Home News ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕ ಹೌಹಾರಿ ಹೋಗಿದ್ದರು | ದೇವಿಯ ಕಾಲ ಬುಡದಲ್ಲಿ ಯುವಕನ ರುಂಡ...

ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕ ಹೌಹಾರಿ ಹೋಗಿದ್ದರು | ದೇವಿಯ ಕಾಲ ಬುಡದಲ್ಲಿ ಯುವಕನ ರುಂಡ ಚೆಂಡಾಡಿ ಇಟ್ಟಿತ್ತು !!

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್ : ಹೈದರಾಬಾದ್‌ನಿಂದ ನಾಗಾರ್ಜುನ ಸಾಗರ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಸಮೀಪದಲ್ಲಿರುವ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೂಜಾ ಸ್ಥಳದಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಮಹಾಕಾಳಿ ಮೂರ್ತಿಯ ಪಾದದ ಮೇಲೆ ರುಂಡ ಬಿದ್ದಿರುವುದನ್ನು ಗಮನಿಸಿದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ದೇವಸ್ಥಾನದಲ್ಲಿ ಈ ಕೃತ್ಯ ನಡೆದಿಲ್ಲದ ಕಾರಣ ಕೊಲೆ ನರಬಲಿಯಾಗಿರಲಾರದೆಂದು ಹೇಳಲಾಗಿದೆ. ಪ್ರಕರಣದ ತನಿಖೆಗೆ 8 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇದುವರೆಗೆ ದೇಹದ ಉಳಿದ ಭಾಗ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿ 25 ರಿಂದ 35 ವರ್ಷ ವಯಸ್ಸಿನವನಾಗಿದ್ದು, ಆತನನ್ನು ಬೇರೆ ಸ್ಥಳದಲ್ಲಿ ಕೊಂದು ರುಂಡವನ್ನು ಮಹಾಕಾಳಿಯ ಕಾಲ ಬುಡದಲ್ಲಿ ತಂದಿಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತನ ತಲೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ, ಸೂರ್ಯಪೇಟೆಯ ಕುಟುಂಬವೊಂದು ವ್ಯಕ್ತಿಯನ್ನು ಗುರುತಿಸಿದೆ.

ಕುಟುಂಬವು ನಲ್ಗೊಂಡಕ್ಕೆ ಆಗಮಿಸಿದ್ದು, ಬಲಿಪಶುವಾದ ವ್ಯಕ್ತುಯಾದವನನ್ನು 30 ವರ್ಷದ ರಮಾವತ್ ಜೈಹಿಂದ್ ಎಂದು ಗುರುತಿಸಲಾಗಿದೆ ಎಂದು ದೇವರಕೊಂಡ ಡಿಎಸ್ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ಆನಂದ್ ರೆಡ್ಡಿ ತಿಳಿಸಿದ್ದಾರೆ.

ಈ ವ್ಯಕ್ತಿ ನಾಲೈದು ವರ್ಷಗಳ ಹಿಂದೆ ತನ್ನ ಮನೆಯನ್ನು ತೊರೆದು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದ ಎಂದು ಅವರು ತಿಳಿಸಿದ್ದಾರೆ. ಇಲ್ಲಿಯವರೆಗೆ, ತಲೆ ಮಾತ್ರ ಪತ್ತೆಯಾಗಿದೆ, ಉಳಿದ ಭಾಗಗಳು ಇನ್ನೂ ಪತ್ತೆಯಾಗಿಲ್ಲ.