Home News Smoked on plane: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬೀಡಿ ಸೇದಿದ ಪ್ರಯಾಣಿಕ !

Smoked on plane: ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬೀಡಿ ಸೇದಿದ ಪ್ರಯಾಣಿಕ !

Hindu neighbor gifts plot of land

Hindu neighbour gifts land to Muslim journalist

Passenger Smoked on plane: ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಬೀಡಿ ಸೇದಿ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಹೋಗಿ ಹೋಗಿ ಆತ ತನ್ನ ಅಭ್ಯಾಸ ತಡೆಯಲಾಗದೆ ವಿಮಾನದಲ್ಲೇ ಬೀಡಿ ಸೇದಿದ್ದಾನೆ.

ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್‌ನ ವಿಮಾನದಲ್ಲಿ ವ್ಯಕ್ತಿ ಬೀಡಿ ಸೇದುತ್ತಿದ್ದ(Passenger Smoked on plane). ಅದನ್ನುಗುರುತಿಸಿದ ಸಿಬ್ಬಂದಿ ತಕ್ಷಣ ಆತನನ್ನು ಹಿಡಿದಿದ್ದಾರೆ ಮತ್ತು ಫ್ಲೈಟ್ ಕ್ಯಾಪ್ಟನ್ ಅವನನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿನ್ನೆ, ಮಂಗಳವಾರ ವಿಮಾನದಲ್ಲಿ ಬೀಡಿ ಸೇದುತ್ತಿದ್ದ 56 ವರ್ಷದ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ನಿವಾಸಿ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.

ಎಸ್‌ಎನ್‌ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಡ್ಯೂಟಿ ಮ್ಯಾನೇಜರ್ ವಿಜಯ್ ತುಲ್ಲೂರು ಅವರು ನೀಡಿದ ದೂರಿನ ಪ್ರಕಾರ, ಆಕಾಶ ಏರ್‌ನ ಕ್ಯೂಪಿ 1326 (ಅಹಮದಾಬಾದ್ – ಬೆಂಗಳೂರು) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಮಧ್ಯಾಹ್ನ ಆತ ಟಾಯ್ಲೆಟ್ ಗೆ ಹೋಗಿದ್ದು,1.10 ರ ಸುಮಾರಿಗೆ ಶೌಚಾಲಯದೊಳಗೆ ಬೀಡಿ ಸೇದಿದ್ದಾನೆ.

ಸಿಬ್ಬಂದಿ ತಕ್ಷಣ ಆತನ ಬೀಡಿಯನ್ನು ಮತ್ತು ಬೆಂಕಿ ಪೊಟ್ಟಣವನ್ನು ಕಸಿದು ಕೊಳ್ಳಲಾಗಿದೆ. ಫ್ಲೈಟ್ ಕ್ಯಾಪ್ಟನ್ ಆತನನ್ನು ಅಶಿಸ್ತಿನ ಪ್ರಯಾಣಿಕ ಎಂದು ಘೋಷಿಸಿ ಕಂಟ್ರೋಲ್ ರೂಮಿಗೆ ಸುದ್ದಿ ಮುಟ್ಟಿಸಿದ್ದರು. ನಂತರ ನಗರದಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಸಿಬ್ಬಂದಿ ಆತನನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಆಕಾಶ ಏರ್‌ನ ವಕ್ತಾರರು ಈ ಬಗ್ಗೆ ಹೀಗೆ ಹೇಳಿದ್ದಾರೆ:

“ಮೇ 16, 2023 ರಂದು, ಅಹಮದಾಬಾದ್‌ನಿಂದ ಬೆಂಗಳೂರಿಗೆ ಹಾರುತ್ತಿದ್ದ ಆಕಾಶ ಏರ್ ಫ್ಲೈಟ್ QP1326 ನಲ್ಲಿ ಪ್ರಯಾಣಿಕನೊಬ್ಬ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿತು. ನಮ್ಮ ಸಿಬ್ಬಂದಿ ಅಗತ್ಯ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಮತ್ತು ಪ್ರಯಾಣಿಕರನ್ನು ಹಸ್ತಾಂತರಿಸಿದರು. ಬೆಂಗಳೂರಿಗೆ ಬಂದಿಳಿದ ನಂತರ ಸಿಐಎಸ್‌ಎಫ್‌ನ ಸಹಾಯದಿಂದ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ. ಈ ವಿಷಯದ ತನಿಖೆಗೆ ನಾವು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದೇವೆ ಎಂದಿದ್ದಾರೆ ಆಕಾಶ ವಿಮಾನಯಾನ ಸಿಬ್ಬಂದಿ.

ಕುಮಾರ್ ಕೂಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ. ಈತ ಬೀಡಿ ಕಟ್ಟನ್ನು ಮತ್ತು ಬೆಂಕಿ ಪೊಟ್ಟಣವನ್ನು ತನ್ನ ಜತೆಗೆ ಒಯ್ದಿದ್ದ. ಆರೋಪಿ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು ವಿಮಾನ ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಇದನ್ನು ಓದಿ: ಕಂಠೀರವ ಸ್ಟೇಡಿಯಂ ಪ್ರಮಾಣ ವಚನ ಕಾರ್ಯಕ್ರಮದ ಸಿದ್ಧತೆ ಸ್ಥಗಿತ