Home latest FSL ವರದಿಯಲ್ಲಿ ಚಂದ್ರು ಸಾವಿನ ಬೆಚ್ಚಿಬೀಳಿಸೋ ವರದಿ ಬಹಿರಂಗ!!!

FSL ವರದಿಯಲ್ಲಿ ಚಂದ್ರು ಸಾವಿನ ಬೆಚ್ಚಿಬೀಳಿಸೋ ವರದಿ ಬಹಿರಂಗ!!!

Hindu neighbor gifts plot of land

Hindu neighbour gifts land to Muslim journalist

ಇದೀಗ ಹಾಲಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್‌ ಸಾವು ಪ್ರಕರಣ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈಗಾಗಲೇ ಮರಣೋತ್ತರ ಪರೀಕ್ಷೆಯ ವರದಿಯು ಪೊಲೀಸರ ಕೈ ಸೇರಿದೆ.

ಅ.30ರ ಭಾನುವಾರ ಸಂಜೆ ಚಂದ್ರು ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿಯ ಆಶೀರ್ವಾದವನ್ನು ಪಡೆದು,ರಾತ್ರಿ ಊರಿಗೆ ಮರಳಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾನಾಡಿದ್ದಾರೆ. ಬಳಿಕ ತಡರಾತ್ರಿ 11:30ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದ್ದೂ, ಅಲ್ಲಿಂದ ಯಾವುದೇ ಸಿಗ್ನಲ್ ಪತ್ತೆಯಾಗಿರಲಿಲ್ಲ. ಆದರೆ ಸಿಸಿ ಕ್ಯಾಮೆರಾದಲ್ಲಿ ಶಿವಮೊಗ್ಗದಿಂದ ನ್ಯಾಮತಿ ತಾಲೂಕಿನ ಸುರಹೊನ್ನೆಗೆ ಬಂದ ದೃಶ್ಯವು ಲಭ್ಯವಾಗಿದೆ.

ಆದಾದ ಬಳಿಕ ನ.3 ರಂದು ಚಂದ್ರಶೇಖರ್ ಅವರ ಕ್ರೇಟಾ ಕಾರು ಸೊರಟೂರು ಬಳಿ ಇರುವ ತುಂಗಾಭದ್ರ ಕಾಲುವೆಯಲ್ಲಿ ಪತ್ತೆಯಾಗಿತ್ತು. ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಮೇಲಕ್ಕೆತ್ತಿದಾಗ ಚಂದ್ರುವಿನ ಶವವು ಕಾರಿನಲ್ಲೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆ ಬಳಿಕ ಚಂದ್ರು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅದಕ್ಕಾಗಿ ಆಕ್ಸಿಡೆಂಟ್ ಸಂಭವಿಸಿದ್ಯಾ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗೆ ಪೊಲೀಸರು ಕಾಯುತ್ತಿದ್ದರು. ಇದೀಗ ಎಫ್ ಎಸ್ ಎಲ್ ವರದಿ ನೀಡಿದ್ದೂ ಇದರ ಪ್ರಕಾರ ಕಾರು ಅತಿಯಾದ ಸ್ಪೀಡ್‍ನಿಂದ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎಂದಿದ್ದಾರೆ.

ಪ್ರಕರಣದ ಮರುಸೃಷ್ಟಿಗೆ ತೆರಳಿದ್ದ ಖಾಸಗಿ ವಿಧಿ ವಿಜ್ಞಾನ ತಜ್ಞ ಫಣೀಂದ್ರ ಕೂಡ 40 ಪುಟಗಳ ವರದಿಯನ್ನು ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿಯನ್ನು ಕೊಟ್ಟಿದ್ದಾರೆ. ಇನ್ನು ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದು ಫಣೀಂದ್ರ ಸ್ಪಷ್ಟಪಡಿಸಿದ್ದಾರೆ