Home News Uttar pradesh: ನಾಲ್ಕನೇ ಮಗು ಹೆಣ್ಣು ಹುಟ್ಟಿತೆಂದು ರಾಕ್ಷಸನಾದ ತಂದೆ! ಮಗುವನ್ನು ಮಾಡಿದ್ದೇನು ಗೊತ್ತಾ?!

Uttar pradesh: ನಾಲ್ಕನೇ ಮಗು ಹೆಣ್ಣು ಹುಟ್ಟಿತೆಂದು ರಾಕ್ಷಸನಾದ ತಂದೆ! ಮಗುವನ್ನು ಮಾಡಿದ್ದೇನು ಗೊತ್ತಾ?!

Hindu neighbor gifts plot of land

Hindu neighbour gifts land to Muslim journalist

Uttar pradesh: ಮನುಷ್ಯ ಅತಿ ಆಸೆ ತನ್ನತನವನ್ನೇ ಕಳೆದುಕೊಳ್ಳುವಂತೆ ಮಾಡುತ್ತೆ. ಅಂತೆಯೇ ಇಲ್ಲೊಬ್ಬ ಗಂಡು ಮಗು ಬೇಕೆಂದು ಬಯಸಿದ್ದು, ನಾಲ್ಕನೇ ಮಗು ಹೆಣ್ಣು ಜನಿಸಿದ್ದಕ್ಕೆ ಕೋಪಗೊಂಡು ನವಜಾತ ಶಿಶುವನ್ನು ನೆಲಕ್ಕೆ ಬಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar pradesh) ಇಟಾವಾನಗರದಲ್ಲಿ ನಡೆದಿದೆ.

ಹೌದು, ದಿವಾಕರ್ ಎಂಬಾತನಿಗೆ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆಕೆ ಮೃತಪಟ್ಟಿದ್ದಾರೆ. ಬಳಿಕ ಎರಡನೇ ಮದುವೆಯಾಗಿದ್ದು, ಇದೀಗ ಎರಡನೇ ಹೆಂಡತಿಗೂ ಮೊದಲು ಹೆಣ್ಣು ಮಗು ಜನಿಸಿತ್ತು. ಆಕೆಗೆ ಎರಡನೇ ಬಾರಿ ಗಂಡು ಮಗು ಜನಿಸಬಹುದು ಎಂಬ ಆಸೆಯಲ್ಲಿದ್ದ ದಿವಾಕರ್‌, ಮತ್ತೆ ಹೆಣ್ಣು ಮಗು ಜನಿಸಿದ್ದಕ್ಕಾಗಿ ತೀವ್ರ ಕೋಪಗೊಂಡು ಈ ಕೃತ್ಯ ಮಾಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಗಂಡು ಮಗು ಬೇಕು ಎಂದು ಒತ್ತಾಯಿಸಿ ದಿವಾಕರ್ ನಿತ್ಯ ಪತ್ನಿಯೊಡನೆ ಜಗಳವಾಡುತ್ತಿದ್ದ. ಒಂದು ದಿನ ಜಗಳದ ಭರದಲ್ಲಿ ಹೆಂಡತಿಯ ಮಡಿಲಿಂದ ಒಂದು ತಿಂಗಳ ಹೆಣ್ಣು ಮಗುವನ್ನು ಕಸಿದುಕೊಂಡು ನೆಲಕ್ಕೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಗು ಮೃತಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದೀಗ ಪತ್ನಿ ದೀಪು ನೀಡಿದ ದೂರಿನ ಆಧಾರದ ಮೇಲೆ ದಿವಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.