

ಸೋಮವಾರ ಅಲಹಾಬಾದ್ ಹೈಕೋರ್ಟ್ ವಾರಣಾಸಿ ಜಿಲ್ಲಾ ನ್ಯಾಯಾಲಯ ಹಿಂದುಗಳು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ನೀಡಿದ್ದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದಿದ್ದು, ಜ್ಞಾನವಾಪಿಯ ವ್ಯಾಸ್ ತೆಹ್ಖಾನಾದೊಳಗೆ ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಿದೆ.
ಇದನ್ನೂ ಓದಿ: Bantwal: ರಿಕ್ಷಾ ಅಪಘಾತ ಪ್ರಕರಣ; ಪ್ರಕರಣ ದಾಖಲು, ಓರ್ವ ಮೃತ್ಯು
ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಕೆಲವು ದಿನಗಳ ನಂತರ ಹೈಕೋರ್ಟ್ ತೀರ್ಪು ಬಂದಿದೆ. ಫೆಬ್ರವರಿ 15ರಂದು, ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪು ನೀಡಿದೆ. ನ್ಯಾಯಮೂರ್ತಿ ರೋಹಿತ್ ರಂಜನ್ ಅಗ್ರವಾಲ್ ಅವರನ್ನೊಳಗೊಂಡ ನ್ಯಾಯಪೀಠವು ಈ ಪ್ರಕರಣದ ತೀರ್ಪು ನೀಡಿದೆ.
ಜನವರಿ 31ರಂದು ಜಿಲ್ಲಾ ನ್ಯಾಯಾಲಯವು ವ್ಯಾಸ್ ತೆಹ್ಖಾನಾ (ನೆಲಮಾಳಿಗೆಯ) ಒಳಗೆ ಪ್ರಾರ್ಥನೆ ಸಲ್ಲಿಸಲು ಹಿಂದೂ ಪಕ್ಷಕ್ಕೆ ಅನುಮತಿ ನೀಡಿದ ನಂತರ ಮುಸ್ಲಿಂ ಪಕ್ಷವು ಅಲಹಾಬಾದ್ ಹೈಕೋರ್ಟ್ಗೆ ಮೊರೆ ಹೋಯಿತು. ವ್ಯಾಸ್ ತೆಹ್ಖಾನಾ ಮಸೀದಿಯ ನೆಲಮಾಳಿಗೆಯಲ್ಲಿರುವ ನಾಲ್ಕು ‘ತೆಹ್ಖಾನಾಗಳಲ್ಲಿ’ ಒಂದಾಗಿದೆ. ತನ್ನ ತಾಯಿಯ ಅಜ್ಜ ಸೋಮನಾಥ ವ್ಯಾಸ್ ಅವರು 1993ರ ಡಿಸೆಂಬರ್ ವರೆಗೆ ತೆಹಖಾನಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು ಎಂದು ಶೈಲೇಂದ್ರ ಕುಮಾರ್ ಪಾಠಕ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು.













