Home Karnataka State Politics Updates Price rise: ಮನೆ ಕಟ್ಟುವವರಿಗೆ ಬಿಗ್ ಶಾಕ್!! ಸಿಮೆಂಟ್, ಕಬ್ಬಿಣ ಹಾಗೂ ಮರಳಿನ ದರದಲ್ಲಿ ಭಾರೀ...

Price rise: ಮನೆ ಕಟ್ಟುವವರಿಗೆ ಬಿಗ್ ಶಾಕ್!! ಸಿಮೆಂಟ್, ಕಬ್ಬಿಣ ಹಾಗೂ ಮರಳಿನ ದರದಲ್ಲಿ ಭಾರೀ ಏರಿಕೆ

Price rise

Hindu neighbor gifts plot of land

Hindu neighbour gifts land to Muslim journalist

Price rise: ಸ್ವಂತಕ್ಕೊಂದು ಬೆಚ್ಚನೆಯ ಗೂಡಿರಬೇಕು ಎಂಬುದು ಎಲ್ಲರ ಕನಸು. ಆದರೀಗ ಸ್ವಂತ ಸೂರಿನ ಕನಸು ಹೊತ್ತು ಅದನ್ನು ನನಸಾಗಿಸಲು ಹೊರಟವರ ಕೈಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಾದಿರುವ ಕಬ್ಬಿಣ ಬರೆ ಹಾಕುತ್ತಿದ್ದರೆ, ಸುಡುತ್ತಿರುವ ಸಿಮೆಂಟ್ ಅವರ ಕನಸಿಗೇ ಕೊಳ್ಳಿ ಇಡಲು ರೆಡಿಯಾಗಿದೆ.

ಹೌದು, ನಿರಂತರವಾಗಿ ಬೆಲೆ ಏರಿಕೆ(Price rise)ಯಿಂದ ಜನರು ಕಂಗೆಟ್ಟಿರುವಾಗಲೇ ಗೃಹ ನಿರ್ಮಾಣೋದ್ಯಮದ ವಸ್ತುಗಳ ಬೆಲೆಯೂ ದಿಢೀರ್‌ ಏರಿಕೆಯಾಗಲಿದ್ದು, ಮನೆ ಕಟ್ಟುವವರು ಕಂಗಾಲಾಗುವಂತೆ ಮಾಡಿದೆ. ಯಾಕೆಂದರೆ ಸದ್ಯದಲ್ಲೇ ಸಿಮೆಂಟ್‌, ಕಬ್ಬಿಣ ಸೇರಿದಂತೆ ಕಟ್ಟಡ ಸಾಮಾಗ್ರಿಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

ಸಿಮೆಂಟ್ ದರ:

ಇದೀಗ ಕಂಪನಿಗಳು ತಮ್ಮ ವಿತರಕರಿಗೆ ಬೆಲೆಗಳನ್ನು ಹೆಚ್ಚಿಸಲು ಕೇಳಿಕೊಂಡಿದ್ದು, ಸೋಮವಾರದಿಂದ ಅಂದರೆ ಇಂದಿನಿಂದ ಸಿಮೆಂಟ್ ಬೆಲೆಗಳು ಪ್ರತಿ ಚೀಲಕ್ಕೆ 30 ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ, ಸಿಮೆಂಟ್ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ 280-300 ರೂ. ಇದೆ.

ಇದನ್ನೂ ಓದಿ: Winter Seasonನಲ್ಲಿ ಚರ್ಮದ ಸಮಸ್ಯೆ ಒಂದಾ? ಎರಡಾ? ಡೋಂಟ್ ವರಿ ಇಲ್ಲಿದೆ ಸೂಪರ್ ಟಿಪ್ಸ್!

ಕಬ್ಬಿಣದ ಬೆಲೆ:

ಇನ್ನು ಕಬ್ಬಿಣದ ಅದಿರಿನ ಬೆಲೆಗಳ ಹೆಚ್ಚಳವು ಬಾರ್ ಗಳ ಬೆಲೆಗಳ ಮೇಲೂ ಪರಿಣಾಮ ಬೀರಿದೆ. ಚಿಲ್ಲರೆ ವ್ಯಾಪಾರದಲ್ಲಿ, ಬಾರ್ ಗಳು ಪ್ರತಿ ಟನ್ ಗೆ 55,000 ರೂ.ಗೆ ಮಾರಾಟವಾಗುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಅವು 56,000 ರೂ.ಗೆ ಮಾರಾಟವಾಗುತ್ತಿವೆ. ಮುಂದಿನ ದಿನಗಳಲ್ಲಿಯೂ ಇದರ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.

ಮರಳಿನ ಬೆಲೆಯಲ್ಲೂ ಏರಿಕೆ:

ಕೇವಲ ಕಬ್ಬಿಣ ಮತ್ತು ಸಿಮೆಂಟ್ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮರಳಿನ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಮಾರುಕಟ್ಟೆಯಲ್ಲಿ ಬೇಡಿಕೆಯೂ ಕ್ರಮೇಣ ಪ್ರಾರಂಭವಾಗಿದೆ.