Home Karnataka State Politics Updates Declaration of 5th Guarantee by Congress : ಕಾಂಗ್ರೆಸ್ ನಿಂದ 5ನೇ ಗ್ಯಾರಂಟಿ ಘೋಷಣೆ-...

Declaration of 5th Guarantee by Congress : ಕಾಂಗ್ರೆಸ್ ನಿಂದ 5ನೇ ಗ್ಯಾರಂಟಿ ಘೋಷಣೆ- ಕರ್ನಾಟಕದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ರಾಹುಲ್ ಗಾಂಧಿ!

Declaration of 5th Guarantee by Congress
Image source- ThePrint

Hindu neighbor gifts plot of land

Hindu neighbour gifts land to Muslim journalist

5th Guarantee by Congress: ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಇಂದು ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಪಕ್ಷದ 5ನೇ ಗ್ಯಾರಂಟಿಯನ್ನು ಘೋಷಣೆ (5th Guarantee by Congress) ಮಾಡಲಾಯಿತು.

ಹೌದು, ಕಾಂಗ್ರೆಸ್ 4 ಭರವಸೆಗಳ ಜೊತೆ ರಾಜ್ಯದ ಮಹಿಳೆಯರಿಗೆ ಮತ್ತೊಂದು ಭರವಸೆ ನೀಡಿದೆ. ಕರ್ನಾಟಕದಲ್ಲಿ (Karnataka) ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ (Woman) ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆ.

ಈ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾತನಾಡಿ “ನಮ್ಮ ಸರ್ಕಾರ ಬಂದ ಮೊದಲ‌ ದಿನದ ಮೊದಲ ಕ್ಯಾಬಿನೆಟ್ ನಲ್ಲಿ ನಾಲ್ಕು ಭರವಸೆಗಳನ್ನು ಮಾತ್ರವಲ್ಲ, ಐದು ಭರವಸೆಗಳನ್ನು ಈಡೇರಿಸುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೆ ಕಿವಿಗೊಟ್ಟಿ ಕೇಳಿ. ನಾವು ನಾಲ್ಕನೆ ಭರವಸೆಯ ಜೊತೆಗೆ ಮಹಿಳೆಯರಿಗಾಗಿ ಹೊಸ ಭರವಸೆ ನೀಡುತ್ತಿದ್ದೇವೆ. ನಮ್ಮ‌ ಸರ್ಕಾರ ಅವಧಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನು ನೀಡುತ್ತೇವೆ” ಎಂದರು.

ಬಳಿಕ ಮಾತನಾಡಿದ ಅವರು “ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಇದೆ. ಆದರೆ ಇದನ್ನು ನೀವು ಆಯ್ಕೆ ಮಾಡಿರಲಿಲ್ಲ. ನಿಮ್ಮ ವೋಟ್‍ಗಳಿಂದ ಅದು ಬಂದಿರಲಿಲ್ಲ, ಬಿಜೆಪಿ ಅದನ್ನು ಕಳ್ಳತನದಿಂದ ಮಾಡಿತ್ತು. ಭ್ರಷ್ಟಾಚಾರ ಹಣದಿಂದ ಶಾಸಕರನ್ನು ಖರೀದಿಸಿದ್ದರು. ಸರ್ಕಾರವನ್ನು ನಮ್ಮಿಂದ ಕಳವು ಮಾಡಿದ್ದರು. ಕಳ್ಳತನ ಇವರಿಗೆ ಅಭ್ಯಾಸ ಆಗಿದೆ. ಬಿಜೆಪಿಯವರು ಶಾಸಕ, ಗುತ್ತಿಗೆದಾರ, ಶುಗರ್ ಫ್ಯಾಕ್ಟರಿ ಎಲ್ಲವನ್ನೂ ಕಳವು ಮಾಡುತ್ತಾರೆ. ಈ ಚುನಾವಣೆ ರಾಜ್ಯವನ್ನು ಮೋದಿ ಕೈಯ್ಯಲ್ಲಿ ಕೊಡುವ ಚುನಾವಣೆ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ. ಈಗ ಯಾರ ಕೈಯ್ಯಲ್ಲಿದೆ? ಬಿಜೆಪಿ ಕೈಯ್ಯಲ್ಲೇ ಇದೆ ತಾನೆ ಎಂದ ಅವರು, ಎಲ್ಲದರಲ್ಲೂ 40% ಸರ್ಕಾರವಾಗಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಅಲ್ಲದೆ “ಈಗಾಗಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪ್ರತೀ ಕುಟುಂಬದ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರೂ., ಗೃಹಜ್ಯೋತಿ ಮೂಲಕ 200 ಯುನಿಟ್ ವಿದ್ಯುತ್ ಉಚಿತ, 10 ಕೆ.ಜಿ ಉಚಿತ ಪಡಿತರ ಅಕ್ಕಿ, ಪದವೀಧರರಿಗೆ 1500 ರೂ. ನೀಡುವ ಭರವಸೆ ನೀಡಿದೆ. ರಾಜ್ಯದಲ್ಲಿ ಹಣಕ್ಕೆ ಏನೂ ಕೊರತೆ ಇಲ್ಲ, ಈ ಕೆಲಸವನ್ನು ಪ್ರಾಮಾಣಿಕ ಸರ್ಕಾರ ಮಾಡಲಿದೆ. ಮೊದಲ ಕ್ಯಾಬಿನೆಟ್‍ನಲ್ಲೇ ಇದು ಜಾರಿ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್‌ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!