Home News TTD : ಹಿರಿಯ ನಾಗರಿಕರಿಗೆ ಟಿಟಿಡಿ ನೀಡಿದೆ ಗುಡ್ ನ್ಯೂಸ್ !!!

TTD : ಹಿರಿಯ ನಾಗರಿಕರಿಗೆ ಟಿಟಿಡಿ ನೀಡಿದೆ ಗುಡ್ ನ್ಯೂಸ್ !!!

Hindu neighbor gifts plot of land

Hindu neighbour gifts land to Muslim journalist

ಹಿರಿಯ ನಾಗರಿಕರಿಗೆ ನಾವು ನಮ್ಮ ಕೈಲಾದ ಸಹಾಯ ಮಾಡವುದು ನಮ್ಮ ಧರ್ಮ. ಹಿರಿಯರು ನಮ್ಮ ಮಾರ್ಗದರ್ಶಕರು ಹೌದು. ಈ ನಿಟ್ಟಿನಲ್ಲಿ ಹಿರಿಯರು ಮತ್ತು ಅಂಗವಿಕಲರು ದೈಹಿಕ ಅಸಮರ್ಥರು ಆಗಿರುವ ಕಾರಣ ತಿರುಮಲ ತಿರುಪತಿಯ ಉಚಿತ ದರ್ಶನ ಟಿಕೆಟ್ ನ್ನು ಆನ್‌ಲೈನ್ ಬಿಡುಗಡೆಯ ಪ್ರಮುಖ ಘೋಷಣೆ ಮಾಡಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನಂ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸಿಹಿಸುದ್ದಿ ನೀಡಿದೆ. ಅವರ ಕೋಟಾದಡಿ ನವೆಂಬರ್ ತಿಂಗಳಲ್ಲಿ ಆನ್‌ಲೈನ್ ದರ್ಶನ ಟಿಕೆಟ್‌ಗಳು ಲಭಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ತಿರುಮಲ ತಿರುಪತಿ ದೇವಸ್ಥಾನಂ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಸಿಹಿಸುದ್ದಿ ನೀಡಿದೆ. ಅವರ ಕೋಟಾದ ಅಡಿಯಲ್ಲಿ, ನವೆಂಬರ್ ತಿಂಗಳ ಆನ್‌ಲೈನ್ ದರ್ಶನ ಟಿಕೆಟ್‌ಗಳನ್ನು ಅಕ್ಟೋಬರ್ 26 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಶ್ರೀ ವೇಂಕಟೇಶ್ವರನ ಭಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಟಿಟಿಡಿ ತಿಳಿಸಿದೆ. ಮತ್ತೊಂದೆಡೆ ಆಡಳಿತಾತ್ಮಕ ಕಾರಣಗಳಿಂದ ವಿಶೇಷ ದರ್ಶನ ಟಿಕೆಟ್ (ರೂ. 300) ಎಂದು ತಿಳಿಸಿದೆ.

ತಿರುಮಲ ವಸತಿ ಡಿಸೆಂಬರ್ ಕೋಟಾವನ್ನು ಈ ತಿಂಗಳ 26 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲತಃ ಈ ಟಿಕೆಟ್‌ಗಳನ್ನು ಅಕ್ಟೋಬರ್ 27 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಒಂದು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.

ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ಕಿಂಗ್ ವಿಧಾನ :

  • ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು.
  • ವಯೋಮಿತಿ 65 ವರ್ಷಕ್ಕಿಂತ ಹೆಚ್ಚಿಗೆ ಇರಬೇಕು.
  • ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ ಕಾಪಿ ಒದಗಿಸಬೇಕು.
  • ಉಚಿತ ದರ್ಶನ ಟಿಕೆಟ್
  • ಹಿರಿಯ ನಾಗರಿಕರ ಜೊತೆಗಿರಲು ಒಬ್ಬ ವ್ಯಕ್ತಿಗೆ ಅನುಮತಿಯಿದೆ.
  • ಜೊತೆಗಾರರಾಗಿ ಸಂಗಾತಿಗೆ ಮಾತ್ರವೇ ಅನುಮತಿ ಇದೆ
  • 80 ವರ್ಷ ಮೇಲ್ಪಟ್ಟವರ ಸಹಾಯಕರಿಗೂ (ಜೊತೆಗಾರ) ಅನುಮತಿ ನೀಡಲಾಗುತ್ತದೆ

ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಿಮ್ಮಪ್ಪನ ದರ್ಶನಕ್ಕೆ ಉಚಿತ ಟಿಕೆಟ್ ಬುಕ್ಕಿಂಗ್ ಮಾಡಲು ಈ ಮೇಲಿನ ಷರತ್ತುಗಳು ಕಡ್ಡಾಯವಾಗಿ ಅನ್ವಯ ಆಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.