

ಬಿಗ್ ಬಾಸ್ ಸೀಸನ್-8 ರ ಸ್ಪರ್ಧಿ ಶುಭ ಪೂಂಜಾ ಫ್ಯಾಮಿಲಿಯ ಜೊತೆಗೆ ಜನಪ್ರಿಯ ಹಾಸ್ಯ ನಟ ಮಂಜು ಪಾವಗಡರವರು ಪ್ರವಾಸಕ್ಕೆ ಹೋಗಿದ್ದಾರೆ. ಬಿಗ್‍ಬಾಸ್ ಸೀಸನ್-8 ರಲ್ಲಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದ್ದ ಇವರು ದೊಡ್ಮನೆಯಲ್ಲಿ ಎಷ್ಟು ಒಳ್ಳೆಯ ಸ್ನೇಹಿತರಾಗಿದ್ದರೋ ಹಾಗೆಯೇ ಈ ಕಾರ್ಯಕ್ರಮದಿಂದ ಹೊರಬಂದ ನಂತರವೂ ಅಷ್ಟೇ ಬೆಸ್ಟ್ ಫ್ರೆಂಡ್ಸ್ ಆಗಿ ಈಗಲೂ ಇದ್ದಾರೆ.
ನಟಿ ಶುಭ ಪೂಂಜಾರವರು ಕಳೆದ ವರ್ಷ ಲಾಕ್’ಡೌನ್ ಸಂಧರ್ಭದಲ್ಲಿ ಸುಮಂತ್ ಮಹಾಬಲರವರ ಜೊತೆಗೆ ಹಸೆಮಣೆ ಏರಿದ್ದರು. ಇದೀಗ ಒಂದು ವರ್ಷ ಪೂರೈಸಿದ ಬೆನ್ನಲ್ಲೇ, ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶೀರ್ವಾದವನ್ನು ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಮಾರಿಕಾಂಬಾ ದೇವಸ್ಥಾನಕ್ಕೆ ಪ್ರತಿ ವರ್ಷವೂ ಪ್ರವಾಸ ಮಾಡುವುದು ಒಂದು ಆಚರಣೆಯಾಗಿದೆ ಎಂದು ಶುಭ ಅವರು ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾರಿಕಾಂಬಾ ದೇವಸ್ಥಾನ ಶಿರಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ನಟಿ ಶುಭಾ ಕುಟುಂಬದ ಜೊತೆ ಮಂಜು ಪಾವಗಡ ಕೂಡ ಸಾಥ್ ನೀಡಿದ್ದಾರೆ.
ಸಿನಿಮಾ, ಶೂಟಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿರುವ ಶುಭ ಪೂಂಜಾ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಪ್ರವಾಸವನ್ನು ಮಾಡಿದ್ದಾರೆ. ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಮಂಜು ಪಾವಗಡ ಅವರು ಕೂಡ ಬ್ಯುಸಿ ಆಗಿದ್ದು, ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಸಮಯ ಬಿಡುವು ಮಾಡಿಕೊಂಡು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ.
ಸ್ನೇಹಿತರು ಜೊತೆ ಇದ್ರೆ ಪ್ರವಾಸವನ್ನು ಇನ್ನಷ್ಟು ಎಂಜಾಯ್ ಮಾಡಬಹುದು ಎಂದು ಶುಭ ಅವರು ಹೇಳಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದೂ, ಜನರು ಮೆಚ್ಚಿಕೊಂಡಿದ್ದಾರೆ.
https://www.instagram.com/p/CoEXmjrrUyX/?utm_source=ig_web_copy_link













