Home News Human feces: ಯಬ್ಬೋ.. ನಿಮ್ಮ ಮಲವನ್ನೂ ಕೊಂಡುಕೊಳ್ಳುತ್ತೆ ಈ ಕಂಪೆನಿ – ನೀವು ಮಾಡೋ ಕಕ್ಕಾ...

Human feces: ಯಬ್ಬೋ.. ನಿಮ್ಮ ಮಲವನ್ನೂ ಕೊಂಡುಕೊಳ್ಳುತ್ತೆ ಈ ಕಂಪೆನಿ – ನೀವು ಮಾಡೋ ಕಕ್ಕಾ ಕೊಟ್ಟು ಕೋಟಿ ಕೋಟಿ ಪಡೀಬಹುದು !!

Human feces

Hindu neighbor gifts plot of land

Hindu neighbour gifts land to Muslim journalist

Human feces: ಇಂದು ಅನೇಕರು ಸಾವಯವ ಕೃಷಿಗಳನ್ನು ನಂಬಿ ಬದುಕುತ್ತಿದ್ದಾರೆ. ಇದಕ್ಕೆ ಹಸು, ಕುರಿ, ಕೋಳಿ, ಮೇಕೆಗಳ ಸಗಣಿಯನ್ನು ಸಾವಿರಾರುಪಾಯಿ ಕೊಟ್ಟು ರೈತರು, ಕೃಷಿಕರು ಖರೀದಿಸುತ್ತಿದ್ದಾರೆ. ಇದೇನು ವಿಶೇಷ ಅಲ್ಲ ಬಿಡಿ. ಆದರೆ ವಿಚಿತ್ರ ಎಂದರೆ ಮನುಷ್ಯರ ಮಲವನ್ನೂ(Human feces) ಕೂಡ ಇಂದು ಕೋಟಿಗಟ್ಟಲೆ ಕೊಟ್ಟು ಈ ಒಂದು ಕಂಪನಿ ಖರೀದಿಸುತ್ತದೆ ಎಂದರೆ ನೀವು ನಂಬುತ್ತೀರಾ?

ಹೌದು, ಇಂದು ಮನುಷ್ಯರು ಮಾಡುವ ಪೀ.. ಗೂ ಸಾಕಷ್ಟು ಡಿಮ್ಯಾಂಡ್ ಇದೆ ಅಂದ್ರೆ ನಂಬಲು ಸಾಧ್ಯವೇ. ಕೇಳಿದ ಕೂಡಲೇ ವ್ಯಾಕ್, ಛೀ, ಥೂ ಅಂದುಬಿಡ್ತೀರಾ. ಆದರೆ ಇದು ನೂರಕ್ಕೆ ನೂರರಷ್ಟು ಸತ್ಯ. ಇಂದು ನಮ್ಮ ಮಲಕ್ಕೂ ಭಾರೀ ಬೆಲೆ ಬಂದಿದೆ. ಅಮೆರಿಕಾ ಹಾಗೂ ಕೆನಡಾದಲ್ಲಿ ಕಾರ್ಯಾಚರಿಸುವ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿ (stool donors)ಗಳಿಗೆ 500(41, 657) ಡಾಲರ್ ಹಣ ನೀಡುತ್ತಿದೆ. ಅಂದರೆ ನಮ್ಮ ಮಲವನ್ನು ದುಡ್ಡು ಕೊಟ್ಟು ಖರೀದಿಸುತ್ತಿದೆ. ಇದರಿಂದ ನೀವು ಒಂದು ವರ್ಷದಲ್ಲಿ ಕೋಟ್ಯಾದಿಪತಿಗಳಾಗಬುಹುದು. ಅಂದ್ರೆ ನಿಮ್ಮ ಕಕ್ಕವೇ ನಿಮ್ಮನ್ನು ಕೋಟ್ಯಾದೀಶ್ವರರನ್ನಾಗಿ ಮಾಡುತ್ತೆ !!

ಅಂದಹಾಗೆ ಹ್ಯೂಮನ್ ಮೈಕ್ರೋಬ್ಸ್ ಎಂಬ ಈ ಸಂಸ್ಥೆ ಪ್ರಪಂಚದಾದ್ಯಂತ ದಾನಿಗಳಿಂದ ಅವರು ನೀಡುವ ಮಲದ ಸ್ಯಾಂಪಲ್‌ನ್ನು ಪಡೆಯುತ್ತದೆ. ದಿನವೂ ನೀವು ಹೀಗೆ ಕೊಡುವುದಾದರೆ ನಿಮ್ಮ ಮಲದಿಂದಲೇ ನೀವು ಕೋಟ್ಯಾಧಿಪತಿ ಆಗುವುದು ಗ್ಯಾರಂಟಿ, ಏಕೆಂದರೆ ದಿನಕ್ಕೆ 500 ಡಾಲರ್‌ ನೀಡಿದರೆ 360 ದಿನಕ್ಕೆ ನಿಮಗೆ ಸುಮಾರು 180,000 ಡಾಲರ್‌ ಸಿಗಲಿದ್ದು, ಇದನ್ನು ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿದರೆ ಕೇವಲ ಒಂದು ವರ್ಷದಲ್ಲೇ ನಿಮಗೆ ಒಂದು ಕೋಟಿ 50 ಲಕ್ಷದ 462 ರೂಪಾಯಿಗಳು ಸಿಗಲಿವೆ!

ಇದನ್ನು ಓದಿ: Actor Rishab Shetty: ಪೋಲೀಸರಿಂದ ಗೋವಾದಿಂದ ಬರುತ್ತಿದ್ದ ರಿಷಬ್ ಶೆಟ್ಟಿ ಕಾರು ತಪಾಸಣೆ – ಕಾರಣ ಇದೇನಾ?!

ಮನುಷ್ಯರ ಕಕ್ಕಾ ತಗೊಂಡು ಈ ಸಂಸ್ಥೆ ಮಾಡೋದೇನು?
ಈ ಹ್ಯೂಮನ್ ಮೈಕ್ರೊಬ್ಸ್ ಸಂಸ್ಥೆಯೂ 0.1 ಪ್ರತಿಶತಕ್ಕಿಂತಲೂ ಕಡಿಮೆ ಇರುವ ಸ್ಥಳೀಯ ಸೂಕ್ಷ್ಮಾಣು ಜೀವಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಮೂಲ ನಿವಾಸಿಗಳನ್ನು ಹುಡುಕುವ ಗುರಿಯನ್ನು ಹೊಂದಿದೆ. ಇದರ ಸಂಶೋಧನಾ ಉದ್ದೇಶಗಳಿಗಾಗಿ ಉಪಯುಕ್ತವಾಗಿರುವ ಈ ಸೂಕ್ಷ್ಮಜೀವಿಗಳನ್ನು ಹೊಂದಿರುವ ಕೆಲವು ಜನರನ್ನು ಕಂಪನಿಯು ಹುಡುಕುತ್ತಿದೆ. ಈ ರೀತಿ ಮಲದಾನ ಪಡೆಯುವುರಿಂದ ಸಂಸ್ಥೆಯೂ ಉತ್ತಮ ಗುಣಮಟ್ಟದ ಮಲ ದಾನಿಗಳನ್ನು ಈ ಸಂಶೋಧಕರೊಂದಿಗೆ ಸಂಪರ್ಕಿಸಲು ನೆರವಾಗುತ್ತದೆ.

ಮಲ ದಾನಿಗಳ ಆಯ್ಕೆ ಹೇಗಿರುತ್ತೆ?
ನೀವು ಈ ಮಲದಾನಕ್ಕೆ ಯೋಗ್ಯರೇ ಎಂದು ತಿಳಿಯುವುದಕ್ಕೆ ಸಂಸ್ಥೆ ನಿಮಗೆ ಪ್ರಶ್ನಾವಳಿಗಳನ್ನು ನೀಡುತ್ತದೆ. ಅದನ್ನು ನೀವು ಭರ್ತಿ ಮಾಡಿ ಕಳುಹಿಸಬೇಕು. ಇದಾದ ನಂತರ ಸಂದರ್ಶನವಿರುತ್ತದೆ. ಸಂದರ್ಶನ ಮುಗಿದ ನಂತರ ನಿಮಗೆ ಕೆಲ ತಪಾಸಣೆಗಳಿರುತ್ತವೆ. ಇದೆಲ್ಲದಕ್ಕೂ ಸಂಸ್ಥೆಯೇ ನಿಮಗೆ ಹಣ ಪಾವತಿ ಮಾಡುತ್ತದೆ. ಹೆಚ್ಚಿನ ಹಣಕ್ಕಾಗಿ ಚೌಕಾಶಿ ಮಾಡುವ ಅವಕಾಶ ಕೂಡ ಉಂಟು