Home Karnataka State Politics Updates Karnataka government: ರಾಜ್ಯಕ್ಕೆ, ಜನರಿಗೆ ಮಾತ್ರ ಬರ, ಶಾಸಕರು, ಸಚಿವರ ಸಂಬಳದಲ್ಲಿ ಮಾತ್ರ ಭಾರೀ ಹೆಚ್ಚಳ...

Karnataka government: ರಾಜ್ಯಕ್ಕೆ, ಜನರಿಗೆ ಮಾತ್ರ ಬರ, ಶಾಸಕರು, ಸಚಿವರ ಸಂಬಳದಲ್ಲಿ ಮಾತ್ರ ಭಾರೀ ಹೆಚ್ಚಳ !!

Karnataka government

Hindu neighbor gifts plot of land

Hindu neighbour gifts land to Muslim journalist

Karnataka government: ಇಡೀ ಕರ್ನಾಟಕ ರಾಜ್ಯವೇ ಬರದಿಂದ ನಲುಗುತ್ತಿದೆ. ಎಂದೂ ಕಾರಣರಿಯದ ಭೀಕರ ಬರಗಾಲ ಈ ವರ್ಷ ಬಂದೊದಗಿದೆ. ಆದರೆ ನಮ್ಮ ರಾಜ್ಯದ ಶಾಸಕರು, ಸಚಿವರುಗಳಿಗೆ ಇದಾವುದರ ಪರಿವೇ ಇಲ್ಲ. ಅವರಿಗೆ ಬರ ಭಾಷಣಗಳಿಗೆ, ಆರೋಪ, ಪ್ರತ್ಯಾರೋಪಗಳಿಗಷ್ಟೇ ಸೀಮಿತ. ಯಾಕೆಂದರೆ ಅವರೆಲ್ಲರೂ ತಮ್ಮ ವೇತನವನ್ನು ಹೆಚ್ಚಿಸುವತ್ತ, ಹೊಸ ಕಾರುಗಳನ್ನು ಕೊಳ್ಳುವತ್ತ ಗಮನ ಹರಿಸಿದ್ದಾರೆ.

ಹೌದು, ನಿನ್ನೆ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಇದರಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಶಾಸಕರು, ಸಚಿವರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಘಟನೋತ್ತರ ಒಪ್ಪಿಗೆ ನೀಡಿ ನಿರ್ಣಯ ಕೈಗೊಳ್ಳಲಾಗಿದೆ.

ಅಂದಹಾಗೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌ ಅವರು ‘2022ರ ಫೆಬ್ರುವರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವೇತನ, ಭತ್ಯೆ ಪರಿಷ್ಕರಣೆ ಮಾಡಲಾಗಿತ್ತು. ಈವರೆಗೆ ಪರಿಷ್ಕೃತ ವೇತನವನ್ನು ಶಾಸಕರು, ಸಚಿವರು ಪಡೆಯುತ್ತಿದ್ದರು. ಆದರೆ ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಪಡೆಯದ ಹಿನ್ನೆಲೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

 

ಇದನ್ನು ಓದಿ: Rishab Shetty: ʼಕಾಂತಾರʼ ಥೀಮ್‌ನಲ್ಲಿ ಮೂಡಿಬಂದ ಕೋಲ್ಕತ್ತಾ ಜನರ ದುರ್ಗಾ ಪೂಜೆ!!!