Home Interesting Madhu Bangarappa : ಮಧುಬಂಗಾರಪ್ಪಾಗೆ 6.96 ಕೋಟಿ ದಂಡ, ತಪ್ಪಿದರೆ 6 ವರ್ಷ ಜೈಲು ಶಿಕ್ಷೆ...

Madhu Bangarappa : ಮಧುಬಂಗಾರಪ್ಪಾಗೆ 6.96 ಕೋಟಿ ದಂಡ, ತಪ್ಪಿದರೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ – ಅಷ್ಟಕ್ಕೂ ಶಿಕ್ಷಣ ಸಚಿವರು ಮಾಡಿದ ತಪ್ಪೇನು?!

Hindu neighbor gifts plot of land

Hindu neighbour gifts land to Muslim journalist

Madhu Bangarappa : ರಾಜ್ಯದ ಶಿಕ್ಷಣ ಸಚಿವ (Education Minister) ಮಧು ಬಂಗಾರಪ್ಪ (Madhu Bangarappa) ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣದ ಹಿನ್ನೆಲೆ ಜನಪ್ರತಿನಿಧಿಗಳ ನ್ಯಾಯಾಲಯ ದಂಡ-ಶಿಕ್ಷೆಯನ್ನು ವಿಧಿಸಿರುವ ಘಟನೆ ವರದಿಯಾಗಿದೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ(Cheque Bounce Case) ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ. ಒಂದು ವೇಳೆ ಈ ಮೊತ್ತವನ್ನು ಪಾವತಿಸದಿದ್ದರೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ಕೋರ್ಟ್‌ ನೀಡಿದೆ. 2011ರಲ್ಲಿ ಮಧು ಬಂಗಾರಪ್ಪ ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆಗೆ 6.6 ಕೋಟಿ ರೂಪಾಯಿ ಚೆಕ್ ನೀಡಿದ್ದರಂತೆ. ಆದರೆ ಆ ಚೆಕ್ ಬೌನ್ಸ್ ಆಗಿದ್ದರಿಂದ ಮಧು ಬಂಗಾರಪ್ಪ ವಿರುದ್ಧ ರಾಜೇಶ್ ಎಕ್ಸ್‌ಪೋರ್ಟ್ ಸಂಸ್ಥೆ ದೂರು ನೀಡಿತ್ತು. ಇದೆಲ್ಲದರ ನಡುವೆ ಮಧು ಬಂಗಾರಪ್ಪ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿ 2011ರಲ್ಲಿ ಜನಪ್ರತಿನಿಧಿಗಳ ಕೋರ್ಟ್ ಮಧು ಬಂಗಾರಪ್ಪ ಅವರಿಗೆ ಜಾಮೀನು ಕೂಡ ನೀಡಿದೆ.

ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ 2024ರ ಜನವರಿ 30 ರೊಳಗೆ 6.10 ಕೋಟಿ ರೂ. ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದು, ಅಂದರೆ ತಾನು ಕೊಡಬೇಕಾಗಿರುವ 6.60 ಕೋಟಿ ರೂ.ನಲ್ಲಿ 50 ಲಕ್ಷ ರೂ.ವನ್ನು ಮೊದಲೇ ನೀಡಿರುವ ಹಿನ್ನೆಲೆ 6.10 ಕೋಟಿ ರೂ. ಮಾತ್ರ ನೀಡುವುದಾಗಿ ತಿಳಿಸಿದ್ದರು. ಆದರೆ, ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸದ ಹಿನ್ನೆಲೆ ನ್ಯಾಯಾಧೀಶರಾದ ಜೆ.ಪ್ರೀತ್ ಅವರು ದಂಡ ಮತ್ತು ಶಿಕ್ಷೆಯ ಆದೇಶ ನೀಡಿದ್ದಾರೆ. ಹೀಗಾಗಿ, ಕೋರ್ಟ್‌ ಆದೇಶಿಸಿದ ಆರು ಕೋಟಿ 96 ಲಕ್ಷದ 70 ಸಾವಿರ ರೂಪಾಯಿಯಲ್ಲಿ 10 ಸಾವಿರ ರೂ.ಯನ್ನು ಕೋರ್ಟ್‌ಗೆ ದಂಡದ ರೂಪದಲ್ಲಿ ಮಧು ಬಂಗಾರಪ್ಪ ಅವರು ಪಾವತಿ ಮಾಡಬೇಕು.ದೂರುದಾರರಿಗೆ ಇನ್ನುಳಿದ ಮೊತ್ತವನ್ನು ನೀಡಲು ಕೋರ್ಟ್ ಆದೇಶ ಹೊರಡಿಸಿದೆ.