Home News ಲಿಫ್ಟ್‌ನಲ್ಲಿ ಸಿಕ್ಕಾಕ್ಕೊಂಡ ಮೂರು ಮಕ್ಕಳು | ವೀಡಿಯೋ ವೈರಲ್‌

ಲಿಫ್ಟ್‌ನಲ್ಲಿ ಸಿಕ್ಕಾಕ್ಕೊಂಡ ಮೂರು ಮಕ್ಕಳು | ವೀಡಿಯೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

ಆಧುನಿಕ ಜೀವನ ಶೈಲಿಯಲ್ಲಿ ಯಾವಾಗ ಯಾವ ರೀತಿ ಆಪತ್ತು ಬರುತ್ತದೆ ಎನ್ನಲು ಸಾಧ್ಯವಿಲ್ಲ. ನಗರದಲ್ಲಿ ಸಾಮಾನ್ಯವಾಗಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ 7-8 ಅಂತಸ್ತು ಹೊಂದಿರುವ ಪ್ಲಾಟ್ ಹತ್ತಲು ಲಿಫ್ಟ್ ನ್ನು ಬಳಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಏನಾಗಿದೆ ನೋಡಿ. ಸುಮಾರು ಅರ್ಧ ಗಂಟೆ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ಮೂವರು ಪುಟ್ಟ ಮಕ್ಕಳು ಅಪಾಯದಿಂದ ಪಾರಾದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಸುಮಾರು 8-10 ವರ್ಷ ವಯಸ್ಸಿನ ಹುಡುಗಿಯರು ಗಾಜಿಯಾಬಾದ್‌ನ ಕ್ರಾಸಿಂಗ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿರುವ ಅಸೋಟೆಕ್ ದಿ ನೆಸ್ಟ್ ಸೊಸೈಟಿಯ ಲಿಫ್ಟ್ ನಲ್ಲಿ ಸುಮಾರು 25 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು.

ಈಗಾಗಲೇ ಈ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ವಿಡಿಯೋದಲ್ಲಿ ಮೂವರು ಬಾಲಕಿಯರು ಲಿಫ್ಟ್‌ನಲ್ಲಿ ಸಿಲುಕಿಕೊಂಡು ಒದ್ದಾಡುವ ದೃಶ್ಯ ಸೆರೆಯಾಗಿದೆ. ಆ ಮೂವರು ಹುಡುಗಿಯರಲ್ಲಿ ಒಬ್ಬರು ತುರ್ತು ಸೇವೆಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಮತ್ತು ಇತರ ಇಬ್ಬರು ಸ್ನೇಹಿತರು ಆಕೆಯನ್ನು ಸಮಾಧಾನಪಡಿಸುತ್ತಿದ್ದರು.

ಈ ಭಯಾನಕ ಘಟನೆಯ ನಂತರ, ಮಕ್ಕಳ ಪೋಷಕರು ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ನಿರ್ವಹಣಾ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು, ಕಳಪೆ ನಿರ್ವಹಣೆಯಿಂದ ಲಿಫ್ಟ್ ಒಡೆದುಹೋಗಿದೆ ಎಂದು ಆರೋಪಿಸಿದ್ದಾರೆ.

ಸದ್ಯ ಏನು ಅಪಾಯ ಆಗದೆ ಮಕ್ಕಳು ಪಾರಾಗಿದ್ದಾರೆ. ಸದ್ಯ ಭಯಗೊಂಡ ಮಕ್ಕಳನ್ನು ಸಮಾಧಾನ ಪಡಿಸಲಾಗಿದೆ. ಪೋಷಕರು ಈ ಘಟನೆಯಿಂದ ಆಕ್ರೋಶ ಗೊಂಡಿದ್ದಾರೆ.