Home latest FD Rates: ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?

FD Rates: ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?

Business Graph with arrow and coins showing profits and gains

Hindu neighbor gifts plot of land

Hindu neighbour gifts land to Muslim journalist

ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಉತ್ತಮ ಅಭ್ಯಾಸವಾಗಿದೆ. ನಾಳಿನ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ಈ ಹೂಡಿಕೆ ನೆರವಾಗುತ್ತದೆ. ಹಿರಿಯ ನಾಗರಿಕರ ಹೂಡಿಕೆಗೆ ಸ್ಥಿರ ಠೇವಣಿ (FD) ಕೂಡ ಒಂದು ಉತ್ತಮ ಆಯ್ಕೆಯಾಗಿದ್ದು, ಎಸ್​ಬಿಐ (SBI), ಎಚ್​ಡಿಎಫ್​ಸಿ (HDFC), ಐಸಿಐಸಿಐ ಬ್ಯಾಂಕ್​ (ICICI Bank) ಹಾಗೂ ಇತರ ಕೆಲವು ಬ್ಯಾಂಕ್​ಗಳು ಕಳೆದ ಕೆಲವು ತಿಂಗಳುಗಳಲ್ಲಿ ಹಿರಿಯ ನಾಗರಿಕರ ಮತ್ತು ಜನಸಾಮಾನ್ಯರ ಎಫ್​ಡಿ ಬಡ್ಡಿ ದರವನ್ನು (FD Rates) ಏರಿಕೆ ಮಾಡಿದೆ.

ಆರ್​ಬಿಐ ರೆಪೊ ದರ ಹೆಚ್ಚಿಸಿದ ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರಗಳ ಮಾಹಿತಿ ತಿಳಿದಿರುವುದು ಅವಶ್ಯ

ಆರ್​ಬಿಐ ಮೇ ತಿಂಗಳ ಬಳಿಕ ಈವರೆಗೆ ಒಟ್ಟಾರೆಯಾಗಿ ರೆಪೊ ದರವನ್ನು 225 ಮೂಲಾಂಶ ಹೆಚ್ಚಳ ಮಾಡಿದ್ದು, ಇದರ ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಜೊತೆಗೆ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ವ್ಯತ್ಯಾಸವಾಗಿದ್ದು, ಬಡ್ಡಿದರ ಹೆಚ್ಚಳ ಕಂಡಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರದ ಮಾಹಿತಿ ಹೀಗಿವೆ:

ಎಸ್​ಬಿಐ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ ಹೀಗಿದೆ:

ಎಸ್​​ಬಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 7.25ರ ಬಡ್ಡಿ ನೀಡುತ್ತಿದ್ದು, ಹಿರಿಯ ನಾಗರಿಕರ ಎಲ್ಲ ಅವಧಿಯ ಎಫ್​ಡಿಗೆ ಎಸ್​ಬಿಐ ಬ್ಯಾಂಕ್ 50 ಮೂಲಾಂಶದಷ್ಟು ಹೆಚ್ಚು ಹೆಚ್ಚುವರಿ ಬಡ್ಡಿ ಕೊಡುತ್ತಿದೆ. ಇತ್ತೀಚೆಗೆ ಬಡ್ಡಿ ದರವನ್ನು ಪರಿಷ್ಕರಿಸಿದ ಬಳಿಕ, 7 ದಿನಗಳಿಂದ ಆರಂಭವಾಗಿ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಎಸ್​ಬಿಐ ಶೇಕಡಾ 3.5ರಿಂದ 7.25ರ ವರೆಗೆ ಬಡ್ಡಿ ನೀಡಲಾಗುತ್ತಿದೆ. ಡಿಸೆಂಬರ್ 13ರಿಂದ ಈ ಬಡ್ಡಿ ದರಗಳು ಚಾಲ್ತಿಯಲ್ಲಿವೆ.

1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
2 ವರ್ಷ ಮೇಲ್ಪಟ್ಟು 3 ವರ್ಷಗಳಿಂದ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
5 ವರ್ಷಗಳಿಂದ 10 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ ದರ – 7.25%

ಎಚ್​ಡಿಎಫ್​ಸಿ ಬ್ಯಾಂಕ್​ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ ಹೀಗಿವೆ:


ಎಚ್​​ಡಿಎಫ್​ಸಿ ಬ್ಯಾಂಕ್​ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.75ರ ವರೆಗೆ ಬಡ್ಡಿ ನೀಡುತ್ತಿದೆ. ಪರಿಷ್ಕೃತ ಬಡ್ಡಿ ದರ ಡಿಸೆಂಬರ್ 14ರಿಂದ ಜಾರಿಯಾಗಿದೆ.

1 ವರ್ಷದಿಂದ 15 ತಿಂಗಳವರೆಗಿನ ಎಫ್​ಡಿ ಬಡ್ಡಿ – 7.00%
15 ತಿಂಗಳುಗಳಿಂದ 18 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.50%
18 ತಿಂಗಳುಗಳಿಂದ 21 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.00%
21 ತಿಂಗಳುಗಳಿಂದ 2 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
2 ವರ್ಷ 1 ದಿನದಿಂದ 3 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
3 ವರ್ಷ 1 ದಿನದಿಂದ ಆರಂಭವಾಗಿ 5 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ – 7.50%
5 ವರ್ಷ 1 ದಿನದಿಂದ ಆರಂಭವಾಗಿ 10 ವರ್ಷಗಳ ವರೆಗಿನ ಎಫ್​​ಡಿ ಬಡ್ಡಿ – 7.75%

ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ ಹೀಗಿವೆ:

ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.50 ವರೆಗೆ ಬಡ್ಡಿ ನೀಡುತ್ತಿದ್ದು, ಡಿಸೆಂಬರ್ 16ರಿಂದ ಈ ಬಡ್ಡಿ ದರ ಚಾಲ್ತಿಯಲ್ಲಿದೆ.

1 ವರ್ಷದಿಂದ 389 ದಿನಗಳ ಅವಧಿಯ ಎಫ್​​ಡಿ ಬಡ್ಡಿ ದರ – 7.10%
390 ದಿನಗಳಿಂದ 15 ತಿಂಗಳ ಅವಧಿಯ ಎಫ್​ಡಿ ಬಡ್ಡಿ ದರ – 7.10%
15 ತಿಂಗಳುಗಳಿಂದ 18 ತಿಂಗಳ ವರೆಗಿನ ಅವಧಿಯ ಎಫ್​ಡಿ ಬಡ್ಡಿ ದರ – 7.50%
18 ತಿಂಗಳುಗಳಿಂದ 2 ವರ್ಷಗಳ ವರೆಗಿನ ಅವಧಿಯ ಎಫ್​ಡಿ ಬಡ್ಡಿ ದರ – 7.50%
2 ವರ್ಷ 1 ದಿನದಿಂದ 3 ವರ್ಷಗಳ ಅವಧಿಯ ಬಡ್ಡಿ ದರ – 7.50%
3 ವರ್ಷ 1 ದಿನದಿಂದ 5 ವರ್ಷಗಳ ವರೆಗಿನ ಅವಧಿಯ ಎಫ್​ಡಿ ದರ – 7.50%
5 ವರ್ಷ 1 ದಿನದಿಂದ 10 ವರ್ಷಗಳ ವರೆಗಿನ ಅವಧಿಯ ಎಫ್​ಡಿ ದರ – 7.50%
5 ವರ್ಷಗಳ ಅವಧಿಯ (80ಸಿ ಎಫ್​ಡಿ) ಗರಿಷ್ಠ 1.50 ಲಕ್ಷ ರೂ.ವರೆಗಿನ ಎಫ್​ಡಿ ಬಡ್ಡಿ ದರ – 7.50%