Home Karnataka State Politics Updates Ujire: ಕಾಂಗ್ರೆಸ್ ಮುಖಂಡನ ಕಾರಿನ ಮೇಲೆ ದಾಳಿ!

Ujire: ಕಾಂಗ್ರೆಸ್ ಮುಖಂಡನ ಕಾರಿನ ಮೇಲೆ ದಾಳಿ!

Ujire

Hindu neighbor gifts plot of land

Hindu neighbour gifts land to Muslim journalist

Ujire: ಬೆಳ್ತಂಗಡಿ (Belthangady) ತಾಲೂಕಿನ ಉಜಿರೆಯ (Ujire) ಬಳಿ ಇರುವ ಹಳ್ಳಿ ಮನೆ ಬಾರ್ & ರೆಸ್ಟೋರೆಂಟ್ (Halli Mane bar and restaurant) ಮಾಲೀಕ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಫರ್ನಾಂಡೀಸ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ವಿಚಾರ ಸದ್ಯ ಬೆಳಕಿಗೆ ಬಂದಿದೆ.

ಪ್ರವೀಣ್ ಫರ್ನಾಂಡೀಸ್ (Praveen Fernandes) ಅವರು ಎ.30 ರಂದು ರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಉಜಿರೆಯ ಅನುಗ್ರಹ ಶಾಲೆಯ ಬಳಿ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಪರಿಣಾಮ ಕಾರಿನ ಗಾಜು ಒಡೆದು ಹೋಗಿದೆ.

ಪ್ರವೀಣ್ , ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ (Rakshith shivaram) ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಅಲ್ಲದೆ, ರಕ್ಷಿತ್ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದನ್ನು ಸಹಿಸದವರು ಪ್ರವೀಣ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದರು ಎಂದು ಹೇಳಲಾಗಿದೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಿಡಿಗೇಡಿಗಳು ಪ್ರವೀಣ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರವೀಣ್ ಫರ್ನಾಂಡೀಸ್ ಗೆ ಇದು ಮೊದಲ ಬಾರಿ ಅಲ್ಲದೆ, ಹಲವು ಬಾರಿ ಅವರು ಮೇಲೆ ದಾಳಿಯಾಗಿತ್ತು. ಹಾಗಾಗಿ ಸುರಕ್ಷತೆಗಾಗಿ ಸರಕಾರದಿಂದ ಪಿಸ್ತೂಲ್ ಕೂಡ ಪಡೆದುಕೊಂಡಿದ್ದರು ಎನ್ನಲಾಗಿದೆ.
ಆದರೆ, ಚುನಾವಣಾ ಸಂದರ್ಭದಲ್ಲಿ ಪಿಸ್ತೂಲ್ ಸ್ಥಳೀಯ ಠಾಣೆಗೆ ಒಪ್ಪಿಸಲಾಗಿತ್ತು. ಇದನ್ನು ತಿಳಿದ ಕಿಡಿಗೇಡಿಗಳು ಮತ್ತೆ ದಾಳಿ ನಡೆಸಿದ್ದಾರೆ. ಸದ್ಯ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಪ್ರವೀಣ್ ಫರ್ನಾಂಡೀಸ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Bank Charges: ಗ್ರಾಹಕರಿಗೆ ಬಿಗ್​ ಶಾಕಿಂಗ್‌ ನ್ಯೂಸ್‌ ! ಶುಲ್ಕ ಹೆಚ್ಚಳ, ನಿಮ್ಮ ಖಾತೆ ಈ ಬ್ಯಾಂಕ್‌ ನಲ್ಲಿದೆಯೇ ಪರೀಕ್ಷಿಸಿ!!