸೌಕರ್ಯಗಳನ್ನು ಈ ಬಸ್‌ಗಳಲ್ಲಿ ನೀಡಲಾಗಿದ್ದು, ಹೆಣ್ಮಕ್ಕಳಿಗೆ ಖುಷಿಯ ವಿಷಯ ಎಂದೇ ಹೇಳಬಹುದು. ನೂರು ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. 52 ಸೀಟು, ಬಸ್ಸಿನ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೆಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಕೂಡಾ ಇದೆ.

ನೂರು ಬಸ್‌ಗಳಿಗೆ ಚಾಲನೆ ನೀಡಲಾಗಿದ್ದು, ಈ ಬಸ್‌ಗಳು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಕಾರ್ಯಚಾರಣೆ ಮಾಡಲಿದೆ. ಮುಂದೆ ಈ ಬಸ್ಸುಗಳ ಸಂಖ್ಯೆ ಇನ್ನೂ ಹೆಚ್ಚಲಿದ್ದು, ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಲಿದೆ.