Home Interesting ಕಂಠ ಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಎದುರು ಶ್ರೀಮನ್ನಾರಾಯಣನ ಪೋಸ್ ನಲ್ಲಿ ಮಲಗಿದ ಗ್ರಾಮಲೆಕ್ಕಾಧಿಕಾರಿ !!|...

ಕಂಠ ಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಎದುರು ಶ್ರೀಮನ್ನಾರಾಯಣನ ಪೋಸ್ ನಲ್ಲಿ ಮಲಗಿದ ಗ್ರಾಮಲೆಕ್ಕಾಧಿಕಾರಿ !!| ಬೇಜವಾಬ್ದಾರಿ ತೋರಿದ ಅಧಿಕಾರಿಯ ವಿರುದ್ಧ ವ್ಯಾಪಕ ಆಕ್ರೋಶ- ಫೋಟೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಸಮಾಜ ಬೆಳವಣಿಗೆಯತ್ತ ಮುಖಮಾಡಿದೆ. ಒಂದಲ್ಲ ಒಂದು ರೀತಿಯ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರದಲ್ಲೂ ನಡೆಯುತ್ತಲೇ ಇದೆ. ಆದರೆ ಇಲ್ಲಿ ಮುಖ್ಯವಾಗಿ ಇರುವುದು ಯಾವ ಕೆಲಸ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದು. ಯಾಕಂದ್ರೆ ಅದೆಷ್ಟೋ ಅಧಿಕಾರಿಗಳು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದಾರೆ. ಆದ್ರೆ ಅವರ ಕೆಲಸ ಮಾತ್ರ ಅಗೌರವ ತೋರುವಂತದ್ದು.

ಹೌದು. ಇದೀಗ ಅಂತಹುದೇ ಒಂದು ಘಟನೆ ಬೆಳಗಾವಿ ಸವದತ್ತಿ ತಾಲೂಕಿನಲ್ಲಿ ನಡೆದಿದ್ದು, ಗ್ರಾಮಸ್ಥರಿಗೆ ಅರಿವು ಮೂಡಿಸಬೇಕಾದ ಗ್ರಾಮಲೆಕ್ಕಾಧಿಕಾರಿಯ ಕರ್ತವ್ಯ ನಿಷ್ಠೆ ಏನೆಂಬುದು ನೀವೇ ನೋಡಿ. ಹುದ್ದೆಗೆ ತಕ್ಕಂತೆ ವರ್ತಿಸಬೇಕಾದ ಇವರು, ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ತಹಶೀಲ್ದಾರ್ ಕಚೇರಿ ಮುಂದೆ ಶ್ರೀಮನ್ನಾರಾಯಣನ ಪೋಸ್ ನಲ್ಲಿ ಮಲಗಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಸಂಜು ಬೆಣ್ಣಿ ಎಂಬುವವರು ಮದ್ಯಪಾನ ಮಾಡಿ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ಮಲಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿಯ ಬೇಜವಾಬ್ದಾರಿ ತೋರಿದ ಅಧಿಕಾರಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುಡುಕ ಗ್ರಾಮ ಲೆಕ್ಕಾಧಿಕಾರಿಯ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದಲ್ಲದೆ,ಕುಡಿದು ಮಲಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇಂತಹ ಅಧಿಕಾರಿಯಿಂದ ಏನು ಪ್ರಯೋಜನ!? ಎಂಬ ಹಲವಾರು ಮಾತುಗಳು ಹೊರಬೀಳುತ್ತಿದೆ. ಒಟ್ಟಾರೆಯಾಗಿ ಇನ್ನು, ಈ ಅಧಿಕಾರಿ ಮೇಲೆ ಮೇಲಾಧಿಕಾರಿಗಳು ಯಾವ ರೀತಿಯ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.