Home latest ಉನ್ನತ ಶಿಕ್ಷಣ ಕೊಡಿಸುವುದಾಗಿ ಯುವತಿಯನ್ನು ಪರವೂರಿಗೆ ಕರೆತಂದ ಆರೋಪಿ| ಸಿಸಿಟಿವಿ ಅಳವಡಿಸಿ ಸತತ ಆರು ವರ್ಷದಿಂದ...

ಉನ್ನತ ಶಿಕ್ಷಣ ಕೊಡಿಸುವುದಾಗಿ ಯುವತಿಯನ್ನು ಪರವೂರಿಗೆ ಕರೆತಂದ ಆರೋಪಿ| ಸಿಸಿಟಿವಿ ಅಳವಡಿಸಿ ಸತತ ಆರು ವರ್ಷದಿಂದ ನಿರಂತರ ಅತ್ಯಾಚಾರಗೈದ ಪಾಪಿ|ಯುವತಿಯ ಪತ್ತೆ ಕಥೆಯೇ ರೋಚಕ

Hindu neighbor gifts plot of land

Hindu neighbour gifts land to Muslim journalist

ಯುವತಿಯೊಬ್ಬಳಿಗೆ ಮೋಸ ಮಾಡಿ ಆಕೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಲಕ್ನೋಗೆ ಕರೆ ತಂದಿದ್ದ ಆರೋಪಿಯೋರ್ವ ಬೆಡ್ ರೂಮಿನಲ್ಲಿ ಸಿಸಿಟಿವಿ ಅಳವಡಿಸಿ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ.

ಸತತ ಆರು ವರ್ಷಗಳಿಂದ ಯುವತಿಯನ್ನು ಒತ್ತೆಯಾಳನ್ನಾಗಿಸಿದ್ದಾನೆ ಈ ಆರೋಪಿ. ನಕಲಿ ಅಂಕಪಟ್ಟಿ ತಯಾರಿ ಪ್ರಕರಣದಲ್ಲಿ ಆರೋಪಿ ಮನೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆ ನಂತರ ತಿಳಿದದ್ದೇ ಯುವತಿಯನ್ನು ಒತ್ತೆಯಾಳನ್ನಾಗಿಸಿದ ಪ್ರಕರಣ.

ಪೀಡಿತ ಯುವತಿ 22 ವರ್ಷ ವಯಸ್ಸು. ಆಕೆಗೆ 2 ವರ್ಷದ ಮಗು ಇದೆ. ಉನ್ನತ ಶಿಕ್ಷಣ ಕೊಡಿಸುವುದಾಗಿ ಮನೀಶ್, ಯುವತಿಯನ್ನು ಇಲ್ಲಿಗೆ ಕರೆತಂದಿದ್ದ. ಆದರೆ ಅನಂತರ ಆತ ಮಾಡಿದ್ದು ಊಹಿಸಲಾಗದ ಕಟು ಸತ್ಯ. ಶಿಕ್ಷಣ ಕೊಡಿಸದೆ ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾನೆ.

ವಿಷಯ ಯಾರಿಗಾದರೂ ಹೇಳಿದರೆ ವೀಡಿಯೋ‌ ಲೀಕ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದನಂತೆ. ಬಾತ್ ರೂಂ ಹಾಗೂ ಬೆಡ್ ರೂಂ ನಲ್ಲಿ ಸಿಸಿಟಿವಿ ಹಾಕಿದ್ದ ಈ ಆರೋಪಿ.

ಮಹಿಳಾ ಅಧಿಕಾರಿಗಳು ಯುವತಿಯ ಸಂಪರ್ಕದಲ್ಲಿದ್ದು, ಆಕೆಯನ್ನು ಮನೆಯವರಿಗೆ ತಲುಪಿಸುವ ಕೆಲಸ ‌ನಡೆಯುತ್ತಿದೆ. ಯುವತಿ ಮನೀಶ್ ಬಂಧನವಾಗಿದೆ ಎಂದ ಮೇಲೆ ಬಾಯ್ಬಿಟ್ಟಿದ್ದಾಳೆ.

ಈ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಮನೀಶ್ ಮೇಲೆ ಅತ್ಯಾಚಾರ ಹಾಗೂ ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.