Home Karnataka State Politics Updates Arvind Kejriwal: ಜೈಲಿನಿಂದಲೇ ಆಡಳಿತ ಶುರು ಮಾಡಿದ ಕೇಜ್ರಿವಾಲ್ – ಹೊರಡಿತು ಮೊದಲ ನಿರ್ದೇಶನ

Arvind Kejriwal: ಜೈಲಿನಿಂದಲೇ ಆಡಳಿತ ಶುರು ಮಾಡಿದ ಕೇಜ್ರಿವಾಲ್ – ಹೊರಡಿತು ಮೊದಲ ನಿರ್ದೇಶನ

Arvind Kejriwal
Image Credit Source: Business Standard World

Hindu neighbor gifts plot of land

Hindu neighbour gifts land to Muslim journalist

Arvind Kejriwal: ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಸರಕಾರ ನಡೆಸಲು ಮುಂದಾಗಿದ್ದಾರೆ. (Delhi chief minister started to rule from jail) ಅವರು ತಮ್ಮ ಮೊದಲ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಮಾರ್ಚ್ 21 ರಂದು ರಾಷ್ಟ್ರ ರಾಜಧಾನಿಯ ಅವರ ಅಧಿಕೃತ ನಿವಾಸದಲ್ಲಿ ನಡೆದ ಶೋಧದ ನಂತರ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಇಡಿ ಬಂಧನ ಮಾಡಿತ್ತು. ಈ ಆಪಾದಿತ ಮದ್ಯ ಹಗರಣದಲ್ಲಿ ಇರಬಹುದಾದ ಅವರ ಪಾತ್ರದ ಕುರಿತು “ವಿವರವಾದ ಮತ್ತು ನಿರಂತರ ವಿಚಾರಣೆ”ಗಾಗಿ ಮೊನ್ನೆ ಶುಕ್ರವಾರ ಅವರನ್ನು ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿತ್ತು.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ 100ರೂ ನೋಟ್ ಬ್ಯಾನ್; RBI ನಿಂದ ಮಹತ್ವದ ಮಾಹಿತಿ

ಆಮ್ ಆದ್ಮಿ ಮುಖ್ಯಸ್ಥ ಕೇಜ್ರಿವಾಲ್‌ ಅವರ ಬಂಧನವಾದ ಕ್ಷಣದಿಂದ ಪಕ್ಷದ ನಾಯಕರು ಅರವಿಂದ್‌ ಕೇಜ್ರಿವಾಲ್‌ ಅವರೇ ಮುಖ್ಯಮಂತ್ರಿಯಾಗಿ ಉಳಿಯಲಿದ್ದಾರೆ ಎಂದಿದ್ದರು. ಜತೆಗೆ ಅಗತ್ಯ ಬಿದ್ದಲ್ಲಿ ಸರ್ಕಾರವನ್ನು ಜೈಲಿನಿಂದಲೇ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಅದರಂತೆಯೇ ಈಗ ಕೇಜ್ರಿವಾಲ್ ರವರು ದೆಹಲಿ ಜೈಲಿನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಅವರು ತಮ್ಮ ಸರ್ಕಾರದ ಮೊದಲ ನಿರ್ದೇಶನವನ್ನು ಹೊರಡಿಸಿದ್ದಾರೆ. ಇದು ದೆಹಲಿಯ ಜಲ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ ಎಂದು ತಿಳಿದು ಬಂದಿದೆ. ಜಲ ಸಚಿವೆ ಅತಿಶಿ ಇಂದು ಆದೇಶದ ಕುರಿತು ಹೆಚ್ಚಿನ ವಿವರ ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮತ್ತೊಂದು ಕಡೆ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೋಳಿ ರಜೆಯ ಕಾರಣ ನ್ಯಾಯಾಲಯವು 27 ಕ್ಕೂ ಮೊದಲು ಈ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಕ್ಷೀಣ ಎಂದು ಸುದ್ದಿ ಮೂಲಗಳು ತಿಳಿಸಿವೆ.