Home latest ಆತ್ಮ ನಿರ್ಭರದತ್ತ ಭಾರತ ಮತ್ತೊಂದು ಹೆಜ್ಜೆ | HALನ ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ...

ಆತ್ಮ ನಿರ್ಭರದತ್ತ ಭಾರತ ಮತ್ತೊಂದು ಹೆಜ್ಜೆ | HALನ ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ಇಂದು ಲೋಕಾರ್ಪಣೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಜ್ಜೆಗೆ ಕರ್ನಾಟಕ ಸಾಕ್ಷಿಯಾಗಲು ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ತುಮಕೂರಿನ ಗುಬ್ಬಿಯಲ್ಲಿ ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ಇಂದು ಲೋಕಾರ್ಪಣೆಯಾಗಲಿದೆ.

ತುಮಕೂರಿನಲ್ಲಿ ಸುಮಾರು 615 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌)ನ ದೇಶದ ಅತಿದೊಡ್ಡ ಹೆಲಿಕಾಪ್ಟರ್‌ ತಯಾರಿ ಕಾರ್ಖಾನೆ ಫೆ. 6ರಂದು ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಗಣ್ಯರು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.

ಗ್ರೀನ್‌ಫೀಲ್ಡ್‌ ಹೆಲಿಕಾಪ್ಟರ್‌ ನಿರ್ಮಾಣ ಕಾರ್ಖಾನೆ ಇದಾಗಿದ್ದು, ದೇಶೀಯವಾಗಿ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿರುವ ಹೆಲಿಕಾಪ್ಟರ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಆರಂಭಿಕ ಹಂತದಲ್ಲಿ ಹಲವು ವೈಶಿಷ್ಟಗಳನ್ನು ಒಳಗೊಂಡ ಅತ್ಯಾಧುನಿಕ ಲಘು ಬಹುಪಯೋಗಿ ಹೆಲಿಕಾಪ್ಟರ್‌ (ಎಲ್‌ಯುಎಚ್‌)ಗಳ ನಿರ್ಮಿಸಲು ಉದ್ದೇಶಿಸಿದ್ದು, ವಾರ್ಷಿಕ 30 ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗಿ ಹಾರಾಟ ನಡೆಸಲಿವೆ.

ಉದ್ದೇಶಿತ ಕಾರ್ಖಾನೆಯು ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌)ಗಳು, ಭಾರತೀಯ ಬಹುಉದ್ದೇಶಿತ ಹೆಲಿಕಾಪ್ಟರ್‌ (ಐಎಂಆರ್‌ಎಚ್‌)ಗಳನ್ನು ನಿರ್ಮಿಸುವ ಸಾಮರ್ಥ್ಯ ಕೂಡ ಹೊಂದಿದೆ.

ಇದು ಎಲ್‌ಸಿಎಚ್‌, ಎಲ್‌ಯುಎಚ್‌, ನಾಗರಿಕ ಸುಧಾರಿತ ಲಘು ಹೆಲಿಕಾಪ್ಟರ್‌ಗಳ ನಿರ್ವಹಣೆ, ರಿಪೇರಿ, ಕೂಲಂಕಷ ಪರೀಕ್ಷೆ ಮತ್ತಿತರ ಸೌಲಭ್ಯಗಳನ್ನೂ ಒಳಗೊಂಡಿದ್ದು, ಎಲ್‌ಯುಎಚ್‌ಗಳ ರಫ್ತು ಸಾಮರ್ಥ್ಯ ಕೂಡ ಇದು ಹೊಂದಿದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು,ಇದೀಗ 2023ಕ್ಕೆ ಲೋಕಾರ್ಪಣೆಗೆ ಸಿದ್ದವಾಗಿದೆ.