Home » ಕಾರ್ಕಳ : ರಿಕ್ಷಾದಲ್ಲಿ ಬಂದು ತೋಟದಿಂದ ಅಡಿಕೆ ಕಳ್ಳತನ, ಓರ್ವನ ಬಂಧನ

ಕಾರ್ಕಳ : ರಿಕ್ಷಾದಲ್ಲಿ ಬಂದು ತೋಟದಿಂದ ಅಡಿಕೆ ಕಳ್ಳತನ, ಓರ್ವನ ಬಂಧನ

by Praveen Chennavara
0 comments

ಉಡುಪಿ : ಕಾರ್ಕಳ ತಾಲೂಕಿನ ಕುಂಟಾಡಿಯ ತೋಟವೊಂದರಿಂದ ಅಡಿಕೆಯನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆಟೋ ಚಾಲಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತನನ್ನು ನಿಟ್ಟೆ ಅಂಬಡೆಕಲ್ಲಿನ ಕಾರ್ತಿಕ್(21) ಎಂದು ಗುರುತಿಸಲಾಗಿದೆ.

ಈತ ಕುಂಟಾಡಿಯ ಹರೀಶ್ ಅಮೀನ್ ಎಂಬುವವರ ತೋಟದಿಂದ ಸನೋಜ್ ಹಾಗೂ ಇನ್ನೊಬ್ಬನ ಜತೆ ಸೇರಿಕೊಂಡು ಅಡಿಕೆ ಕಳವು ಮಾಡಿದ್ದರು. ಆಟೋ ಮೂಲಕ ಬಂದು ತೋಟದಲ್ಲಿ ಕಳವು ಮಾಡಿ ಹೋಗಿದ್ದರು.

ಬಂಧಿತ ಆರೋಪಿಯಿಂದ ಸುಮಾರು 25 ಸಾವಿರ ಮೌಲ್ಯದ ಅಡಿಕೆಯ ಹಾಗೂ ಈ ಕೃತ್ಯಕ್ಕೆ ಬಳಸಲಾಗಿದ್ದ ರಿಕ್ಷಾವನ್ನು ವಶಪಡಿಸಲಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment