Home latest World’s Cheapest House: ಕೇವಲ 83ರೂ. ಗೆ ಸಿಗುತ್ತೆ ಸುಂದರ ಮನೆ ; ಅದ್ಭುತ ವೈಶಿಷ್ಟ್ಯತೆ...

World’s Cheapest House: ಕೇವಲ 83ರೂ. ಗೆ ಸಿಗುತ್ತೆ ಸುಂದರ ಮನೆ ; ಅದ್ಭುತ ವೈಶಿಷ್ಟ್ಯತೆ ಹೊಂದಿರೋ ಮನೆ ಖರೀದಿಗೆ ಮುಗಿ ಬಿದ್ದ ಜನ !

World Cheapest House
Image credit: News 18

Hindu neighbor gifts plot of land

Hindu neighbour gifts land to Muslim journalist

World Cheapest House: ಸ್ವಂತ ಮನೆ (House) ಖರೀದಿಸುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ದಿನದಲ್ಲಿ ಮನೆ ಖರೀದಿಸಲು ಮುಂದಾಗಬೇಕಾದರೆ ಕೈಯಲ್ಲಿ ಲಕ್ಷ, ಕೋಟ್ಯಾಂತರ ರೂಪಾಯಿಗಳು ಬೇಕಾಗುತ್ತದೆ. ಜನಸಾಮಾನ್ಯರಿಗೆ ಮನೆ ಖರೀದಿಸುವುದು ಅಥವಾ ಕಟ್ಟುವುದು ಬಹಳ ಕಷ್ಟಕರವಾಗಿದೆ. ಹೀಗಾಗಿ ಹಲವಾರು ಜನರು ಸಾಲ ಸೋಲ ಮಾಡಿ ಮನೆಯನ್ನು ಕಟ್ಟುತ್ತಾರೆ. ಇಂಥ ಜನರಿಗೆ ಈ ವಿಚಾರ ಸಹಿಸುದ್ದಿ ಎಂದೇ ಹೇಳಬಹುದು. ಯಾಕಂದ್ರೆ ಇಲ್ಲಿ ಕೇವಲ ನೂರು ರೂಪಾಯಿ ಒಳಗೆ ಮನೆ ಸಿಗುತ್ತದೆ.

ಹೌದು, ಯುಎಸ್‌ನ (US) ಮಿಶಿಗನ್‌ನಲ್ಲಿ ಮನೆ ಮಾರಾಟಕ್ಕಿದೆ. ಮಿಶಿಗನ್‌ನ ಪಾಂಟಿಯಾಕ್‌ನಲ್ಲಿ ನೆಲೆಗೊಂಡಿರುವ ಈ ಮನೆಯನ್ನು ಅಮೆರಿಕದ (America) ರಿಯಲ್ ಎಸ್ಟೇಟ್ ಕಂಪನಿ ಝಿಲೋ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಮನೆಯ ಬೆಲೆ ಕೇವಲ $1 ಅಂದರೆ ಅಂದಾಜು ರೂ. 83 ಆಗಿದೆ. ಈ ಮನೆಯನ್ನು ವಿಶ್ವದ ಅತ್ಯಂತ ಅಗ್ಗದ ಮನೆ (World Cheapest House) ಎನ್ನಲಾಗಿದೆ.

ಈ ಅಗ್ಗದ ಬೆಲೆಯ ಮನೆಯನ್ನು 1956 ರಲ್ಲಿ ನಿರ್ಮಿಸಲಾಯಿತು. ಈ ಮನೆ 724 ಚದರ ಅಡಿಯಲ್ಲಿದ್ದು, 2 ಮಲಗುವ ಕೋಣೆ, 1-ಬಾತ್‌ರೂಮ್ ಎಲ್ಲವನ್ನೂ ಹೊಂದಿದೆ. ಈ ಮನೆಯನ್ನು ಕಂಪನಿ ಕೇವಲ $1 ಬೆಲೆಗೆ ಮಾರಾಟ ಮಾಡುತ್ತಿದೆ. ಈ ಕೊಡುಗೆಯು ಆಗಸ್ಟ್ 23 ರವರೆಗೆ ಖರೀದಿದಾರರಿಗೆ ಲಭ್ಯವಿದೆ. ಆಗಸ್ಟ್ 23 ರಂದು ಬೆಳಗ್ಗೆ 10 ಗಂಟೆಯವರೆಗೆ ಇರುತ್ತದೆ. ನಂತರ ಮನೆಯ ಬಿಡ್ಡಿಂಗ್ ಅನ್ನು ಮುಚ್ಚಲಾಗುತ್ತದೆ ಎಂದು ಹೇಳಲಾಗಿದೆ.

ಮನೆ ಮತ್ತು ಅದರ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ರಿಯಲ್ ಎಸ್ಟೇಟ್ ಕಂಪನಿ ಮನೆಗೆ ಬಹಳ ವರ್ಷವಾಗಿರಬಹುದು, ಆದರೆ ಇನ್ನೂ ಗಟ್ಟಿಮುಟ್ಟಾಗಿದೆ. ಚಾವಣಿಗಳಲ್ಲಿ ಯಾವುದೇ ಸೋರಿಕೆಯಿಲ್ಲದೆ ಸುಭದ್ರವಾಗಿವೆ. ಈ ಕಟ್ಟಡ ತುಂಬಾ ಹಳೆಯದ್ದಾದರೂ ಎಲ್ಲಾ ಸುರಕ್ಷತೆಗಳನ್ನು ನಿಮಗೆ ನೀಡುತ್ತದೆ ಎಂದು ಕಂಪನಿ ಬರೆದುಕೊಂಡಿದೆ. ಮನೆಯ ಸುತ್ತಲೂ ಕಳೆ, ಗಿಡಗಳು ಬೆಳೆದುಕೊಂಡಿವೆ. ಮನೆಯ ಸುತ್ತಮುತ್ತ ಜಾಗವಿದ್ದು ಗಾರ್ಡ್‌ನ್‌ ಅನ್ನು ನಿರ್ಮಾಣ ಮಾಡಬಹುದು ಎಂದು ಕಂಪನಿ ಹೇಳಿದೆ. ಮನೆಯನ್ನು ಈ ಹಿಂದೆ ಫೆಬ್ರವರಿ 2022 ರಲ್ಲಿ $4,092 ಗೆ ಮಾರಾಟ ಮಾಡಲಾಗಿತ್ತು.

ಇದನ್ನೂ ಓದಿ: Kantara 2: ಕಾಂತಾರ-2 ಸಿನಿಮಾ ಶೂಟಿಂಗ್‌ ಕುರಿತು ಬಿಗ್‌ ಅಪ್ಡೇಟ್‌! ಯಾವಾ ರಿಲೀಸ್‌ ಗೊತ್ತಾ?