Home Karnataka State Politics Updates ಸಿದ್ದು ಆಡಳಿತದ 59 ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸುತ್ತಿದೆ ಬೊಮ್ಮಾಯಿ ಸರ್ಕಾರ! ಚುನಾವಣೆ ಬೆನ್ನಲ್ಲೇ ಗರಿಗೆದರಿತು...

ಸಿದ್ದು ಆಡಳಿತದ 59 ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸುತ್ತಿದೆ ಬೊಮ್ಮಾಯಿ ಸರ್ಕಾರ! ಚುನಾವಣೆ ಬೆನ್ನಲ್ಲೇ ಗರಿಗೆದರಿತು ಭ್ರಷ್ಟಾಚಾರ ಆರೋಪ!

Hindu neighbor gifts plot of land

Hindu neighbour gifts land to Muslim journalist

ಚುನಾವಣೆ ಸನ್ಹಿತವಾದಂತೆ ಪಕ್ಷ ಹಾಗೂ ಪ್ರತಿಪಕ್ಷಗಳ ಅರೋಪ, ಪ್ರತ್ಯಾರೋಪಗಳು ತುಂಬಾ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಭ್ರಷ್ಟಾಚಾರ ಆರೋಪಗಳದ್ದೇ ಮೇಲುಗೈ. ಇಷ್ಟು ಸಮಯ ಸುಮ್ಮನಿದ್ದ ಕೋಟಿ ಕೋಟಿ ಹಗರಣಗಳೆಲ್ಲ ಬೆಳಕಿಗೆ ಬಂದು ಜನರಿಗೆ ನಾಯಕರ ಬಣ್ಣ ಬದಲಾಗುವ ಸಮಯವಿದು. ಅಂತೆಯೇ ಇದೀಗ ಇಷ್ಟು ದಿನ ಸುಮ್ಮನಿದ್ದ ಸಿಎಂ ಬೊಮ್ಮಾಯಿ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಆರೋಪಗಳ ಪಟ್ಟಿಯನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಕೂಡ ಅವರು ಮಾಡುತ್ತಿರುವ ಎಲ್ಲಾ ಆರೋಪಿಗಳು ಸಿದ್ದರಾಮಯ್ಯ ಆಡಳಿತ ನಡೆಸಿದ ಸರ್ಕಾರದ ಕುರಿತು!

ಸಿದ್ದರಾಮಯ್ಯ ನೇತೃತ್ವದ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ, ಹಗರಣ ನಡೆಯಿತು. 59 ಕೇಸ್‌ಗಳು ಅವರ ಮೇಲೆ ಬಿದ್ದವು. ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಹಾಕಿದರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಈ ಅವಧಿಯಲ್ಲಿ ದಾಖಲಾಗಿದ್ದ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಡುತ್ತಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ.

ಹಿರೇಕೆರೂರು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ, ಹಗರಣ ನಡೆಯಿತು. 59 ಕೇಸ್‌ಗಳು ಅವರ ಮೇಲೆ ಬಿದ್ದವು. ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಹಾಕಿದರು. ಭ್ರಷ್ಟಾಚಾರ ನಿಗ್ರಹ ಮಾಡುವಂಥ ಸ್ವತಂತ್ರ ಸಂಸ್ಥೆಯನ್ನೇ ಮುಚ್ಚಿ ಕೈಗೊಂಬೆಯಂತಿರುವ ಎಸಿಬಿ ಇಟ್ಟುಕೊಂಡು ಕೂತಿದ್ದರು. ಕೋರ್ಟ್ ತೀರ್ಮಾನದಂತೆ ನಮ್ಮ ಸರ್ಕಾರ ಕಾಂಗ್ರೆಸ್‌ನವರ ಮೇಲಿರುವ 59 ಕೇಸ್‌ಗಳನ್ನು ಲೋಕಾಯುಕ್ತಕ್ಕೆ ಕೊಡುತ್ತಿದೆ. ತನಿಖೆ ನಡೆದು ಅವರ ಭ್ರಷ್ಟಾಚಾರದ ಮುಖವಾಡ ಕಳಚಲಿದೆ ಎಂದು ಹೇಳಿದರು.

ಆಡಳಿತದಲ್ಲಿದ್ದಾಗ ಅನ್ನದಲ್ಲಿ ಕನ್ನ ಹಾಕಿದರು. ಇದನ್ನು ತನಿಖೆ ಮಾಡುತ್ತಿದ್ದ ಸಿಬಿಐ ಅಧಿಕಾರಿ ಉತ್ತರ ಭಾರತದಲ್ಲಿ ನಿಗೂಢವಾಗಿ ಮೃತಪಟ್ಟರು. ಇದಕ್ಕೆ ಏನು ಉತ್ತರ ಕೊಡುತ್ತೀರಿ ಎಂದು ಪ್ರಶ್ನಿಸಿದ ಬೊಮ್ಮಾಯಿ, ಈ ರೀತಿ ಜನರಿಗೆ ಮೋಸ ಮಾಡುವಂಥ ಸರ್ಕಾರವನ್ನು ನಾನು ಯಾವತ್ತೂ ನೋಡಿರಲಿಲ್ಲ. ಮಕ್ಕಳ ಹಾಸಿಗೆ, ದಿಂಬು ಕೂಡ ಬಿಡಲಿಲ್ಲ, ಸಣ್ಣ ನೀರಾವರಿ ಯೋಜನೆಯಡಿ ಕೆಲಸ ಮಾಡದೇ ಬಿಲ್‌ ತೆಗೆಯಲಾಯಿತು. ಬಹಿರಂಗವಾಗಿ ಭ್ರಷ್ಟಾಚಾರ ನಡೆಸಲಾಯಿತು. ಸಿದ್ದರಾಮಯ್ಯ ಅವಧಿಯಲ್ಲಿ ಅಧಿಕಾರಿಗಳು ಸಸ್ಪೆಂಡ್‌ ಆದರು. ಬಿಡಿಎ, ನೀರಾವರಿ ಇಲಾಖೆ ಎಲ್ಲೆಡೆ ಭ್ರಷ್ಟಾಚಾರದ ಹಗರಣಗಳು ನಡೆದವು ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಅವರಿಗೆ ಖಾತ್ರಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಕೂಡಿದ ಎಲ್ಲ ಸೌಭಾಗ್ಯಗಳನ್ನು ದೌರ್ಭಾಗ್ಯ ಮಾಡಿದರು. ಅದಕ್ಕಾಗಿಯೇ ಜನ 2018ರಲ್ಲಿ ಅವರನ್ನು ಮನೆಗೆ ಕಳುಹಿಸಿದರು. .30ರ ಮೋದಿ ಅಕ್ಕಿಗೆ .3ರ ‘ಸಿದ್ದರಾಮಯ್ಯ ಚೀಲ’ ಮಾಡಿ ಅನ್ನಭಾಗ್ಯ ಯೋಜನೆಯಡಿ ಪ್ರಚಾರ ಪಡೆದರು. ಈಗ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. 7 ಕೆಜಿಯಿಂದ 4 ಕೆಜಿಗೆ ಇಳಿಸಿ, ಚುನಾವಣೆ ಬಂದಾಗ 10 ಕೆ.ಜಿ. ಕೊಡುತ್ತೇವೆ ಅಂತಿದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.