Home Karnataka State Politics Updates Congress MLA: ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತಾಳುವ ನಿರ್ಧಾರದಿಂದ ಬೇಸರ – ಶಾಸಕ ಸ್ಥಾನಕ್ಕೆ...

Congress MLA: ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ತಾಳುವ ನಿರ್ಧಾರದಿಂದ ಬೇಸರ – ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕ !!

Hindu neighbor gifts plot of land

Hindu neighbour gifts land to Muslim journalist

Congress MLA: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಇದಾವುದೂ ನನಗೆ ಸಂಬಂಧ ಇಲ್ಲವೆಂದು ದೂರ ಉಳಿದಿದೆ. ದೂರ ಉಳಿದರೆ ಬಿಡಿ ತೊಂದರೆ ಇಲ್ಲ, ಮಂದಿರದ ಬಗ್ಗೆ, ರಾಮನ ಬಗ್ಗೆ ಲೇವಡಿ ಮಾಡುವುದು, ಕುಹಕವಾಡುವುದು, ಬಿಜೆಪಿಯನ್ನು ಟೀಕಿಸುವುದು ಮಾಡುತ್ತಿದೆ. ಈ ರೀತಿ ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್ ತಾಳಿರುವ ನಿಲುವಿನಿಂದ ಬೇಸರಗೊಂಡ ಗುಜರಾತಿನ ಕೈ ಶಾಸಕ(Congress MLA) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೌದು, ಅಯೋಧ್ಯೆ ರಾಮ ಮಂದಿರ(Ayodhya rama mandir) ವಿಚಾರದಲ್ಲಿ ಪಕ್ಷ ಕೈಗೊಂಡ ನಿಲುವಿನಿಂದ ಬೇಸರಗೊಂಡ ಗುಜರಾತ್ ನ ಹಿರಿಯ ಕಾಂಗ್ರೆಸ್ ಶಾಸಕ ಸಿಜೆ ಚಾವಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕರಾದ ಸಿಜೆ ಚಾವ್ಡಾ ವಿಜಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

 

ಈ ಕುರಿತು ಪ್ರತಿಕ್ರಿಯಿಸಿದ ಅವರು ನಾನು 25 ವರ್ಷಗಳಿಂದ ಕಾಂಗ್ರೆಸ್‌ ನಲ್ಲಿ ಕೆಲಸ ಮಾಡಿದ್ದೇನೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಿಂದ ಇಡೀ ದೇಶದ ಜನರು ಸಂತೋಷಪಡುತ್ತಿದ್ದಾರೆ. ಆದರೆ ರಾಮಮಂದಿರ ವಿಷಯದಲ್ಲಿ ನಮ್ಮ ಪಕ್ಷದ (ಕಾಂಗ್ರೆಸ್) ಧೋರಣೆಯಿಂದ ಅಸಮಾಧಾನವಾಗಿದೆ. ಗುಜರಾತ್(Gujarath) ನ ಇಬ್ಬರು ದೊಡ್ಡ ನಾಯಕರಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೆಲಸಗಳು ಮತ್ತು ನೀತಿಗಳನ್ನು ನಾವು ಬೆಂಬಲಿಸಬೇಕು. ಆದರೆ ಕಾಂಗ್ರೆಸ್‌ ನಲ್ಲಿದ್ದಾಗ ನಾನು ಅದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಾನು ರಾಜೀನಾಮೆ ನೀಡಿದ್ದೇನೆ” ಎಂದು ಅವರು ಹೇಳಿದರು. ಇನ್ನು ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಗಾಂಧೀನಗರದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.