Home News DK Shivakumar: ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ಕುಟುಂಬ ಕದನದಿಂದ ಲೈಂಗಿಕ ಹಗರಣ ಹೊರಬಿದ್ದಿದೆ: ಡಿಸಿಎಂ...

DK Shivakumar: ಕುಮಾರಸ್ವಾಮಿ ಮತ್ತು ಎಚ್‌ಡಿ ರೇವಣ್ಣ ಕುಟುಂಬ ಕದನದಿಂದ ಲೈಂಗಿಕ ಹಗರಣ ಹೊರಬಿದ್ದಿದೆ: ಡಿಸಿಎಂ ಡಿಕೆ ಶಿವಕುಮಾರ್

Dk shivakumar

Hindu neighbor gifts plot of land

Hindu neighbour gifts land to Muslim journalist

DK Shivakumar: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಅಣ್ಣ, ಮಾಜಿ ಸಚಿವ ಎಚ್‌.ಡಿ. ರೇವಣ್ಣರವರ ಕುಟುಂಬಗಳ ನಡುವಿನ ವೈಷಮ್ಯದಿಂದಾಗಿ ಹಾಸನದ ರಾಸಲೀಲೆ ಪ್ರಕರಣ ಬಹಿರಂಗವಾಗಿದೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ (DK Shivakumar on Pen drive) ಶನಿವಾರ ಹೇಳಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7ರಂದು ರಾಜ್ಯದಲ್ಲಿ ನಡೆಯಲಿರುವ ಮೂರನೇ ಹಂತದ ಲೋಕಸಭಾ ಚುನಾವಣೆಯ ನಂತರ ಪೆನ್‌ಡ್ರೈವ್‌ ವಿಚಾರವನ್ನು ಸೋರಿಕೆ ಮಾಡಿರುವ ಪ್ರಕರಣವು ಹೊಸ ಟ್ವಿಸ್ಟ್ ಪಡೆಯಲಿದೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೇ 7ರವರೆಗೆ ಸಮಯ ವ್ಯರ್ಥ ಏಕೆ ಮಾಡಬೇಕು? ಅದಕ್ಕೂ ಮೊದಲ ರಹಸ್ಯವನ್ನು ಬಹಿರಂಗಪಡಿಸಬಾರದೇ? ಅವರು (ಕುಮಾರಸ್ವಾಮಿ) ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳಿದ್ದರು. ಈಗಲೇ ರಹಸ್ಯ ತೆರೆದಿಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

‘ಈ ಇಡೀ ಲೈಂಗಿಕ ಹಗರಣಕ್ಕೆ ಕಾರಣ ಈ ಎರಡೂ ಕುಟುಂಬಗಳ ನಡುವಿನ ಆಂತರಿಕ ಸಮಸ್ಯೆಗಳೇ. ಹಾಗಂತ ಕುಮಾರಸ್ವಾಮಿಯವರ ಈ ಹೇಳಿಕೆಗಳು ತೋರಿಸುತ್ತವೆ. ಈ ವಿಚಾರದಲ್ಲಿ ಅವರು ಜನರ ಬಳಿ ಕ್ಷಮೆ ಕೇಳಿದ್ದು ಯಾಕೆ?” ಎಂದು ಅವರು ಡಿಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತಮಾಡುತ್ತಾ ಪ್ರಶ್ನಿಸಿದರು.

” ಪ್ರಜ್ವಲ್‌ಗೆ ಜೆಡಿಎಸ್ ಟಿಕೆಟ್ ನೀಡುವುದಿಲ್ಲ ಮತ್ತು ಅವರ ಕುಟುಂಬದ ಯಾರೂ ಹಾಸನದಿಂದ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ನೀವು ಬೇಕಾದರೆ ಗಮನಿಸಿ. ಕಳೆದ ವಿಧಾನಸಭೆ ಚುನಾವಣೆಯಿಂದ ಮೊದಲ್ಗೊಂಡು ಅವರ ಕುಟುಂಬ ಸದಸ್ಯರು ನೀಡಿರುವ ಎಲ್ಲಾ ಹೇಳಿಕೆಗಳನ್ನು ತುಲನೆ ಮಾಡಿಕೊಳ್ಳಿ. ಈಗ ಪೆನ್‌ಡ್ರೈವ್ ಪ್ರಕರಣದಲ್ಲೂ ಕುಮಾರಸ್ವಾಮಿ ಹೊಸ ಹೊಸದಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಅವರು ದಿನಕ್ಕೊಂದು ನಿಲುವು ತೆಗೆದುಕೊಂಡು ಅದನ್ನು ಬದಲಿಸುತ್ತಿದ್ದಾರೆ’ ಎಂದು ಡಿಕೆಶಿ ಆರೋಪಿಸಿದರು.

ಹಾಸನ ರಾಸಲೀಲೆ ಪ್ರಕರಣದಿಂದ ಜೆಡಿಎಸ್‌ನ 12 ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಸಂಪೂರ್ಣ ಸುಳ್ಳು ಸುದ್ದಿ. ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ಜೆಡಿಎಸ್ ನಾಯಕರ ಕುಟುಂಬದ ಬಗ್ಗೆ ಕೆಲ ಶಾಸಕರು ಹತಾಶರಾಗಿದ್ದಾರೆ. ಜೆಡಿಎಸ್ ಪಕ್ಷ ಹಾಗೂ ಅವರ ಕುಟುಂಬದಲ್ಲಿನ ಆಂತರಿಕ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯ ಸಮಯದಿಂದ ಕುಮಾರಸ್ವಾಮಿ ಅವರ ಕುಟುಂಬದವರು ನೀಡಿರುವ ಹೇಳಿಕೆಗಳನ್ನು ಆಲಿಸಿದರೆ ಇದು ತಿಳಿಯುತ್ತದೆ ಎಂದರು. ಒಟ್ಟಾರೆ ಕುಟುಂಬ ನಾಯಕತ್ವದ ಮೇಲೆ ಅವರು ಜನ ಭ್ರಮಾ ನಿರಸನ ಹೊಂದಿದ್ದಾರೆ” ಎಂದಿದ್ದಾರೆ ಡಿಕೆಶಿ.

ಡಿಕೆಶಿ ಒಕ್ಕಲಿಗ ಸಮುದಾಯದ ನಿರ್ವಿವಾದ ನಾಯಕರಾಗುವ ಭ್ರಮೆಯಲ್ಲಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ನಾಯಕನಾಗಿರುವುದಕ್ಕೆ ನನಗೆ ಸಂತೋಷವಿದೆ. ಹಾಗಾಗಿ, ಯಾವುದೇ ಒಂದು ನಿರ್ದಿಷ್ಟ ಸಮುದಾಯ, ಪಂಗಡದ ನಾಯಕ ಎಂಬ ಹಣೆಪಟ್ಟಿ ಹೊಂದಲು ನಾನು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Kapu: ಪಿಲಿಕೋಲ ಸಂಪನ್ನ; ಒರ್ವನ ಸ್ಪರ್ಶಿಸಿದ ಪಿಲಿ