Home Karnataka State Politics Updates Rama mandir Inauguration: ಉದ್ಘಾಟನೆ ದಿನ ಈ 5 ಮಂದಿಗೆ ಮಾತ್ರ ರಾಮ ಮಂದಿರದ ಗರ್ಭ...

Rama mandir Inauguration: ಉದ್ಘಾಟನೆ ದಿನ ಈ 5 ಮಂದಿಗೆ ಮಾತ್ರ ರಾಮ ಮಂದಿರದ ಗರ್ಭ ಗುಡಿಯೊಳಗೆ ಪ್ರವೇಶ !!

Rama mandir Inauguration

Hindu neighbor gifts plot of land

Hindu neighbour gifts land to Muslim journalist

Rama Mandir Inauguration: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಇದೀಗ ಈ ಕುರಿತಂತೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಉದ್ಘಾಟನೆ ದಿನದಂದು ಗರ್ಭಗುಡಿಯೊಳಗೆ ಈ 5 ಮಂದಿಗೆ ಮಾತ್ರ ಪ್ರವೇಶ ಇದೆ ಎಂದು ತಿಳಿದುಬಂದಿದೆ.

 

ಹೌದು, ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ(PM Modi) ಸೇರಿದಂತೆ ಐವರು ಭಾಗವಹಿಸಲಿದ್ದಾರೆ.

ಆ ದಿನ (ಜನವರಿ 22 ರಂದು) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ್ ಲಲ್ಲಾನ ವಿಗ್ರಹದ ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯುವ ಸಮಯದಲ್ಲಿ ಗರ್ಭಗುಡಿಯಲ್ಲಿ ಮೋದಿ ಜೊತೆ ನಾಲ್ಕು ಮಂದಿ ಗಣ್ಯರು ಉಪಸ್ಥಿತರಿರುತ್ತಾರೆ. ಹಾಗಿದ್ದರೆ ಯಾರು ಆ ಉಳಿದ ನಾಲ್ಕು ಗಣ್ಯರು?

 

ಪ್ರಧಾನಿ ಜೊತೆ ಗರ್ಭಗುಡಿ ಪ್ರವೇಶಿಸುವವರು ಯಾರು ?

ಪ್ರಧಾನಿ ಜೊತೆಗೆ ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹಾಗೂ ರಾಮಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ಅವರು ಮಾತ್ರ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲದೆ ಅಲ್ಲದೆ ಈ ಸಂದರ್ಭದಲ್ಲಿ ಗರ್ಭಗುಡಿಯನ್ನು ಪರದೆಯಿಂದ ಮುಚ್ಚಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.