Home News Murder: ಮೇಕೆ ಮತ್ತು ತಾಯಿ ಮಧ್ಯೆ ಮೆಕೆಯನ್ನೇ ಆಯ್ಕೆ ಮಾಡಿಕೊಂಡ ಮಗ, ಅಮ್ಮನ ಹತ್ಯೆ

Murder: ಮೇಕೆ ಮತ್ತು ತಾಯಿ ಮಧ್ಯೆ ಮೆಕೆಯನ್ನೇ ಆಯ್ಕೆ ಮಾಡಿಕೊಂಡ ಮಗ, ಅಮ್ಮನ ಹತ್ಯೆ

Hindu neighbor gifts plot of land

Hindu neighbour gifts land to Muslim journalist

Murder: ಆತನಿಗೆ ತಾಯಿ ದೇವರಲ್ಲ, ತಾಯಿಗಿಂತ ಮೇಕೆಯೇ ಆತನಿಗೆ ಮುಖ್ಯವಾಯ್ತು. ಇಲ್ಲೊಬ್ಬ ಮೇಕೆಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ.

ಉತ್ತರಪ್ರದೇಶದ ಸೋನಾಭದ್ರದಲ್ಲಿ ಮೇಕೆಗಳನ್ನು ಮಾರಾಟ ಮಾಡಿದ ವಿಚಾರವಾಗಿ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಹೆತ್ತ ತಾಯಿಯನ್ನೇ ಮಗ ಕೊಲೆಗೈದ( murder ) ಘಟನೆ ನಡೆದಿದೆ. ದೇವಿ ಎಂಬ 50 ವರ್ಷದ ಮಹಿಳೆಯೇ ಕೊಲೆಯಾದ ಮಹಿಳೆ. ಕುಶನ್ ಬಿಹಾರಿ ಯಾದವ್ ಕೊಲೆ ಮಾಡಿದ ಕಿರಾತಕ ಮಗ.

ಮೇಕೆ ವ್ಯಾಪಾರದ ಬಗ್ಗೆ ವಾಗ್ವಾದ ಉಂಟಾದ ವೇಳೆ ತಾಯಿಯ ತಲೆಗೆ ಗಟ್ಟಿಯಾದ ವಸ್ತುವಿನಿಂದ ಬಲವಾಗಿ ಹೊಡೆದಿರುವ ಆರೋಪಿ, ದೇಹವನ್ನು ಬಟ್ಟೆಗಳಿಂದ ಮುಚ್ಚಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಭುವನ್ ನಾಥ್ ತ್ರಿಪಾಠಿ ಹೇಳಿದ್ದಾರೆ.

ಬೆಂಕಿ ಆವರಿಸುತ್ತಿದ್ದಂತೆ ನೆರೆಹೊರೆಯವರು ಜಮಾಯಿಸಿದ್ದಾರೆ. ತಕ್ಷಣವೇ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ. ಪೊಲೀಸರು ಆರೋಪಿ ಕುಶನ್ ಬಿಹಾರಿ ಯಾದವ್ ಬಂಧಿಸಿದ್ದಾರೆ. ಕಮಲೇಶ್ ದೇವಿ ತನ್ನ ಮಗ ಮತ್ತು ಸೊಸೆಯೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು.