Home Breaking Entertainment News Kannada ಸ್ಟಾರ್ ನಟರ ಜೊತೆ ನಟಿಸಿದ ನಟಿ ಏಡ್ಸ್ ನಿಂದ ಸಾವು! ಅಷ್ಟಕ್ಕೂ ಈ ಯಾರು ಈ...

ಸ್ಟಾರ್ ನಟರ ಜೊತೆ ನಟಿಸಿದ ನಟಿ ಏಡ್ಸ್ ನಿಂದ ಸಾವು! ಅಷ್ಟಕ್ಕೂ ಈ ಯಾರು ಈ ನಟಿ? ನಡೆದದ್ದೇನು ಗೊತ್ತಾ

Hindu neighbor gifts plot of land

Hindu neighbour gifts land to Muslim journalist

ಪ್ರಸ್ತುತ ಕೆಲವು ಸಿನಿಮಾ ನಟ ನಟಿಯರ ಸಾವುಗಳು ದೇಶಾದಾದ್ಯಂತ ಸರ್ವೇ ಸಾಮಾನ್ಯವಾಗಿದೆ. ಆರೋಗ್ಯ ಸಮಸ್ಯೆಗಳಿಂದಲೋ ಅಥವಾ ನಿಗೂಢವಾಗಿಯೋ ಸಾವಿನ ಸುಳಿಯಲ್ಲಿ ಇವರು ಸಿಲುಕುತ್ತಿದ್ದಾರೆ. ಒಟ್ಟಿನಲ್ಲಿ ಸಿನೆಮಾ ಕ್ಷೇತ್ರವಂತೂ ಇತ್ತೀಚೆಗೆ ಮಾಯಾಜಾಲ ಆಗಿದೆ ಎನ್ನಬಹುದು. ಈ ಕ್ಷೇತ್ರದಲ್ಲಿ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿ ಕೊನೆಗೆ ಯಾರಿಗೂ ಕಾಣದಂತೆ ಕಣ್ಮರೆಯಾದ ಕೆಲವು ನಟ ನಟಿಯರೂ ಇದ್ದಾರೆ. ಅಂತವರಲ್ಲಿ ಒಬ್ಬರಾದ ಈ ನಟಿಯ ಬಗ್ಗೆ ನೀವು ತಿಳಿಯಲೇ ಬೇಕು. ಅವರೇ ಸೌತ್ ಇಂಡಿಯನ್ ನ ಫೇಮಸ್ ನಟಿಯಾಗಿದ್ದ ನಿಶಾ ನೂರ್

ಹೌದು ಸಿನೆಮಾ ಲೋಕವೇ ಹಾಗೆ. ಇಲ್ಲಿ ಸಾಕಷ್ಟು ಕಲಾವಿದರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೆ ಕೆಲವರು ಜೀವನದ ಅಂತ್ಯವನ್ನು ಕಂಡುಕೊಂಡಿದ್ದಾರೆ. ಒಂದು ಕಾಲದಲ್ಲಿ ಸಿನಿ ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು ಕೊನೆಕೂನೆಗೆ ಹೇಳಲು ಹೆಸರಿಲ್ಲದಂತಾಗಿದ್ದಾರೆ. ಅಂತವರಲ್ಲಿ ನಿಶಾ ನೂರ್ ಕೂಡ ಒಬ್ಬರು

ಸುಮಾರು 80 ರ ದಶಕದಲ್ಲಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಮೊದಲಾದ ಸಿನಿಮಾಗಳಲ್ಲಿ ಗುರ್ತಿಸಿಕೊಂಡ ನಟಿ ನಿಶಾ ನೂರ್ ಸ್ಟಾರ್ ನಟರಾದ ತೆಲುಗು ಸೂಪರ್ ಸ್ಟಾರ್ ರಜನಿಕಾಂತ್, ಕಮಲ ಹಾಸನ್ ಹಾಗೂ ಮೊದಲಾದ ಹೆಸರಾಂತ ನಟರೊಂದಿಗೆ ನಟಿಸಿದ್ದಾರೆ. ಇವರ ಮೊದಲ ತಮಿಳು ಸಿನೆಮಾ ಮಂಗಳನಾಯಕಿ. ನಂತರ ಏನಾಗಾಗಿ ಕಾತಿರು, ಟಿಕ್ ಟಿಕ್ ಟಿಕ್ ಎಂಬ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ

ಟಾಪ್ ನಟಿಯಾಗಿದ್ದ ನಿಶಾ ನೂರ್ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾರೆ. ಇದರ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ಆದರೆ ಮುಂದೆ 2006-07 ರ ಸುಮಾರಿಗೆ ಇದ್ದಕ್ಕಿದ್ದ ಹಾಗೆ ತಮಿಳುನಾಡಿನ ದೇವಾಲಯ ಒಂದರ ಮುಂದೆ ಬೀದಿಯಲ್ಲಿ ಬಿದ್ದಿರುತ್ತಾರೆ. ಅವರನ್ನು ಕಂಡ ಜನ ನಿಶಾ ನೂರ್ ಎಂದು ಗುರುತಿಸಿ ಗಾಯಗೊಂಡು ತೀರಾ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುತ್ತಾರೆ

ಆಸ್ಪತ್ರೆಗೆ ಸೇರಿಸಿ ಟ್ರೀಟ್ ಮೆಂಟ್ ಕೊಡುವಾಗ ಒಂದು ಶಾಕಿಂಗ್ ನ್ಯೂಸ್ ಗೊತ್ತಾಗುತ್ತದೆ. ನಿಶಾ ಅವರಿಗೆ ಏಡ್ಸ್ ಖಾಯಿಲೆ ಇದೆ ಎಂದು. ಈ ಖಾಯಿಲೆ ಇವರಿಗೆ ಹೇಗೆ ಬಂತೋ ಗೊತ್ತಿಲ್ಲ. ಆದರೆ ನಿಶಾ ಕೊನೆಗೆ ಇದರಿಂದಲೇ ಕೊನೆಯುಸಿರೆಳೆಯುತ್ತಾರೆ ಎಂಬುದು ದುಃಖದ ವಿಷಯ. ನಿರ್ಮಾಪಕರು, ನಿರ್ದೇಶಕರಿಂದ ಮಾನಸಿಕ ದೈಹಿಕ ಹಿಂಸೆ ಅನುಭವಿಸಿದ್ದ ಇವರು ಸಾಕಷ್ಟು ಖಿನ್ನತೆಗೆ ಒಳಗಾಗಿದ್ದರು. ಒಟ್ಟಿನಲ್ಲಿ ಒಂದು ಕಾಲದಲ್ಲಿ ಎಲ್ಲರನ್ನೂ ರಂಜಿಸಿದ್ದ ನಟಿ ದಾರುಣ ಮರಣವಪ್ಪಿದ್ದು ಮಾತ್ರ ದುರದೃಷ್ಟಕರ