Home News ಭಾರತದ ಶಾಸಕಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ “ಅವಳು” ಮತ್ತು “ಅವಳ”ಗೆ ಸ್ಥಾನ!

ಭಾರತದ ಶಾಸಕಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ “ಅವಳು” ಮತ್ತು “ಅವಳ”ಗೆ ಸ್ಥಾನ!

Hindu neighbor gifts plot of land

Hindu neighbour gifts land to Muslim journalist

ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯಲ್ಲಿ ಕೇಂದ್ರ ಸರ್ಕಾರವು ಮಹತ್ತರವಾದ ಬದಲಾವಣೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ ಸ್ತ್ರೀಲಿಂಗದ ಪದ ಬಳಕೆಗೆ ಅವಕಾಶ ನೀಡಿದೆ.

ಇಲ್ಲಿಯವರೆಗೆ ಮಸೂದೆಯಲ್ಲಿ ಸ್ತ್ರೀಲಿಂಗದ ಪದ ಬಳಕೆಯಲ್ಲಿ ಇರಲಿಲ್ಲ. ಇದೀಗ “ಅವಳು” ಮತ್ತು “ಅವಳ” ಎಂಬ ಸರ್ವನಾಮಗಳನ್ನು ಬಳಸುವ ಮೂಲಕ, ಇತಿಹಾಸದಲ್ಲಿ ಮೊದಲ ಬಾರಿಗೆ ಲಿಂಗವನ್ನು ಲೆಕ್ಕಿಸದೆ ಈ ಸರ್ವನಾಮಗಳ ವಿಶೇಷ ಬಳಕೆಯನ್ನು ಭಾರತದ ಶಾಸಕಾಂಗ ಇತಿಹಾಸದಲ್ಲಿ ಮಾಡಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿದ್ದಾರೆ. “ಅವಳ” ಮತ್ತು “ಅವಳು” ಎಂಬ ಸರ್ವನಾಮಗಳನ್ನು ಒಬ್ಬ ವ್ಯಕ್ತಿಗೆ ಲಿಂಗವನ್ನು ಲೆಕ್ಕಿಸದೆ ಬಳಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ. ಅಶ್ವಿನಿ ವೈಷ್ಣವ್ ಅವರು ಕರಡು ಮಸೂದೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉದ್ದೇಶಿತ ಕಾನೂನಿನ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಮಸೂದೆಯು ಕಾನೂನಾದರೆ, ಇದು ಭಾರತದ ಪ್ರದೇಶದೊಳಗೆ ಡಿಜಿಟಲ್ ವೈಯಕ್ತಿಕ ಡೇಟಾದ ಪ್ರಕ್ರಿಯೆಗೆ ಅನ್ವಯಿಸುತ್ತದೆ. ಈ ವರ್ಷದ ಆಗಸ್ಟ್‌ನಲ್ಲಿ ಸರ್ಕಾರದಿಂದ ಹಿಂತೆಗೆದುಕೊಂಡ ಡೇಟಾ ಸಂರಕ್ಷಣಾ ಮಸೂದೆಯ ಬದಲಿಗೆ ಈ ಹೊಸ ಪ್ರಸ್ತಾವಿತ ಮಸೂದೆಯು ಬಂದಿರುವುದಾಗಿ ಅವರು ಹೇಳಿದ್ದಾರೆ.