Home News ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ...

ಟೈಲರ್ ಗಂಡ ತನ್ನ ರವಿಕೆಯ ಹೊಲಿಗೆ ಸರಿಯಾಗಿ ಹಾಕಿಲ್ಲ ಅಂತ ಬದುಕಿನ ಹುಕ್ಕು ಕಳಚಿಕೊಂಡ ಪತ್ನಿ !!

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್: ಟೈಲರ್ ಆಗಿರುವ ಗಂಡ, ತಾನು ಹೇಳಿದಂತೆ ಸೀರೆಯ ಬ್ಲೌಸ್ ಹೊಲಿಯಲಿಲ್ಲ, ಅಳತೆ ಸರಿ ಬಂದಿಲ್ಲ ಇತ್ಯಾದಿ ಕಂಪ್ಲೇಟ್ ಅನ್ನು ಗಂಡನ ಮೇಲೆ ಹೊರಿಸಿ ಬದುಕಿನ ಭಾರ ಇಳಿಸಿದ್ದಾಳೆ ಆತನ ಪತ್ನಿ. ಹೌದು, ಈ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ವಿಜಯಲಕ್ಷ್ಮಿ (36) ಎಂದು ತಿಳಿದುಬಂದಿದೆ. ಹೈದರಾಬಾದ್‌ನ ಅಂಬರಪೇಟ್ ನಲ್ಲಿ ಶ್ರೀನಿವಾಸ್ ಟೈಲರ್ ಆಗಿದ್ದಾರೆ. ಅವರ ಪತ್ನಿ ವಿಜಯಲಕ್ಷ್ಮಿ ಇಷ್ಟಪಟ್ಟು ಒಂದು ಸೀರೆಯನ್ನು ಖರೀದಿ ಮಾಡಿದ್ದರು. ಅವರು ಅದಕ್ಕೆ ಬ್ಲೌಸ್ ಹೊಲಿದುಕೊಡುವಂತೆ ತಮ್ಮ ಟೈಲರ್ ಗಂಡನಿಗೆ ಹೇಳಿದ್ದಾರೆ. ತಮಗೆ ಯಾವ ರೀತಿ ಬ್ಲೌಸ್ ಬೇಕು ಎಂದು ಬಗ್ಗೆ ಗಂಡನಿಗೆ ವಿವರಿಸಿದ್ದಾರೆ.

ಗಂಡ ರವಿಕೆಯನ್ನು ಹೊಲಿದು ಕೂಡಾ ಕೊಟ್ಟಿದ್ದಾರೆ. ಆದರೆ ಅದು ತಾನು ಹೇಳಿದಂತೆ ಆಗಲಿಲ್ಲ. ಮುಖ್ಯವಾಗಿ ತಮ್ಮ ಅಳತೆಗಿಂತ ತೀರಾ ಟೈಟ್ ಆಗಿ ಹೊಲಿದಿದ್ದೀರಿ ಎಂದು ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿ ಜಗಳ ಕಾದಿದ್ದಾರೆ. ಇದರ ವಿಷಯವಾಗಿಯೇ ದಂಪತಿ ನಡುವೆ ಆಗಾಗ ಜಗಳವಾಗಿದೆ. ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲಿಗೆ ರವಿಕೆಯ ಹೊಲಿಗೆಗಾಗಿ ಬದುಕಿನ ಹುಕ್ಕು ಕಳಚಿಟ್ಟು ಹೋಗಿದ್ದಾಳೆ ದುಡುಕು ಬುದ್ದಿಯ ಹೆಂಡತಿ.

ಅವತ್ತು ಪತ್ನಿ ಸಿಟ್ಟಿನಿಂದ ಒಳಗೆ ಇದ್ದಿರಬಹುದು ಎಂದು ಶ್ರೀನಿವಾಸ್ ಅಂದುಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳು ಶಾಲೆಯಿಂದ ಮನೆಗೆ ಬಂದು ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ನಂತರ ಸಂದೇಹಗೊಂಡ ಶ್ರೀನಿವಾಸ್ ಬಾಗಿಲು ಒಡೆದು ಒಳ ಹೋಗಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.