Home Karnataka State Politics Updates Beltangady: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಮತ್ತೊಂದು ನಾನ್ ಬೈಲೇಬಲ್ ಕೇಸ್ !

Beltangady: ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಮತ್ತೊಂದು ನಾನ್ ಬೈಲೇಬಲ್ ಕೇಸ್ !

Beltangady

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆಯ ಹಾಗೂ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ. ಕೆಲವು ಸೆಕ್ಷನ್ಗಳ ಅಡಿಯಲ್ಲಿ ನಾನ್ ಬೈ ಲೇಬಲ್ ಪ್ರಕರಣ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅ.29ರಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಹಾಕಿದ ಬ್ಯಾನರ್ ಗಳ ಸಮೀಪ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ಧಕ್ಕೆ ದಕ್ಕೆ ತರುವ ಬ್ಯಾನರ್ ಅಳವಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ನಿವಾಸಿ ಸಂದೀಪ್ ರೈ ನೀಡಿರುವ ದೂರಿನ ಅನುಸಾರ ಪ್ರಕರಣ ದಾಖಲಾಗಿದೆ.

ಪ್ರಾದೇಶಿಕ ಗುಂಪುಗಳ ನಡುವಣ ಸಾಮರಸ್ಯಕ್ಕೆ ದಕ್ಕೆ ಬಾಧಕವಾಗುವಂತಹ ಬರಹಗಳನ್ನು ಹೊಂದಿರುವ ಬ್ಯಾನರ್ ಗಳನ್ನು ಅಳವಡಿಸಿ, ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ ,ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ಧತೆಯನ್ನು ಸೃಷ್ಟಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ ವಿ ಗೌಡ, ಮನೋಹರ್ ಮನ್ನಡ್ಕ,ಮನೋಜ್ ಸಾಲ್ಯಾನ್ ಕುಂಜರ್ಪ, ಮತ್ತು ಇತರರ ವಿರುದ್ಧ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸುವುದಕ್ಕೆ ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಮಹೇಶ್‌ ಶೆಟ್ಟಿ ತಿಮರೋಡಿ, ಅನಿಲ್‌ ಕುಮಾರ್‌ ಅಂತರ, ಕಿರಣ್‌ ಗೌಡ, ಪ್ರಜ್ವಲ್‌ ಕೆ ವಿ ಗೌಡ, ಮನೋಹರ್‌ ಮನ್ನಡ್ಕ, ಮನೋಜ್‌ ಸಾಲ್ಯಾನ್‌ ಕುಂಜರ್ಪ ಮತ್ತು ಇತರರ ವಿರುದ್ಧ ಸಮಾಜದ ಸ್ವಾಸ್ತ್ಯವನ್ನು ಕಡುವಂತಹ ಕೆಟ್ಟದಾಗಿ ಶಬ್ದ ಪ್ರಯೋಗ ಮಾಡಿದಂತಹ, ಬ್ಯಾನರ್‌ ಅಳವಡಿಸುವುದಕ್ಕೆ ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಅಕ್ರ ನಂ 106/2023 ಕಲಂ; 120(B)153(A)153(B) ಐಪಿಸಿ ಯಂತೆ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಸೌಜನ್ಯ ಪರ ಬ್ಯಾನರ್ ತೆಗೆಸಿದ ಕಾರಣಕ್ಕಾಗಿ ಮಹೇಶ್ ಶೆಟ್ಟಿ ಮತ್ತು ತಂಡ ನಿನ್ನೆ ಉಜಿರೆ ಸರ್ಕಲ್ಲಿಗೆ ಆಗಮಿಸಿದ್ದರು. ಆಗ ಪೊಲೀಸರು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಮಧ್ಯೆ ವಾಗ್ಯುದ್ಧ ಉಂಟಾಗಿತ್ತು. ಈಗ ಬೆಳ್ತಂಗಡಿಯಲ್ಲಿ ನಾನ್ ಬೈಲೇಬಲ್ ಕೇಸ್ ದಾಖಲಾಗಿದೆ. ಸೆಕ್ಷನ್ 153(A) ಕೇಸ್ ಹಾಕಿದ್ದಾರೆ ಪೊಲೀಸರು. ಇದು ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಜನರ ಮೇಲೆ ಹಾಕಬಹುದಾದ ಕೇಸು. ಅದನ್ನು ಮಹೇಶ್ ಶೆಟ್ಟಿ ಮೇಲೆ ಯಾಕೆ ಹಾಕುತ್ತಾರೆ? ಈ ಪೋಲೀಸರ ಒಟ್ಟಾರೆ ನಡೆಯೇ ವಿಚಿತ್ರವಾಗಿದ್ದು, ಆತಂಕಕ್ಕೆ ಕಾರಣ ಆಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಶೀಘ್ರವೇ ನೀಡಲಿದ್ದೇವೆ.

ಇದನ್ನು ಓದಿ: Girls lips secrets: ಹುಡುಗರು ಹುಡುಗಿಯರ ತುಟಿ ನೋಡೋದು ಇದೇ ಕಾರಣಕ್ಕಂತೆ!!