Home Breaking Entertainment News Kannada Anant Nag: ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರು! ಪಕ್ಷ ಸೇರುವ ನಿರ್ಧಾರ ಬದಲಿಸಿದ್ರಾ?...

Anant Nag: ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರು! ಪಕ್ಷ ಸೇರುವ ನಿರ್ಧಾರ ಬದಲಿಸಿದ್ರಾ? ಹಾಗಿದ್ರೆ ಮುಂದಿನ ನಡೆ ಏನು?

Hindu neighbor gifts plot of land

Hindu neighbour gifts land to Muslim journalist

Actor Anant Nag: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್​ ನಾಗ್( Actor Anant Nag) ನಿನ್ನೆ (ಫೆ.22) ಸಂಜೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ರಾಜ್ಯಾದ್ಯಂತ ಸುದ್ಧಿಯಾಗಿತ್ತು. ಹೀಗಾಗಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ(BJP) ರಾಜ್ಯ ಕಚೇರಿಯತ್ತ ಎಲ್ಲರ ಗಮನವಿತ್ತು. ಆದರೆ ಅನಂತ್ ನಾಗ್​ ಅವರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅನಂತ್​ ನಾಗ್ (Anant Nag) ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅನಂತ್ ನಾಗ್ ಅವರ ಈ ನಡೆ ಎಲ್ಲರಿಗೂ ಅಚ್ಚರಿಮೂಡಿಸಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​(Nalin Kumar kateel) ನೇತೃತ್ವದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದರು. ಇನ್ನು ಅನಂತ್ ನಾಗ್ ಈಗ ಬರ್ತಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂದು ಕಾದು ಕುಳಿತರು. ನಿಗದಿಯಾಗಿದ್ದ ಸಮಯದಂತೆ ಸಂಜೆ 4.30 ಕಳೆದರೂ ಅನಂತ್ ನಾಗ್ ಮಾತ್ರ ಬಿಜೆಪಿ ಕಚೇರಿಯತ್ತ ಬರಲಿಲ್ಲ.

ಕೊನೆ ಕ್ಷಣದಲ್ಲಿ ಅವರು ಪಕ್ಷ ಸೇರ್ಪಡೆಯನ್ನು ಕ್ಯಾನ್ಸಲ್​ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿತು. ನಂತರ ತಿಳಿದ ಮಾಹಿತಿ ಪ್ರಕಾರ ಅವರು ಒಂದು ವಾರದ ಬಳಿಕ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರೊಂದಿಗೆ ಅನಂತ್ ನಾಗ್ ಗೈರಾಗುವ ಮೂಲಕ ಬಿಜೆಪಿ ಸೇರ್ಪಡೆಯಿಂದ ದೂರ ಉಳಿದರಾ? ಎಂಬ ಪ್ರಶ್ನೆ ಮೂಡಿದೆ.

ಶಾಸಕ, ಪರಿಷತ್​ ಸದಸ್ಯರಾಗಿ ರಾಜಕೀಯ ಅನುಭವ ಹೊಂದಿರುವ ಅನಂತ್ ನಾಗ್, ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ 2004ರಲ್ಲಿ ಜೆಡಿಎಸ್​​ನಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲ ಅನುಭವಿಸಿದ್ದರು.