Home Crime Soujanya Protest: ಬೀದಿ ಹೋರಾಟದಿಂದ ದೆಹಲಿಯವರೆಗೆ- ಪ್ರಸನ್ನ ರವಿ ಮಾತು

Soujanya Protest: ಬೀದಿ ಹೋರಾಟದಿಂದ ದೆಹಲಿಯವರೆಗೆ- ಪ್ರಸನ್ನ ರವಿ ಮಾತು

Soujanya Protest

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕನ್ನಡ: ಸೌಜನ್ಯ ಹೋರಾಟ ಚಳುವಳಿ ಇದೀಗ ದೆಹಲಿ ತಲುಪಿದೆ. ಸುಮಾರು 150 ಜನ ದೆಹಲಿ ಚಲೋಗೆ ಸೌಜನ್ಯ ಹೋರಾಟಗಾರು ಟ್ರೈನ್‌ ಮೂಲಕ ಮಂಗಳೂರಿನಿಂದ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ತಮ್ಮ ಹೋರಾಟದ ಅನಿಸಿಕೆಯನ್ನು ಈ ಸಂದರ್ಭದಲ್ಲಿ ಯೂಟ್ಯೂಬ್‌ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: New Delhi: ತಿರುಚಿದ ವೀಡಿಯೋ ಹಂಚಿಕೊಂಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜೈರಾಮ್ ರಮೇಶ್ ಅವರಿಗೆ ನಿತಿನ್ ಗಡ್ಕರಿ ಕಾನೂನು ನೋಟಿಸ್

“ಬೇರೆ ಬೇರೆ ಮನಸ್ಥಿತಿಯವರು ಇದ್ದಾರೆ ನಮ್ಮ ಜೊತೆ. ಈಗ ನಾವು ಅವರನ್ನು ಅರ್ಥ ಮಾಡಿಕೊಂಡಿದ್ದೇವೆ. ಹಾಗೆನೇ ಅವರು ಕೂಡಾ ನಮ್ಮನ್ನು ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಮುಖ್ಯ ಉದ್ದೇಶ ಸೌಜನ್ಯಳಿಗೆ ನ್ಯಾಯ ದೊರಕಿಸುವುದು. ಹಾಗಾಗಿ ಯಾವುದೇ ಸಮಸ್ಯೆ ನಮಗೆ ಸಮಸ್ಯೆಯಾಗಿಲ್ಲ. ದೆಹಲಿಗೆ ನಮ್ಮ ಹೋರಾಟ ಮೊದಲಿಗೆ. ಪ್ರತಿಯೊಬ್ಬರಿಗೂ ಸೌಜನ್ಯ ಹೋರಾಟದ ಕುರಿತು ಗೊತ್ತಿದೆ. ಮನೆಯನ್ನು ಐದು ದಿನ ಬಿಟ್ಟು ನಾವು ಟ್ರೈನ್‌ ಮೂಲಕ ಹೋರಾಟಕ್ಕೆಂದು ದೆಹಲಿಗೆ ಹೋಗುತ್ತಿದ್ದೇವೆ. ನಮ್ಮ ಜನಪ್ರತಿನಿಧಿಗಳ ಹಣೆಬರಹದಿಂದ ನಾವು ಈ ರೀತಿ ಹೋರಾಟಕ್ಕೆ ಹೋಗಬೇಕಾಗಿ ಬಂತು.

ದಕ್ಷಿಣ ಕನ್ನಡದ ಒಂದು ಹುಡುಗಿಗೆ ನ್ಯಾಯ ದೊರಕಬೇಕಾದರೆ ನಾವು ಮೋದಿಗೆ ತಿಳಿಸಲು ದೆಹಲಿಗೆ ಹೋಗಬೇಕಾದರೆ ನಮ್ಮ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ನಾವು ನಮ್ಮ ನ್ಯಾಯವನ್ನು ತೆಗೆದುಕೊಳ್ತೇವೆ. ನಾಚಿಕೆಯಾಗಬೇಕು ಜನಪ್ರತಿನಿಧಿಗಳಿಗೆ ಎಂದು ಪ್ರಸನ್ನ ಅವರು ಸೌಜನ್ಯ ಹೋರಾಟಕ್ಕೆಂದು ಟ್ರೈನ್‌ನಲ್ಲಿ ಹೋದಾಗ ಹೇಳಿದರು. ಸೌಜನ್ಯ ಹೋರಾಟ ಸಂಸ್ಥೆಯಲ್ಲಿ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಯಾರಿಗೂ ಇಲ್ಲಿ ಯಾವುದೇ ಪೋಸ್ಟ್‌ ಕೊಟ್ಟಿಲ್ಲ. ನಮ್ಮ ಕೈಯಿಂದ ನಾವು ಹಣ ಒಟ್ಟು ಮಾಡಿ, ಅವರು ದುಡಿದ ಹಣದಿಂದ ಅವರವರು ಹೋಗುತ್ತಿದ್ದೇವೆ. ನಾವು ಡಬ್ಬಿ ಇಟ್ಟು ಹಣ ಕಲೆಕ್ಟ್‌ ಮಾಡಿಲ್ಲ.

ಯಾಕೆ ದೆಹಲಿ ಚಳುವಳಿ?

ಕಾರಣ, ಸೌಜನ್ಯಳಿಗೆ ನ್ಯಾಯ ಬೇಕು. ಜನಪ್ರತಿನಿಧಿಗಳು ಕೂಡಾ ಮಾತಾಡ್ತಿಲ್ಲ. ಜನಪ್ರತಿನಿಧಿಗಳು ಅವರ ಕರ್ತವ್ಯ ಮಾಡದಿದ್ದರೆ ನಾವು ಮಾಡುತ್ತೇವೆ. ಮೋದಿ ನಮಗೆ ಖಂಡಿತ ನ್ಯಾಯ ಒದಗಿಸುವ ಭರವಸೆ ಇದೆ. ಅವರ ತನಕ ತಲುಪಿಸುವ ಕೆಲಸ ಮಾಡುತ್ತೇವೆ. ನಮ್ಮ ಹೋರಾಟ ಎಲ್ಲರಿಗೂ ತಲುಪಿದೆ. ಹಿಂದಿ ಮಾತನಾಡುವ ಟಿಟಿ ಕೂಡಾ ನಮಗೆ ಬೆಂಬಲ ನೀಡುತ್ತಾರೆ. ನಾವು ಖಾಲಿ ಕೈಯಿಂದ ಬಂದಿದ್ದೇವೆ. ನಾವು ತಿಂಡಿ, ಟಿಫಿನ್‌ ಏನೂ ತಂದಿಲ್ಲ. ಆದರೂ ನಮಗೆ ಎಲ್ಲಾ ಸೌಲಭ್ಯ ಸಿಗುತ್ತಿದೆ. ಇದು ಸೌಜನ್ಯಾಳ ಶಕ್ತಿ. ಪ್ರತಿಯೊಬ್ಬ ಟ್ರೈನ್‌ ಪ್ಯಾಸೆಂಜರ್‌ಗೆ ಸೌಜನ್ಯ ಹೋರಾಟ ಏನು ಅಂತ ಗೊತ್ತು. ಇದು ನಮ್ಮ ಗೆಲುವು. ನಮ್ಮ ಹೋರಾಟ ದೆಹಲಿ ತಲುಪಬೇಕು. ರಾಮರಾಜ್ಯ ಸ್ಥಾಪನೆ ಖಂಡಿತ ಸಾಧ್ಯವಿಲ್ಲ. ಯಾವಾಗ ಒಬ್ಬ ಹೆಣ್ಣುಮಗಳಿಗೆ ನ್ಯಾಯಕೊಡಲು ಸಾಧ್ಯವಾಗುವುದಿಲ್ಲವೋ, ರಾಮರಾಜ್ಯವಾಗಲು ಸಾಧ್ಯವಿಲ್ಲ. ಹಾಗಾಗಿ ನಾವು ಆ ರಾವಣರಾಜ್ಯವನ್ನು ನಾವು ಸರ್ವನಾಶ ಮಾಡುತ್ತೇವೆ ” ಎಂದು ಪ್ರಸನ್ನ ರವಿ ಅವರು ಮಾಧ್ಯಮದ ಮುಂದೆ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.