Home Karnataka State Politics Updates ಕರ್ನಾಟಕ ರಾಜಕೀಯದಲ್ಲಿ ಸಖತ್ ಸದ್ದುಮಾಡುತ್ತಿರುವ ಈ ಸ್ಯಾಂಟ್ರೋ ರವಿ ಯಾರು ಗೊತ್ತ? ರಾಜಕೀಯ ನಾಯಕರೊಂದಿಗೆ ಇವನಿಗೇಕೆ...

ಕರ್ನಾಟಕ ರಾಜಕೀಯದಲ್ಲಿ ಸಖತ್ ಸದ್ದುಮಾಡುತ್ತಿರುವ ಈ ಸ್ಯಾಂಟ್ರೋ ರವಿ ಯಾರು ಗೊತ್ತ? ರಾಜಕೀಯ ನಾಯಕರೊಂದಿಗೆ ಇವನಿಗೇಕೆ ನಂಟು!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ಧಿಯಲ್ಲಿದ್ದು, ರಾಜಕೀಯ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳಿಗೆ ಸ್ಯಾಂಟ್ರೋ ರವಿ ಎಂಬಾತ ಕಾರಣ ಎಂಬ ವರದಿಗಳು ಬರುತ್ತಾ ಇದೆ. ಚುನಾವಣೆಯ ಪ್ರಚಾರಗಳನ್ನು ಮರೆತು ನಾಯಕರು ಈತನ ವಿಷಯವಾಗಿ ಕಿತ್ತಾಡುತ್ತಿದ್ದಾರೆ. ಹಾಗಾದರೆ ಯಾರು ಈ ಸ್ಯಾಂಟ್ರೋ ರವಿ? ಅವನಿಗೂ ಈ ರಾಜಕೀಯ ನಾಯಕರಿಗೂ ಏನು ಸಂಬಂಧ? ಎಲ್ಲವನ್ನೂ ತಿಳ್ಕೊಳ್ಳಬೇಕಾದರೆ ಈ ಸ್ಟೋರಿ ನೋಡಿ.

ಮೂಲತಃ ಮಂಡ್ಯದವನಾದ ಸ್ಯಾಂಟ್ರೋ ರವಿಯ ಮೂಲ ಹೆಸರು ಮಂಜುನಾಥ್. ಸದ್ಯ ಆತನ ವಯಸ್ಸು 52. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ. ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು. ಆರಂಭದಲ್ಲಿಯೇ ಓದು ಈತನ ತಲೆಗೆ ಹತ್ತಲಿಲ್ಲ. ಪಿಯುಸಿ ಡ್ರಾಪ್ ಔಟ್ ಆಗಿದ್ದ. ಮದುವೆಯಾಗಿ ಒಂದು ಹೆಣ್ಣು, ಒಂದು ಗಂಡು ಮಗು ಕೂಡ ಇದೆ.

ತಂದೆಯ ಮರಣದ ನಂತರ ಅಡ್ಡದಾರಿ ಹಿಡಿದಿದ್ದ ರವಿ, ಮನೆಯವರಿಗೆ ಕಿರುಕುಳ ನೀಡುತ್ತಿದ್ದ. ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ . 2000 ಇಸವಿಯಿಂದಲೇ ಪಿಂಪ್(ವೇಶ್ಯವಾಟಿಕೆ) ದಂಧೆ ಮಾಡುತ್ತಿದ್ದ ರವಿ ಪೊಲೀಸರಿಗೆ ಹೆದರಿ ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿ‌ ವಾಸವಾಗಿದ್ದ.

ಈತ 1995ರಿಂದ ಹಲವಾರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಮೈಸೂರು ಬೆಂಗಳೂರು ಸೇರಿ ಹಲವು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದೆ. ದ್ವಿಚಕ್ರ ವಾಹನ ಕಳ್ಳತನ, ಕಾರು ಕಳ್ಳತನ, ಅಪಹರಣ, ವೇಶ್ಯಾವಾಟಿಕೆ ದಂಧೆ ಪ್ರಕರಣದಲ್ಲಿ‌ ಈತ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. 1995ರಲ್ಲಿ ಮೊದಲ ಬಾರಿಗೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಂಜುನಾಥ್ ಆ ನಂತರ, ರವಿ ಅಂತಾ ತನ್ನ ಹೆಸರು ಬದಲಾಯಿಸಿಕೊಂಡಿದ್ದ.

ಮೈಸೂರಿಗೆ ಬಂದ ಆರಂಭದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುಲು ಶುರುಮಾಡಿದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ‘ಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ಮುಂದೆ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ.

ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರಿ ಅಧಿಕಾರಿಗಳಿಗೆ ಯುವತಿಯರ ಸರಬರಾಜು ಮಾಡಿ ಪ್ರಭಾವಿಗಳ ಸಂಪರ್ಕ ಬೆಳೆಸಿ ದಂಧೆ ಮುಂದುವರಿಸಿದ್ದ. ಈತನ ಕರ್ಮಕಾಂಡ ಬಯಲು‌ ಮಾಡಿದವರ ವಿರುದ್ದ ತನ್ನ ಪ್ರಭಾವ ಬಳಸಿ ಪ್ರಕರಣ ದಾಖಲಿಸುತ್ತಿದ್ದ. ತನ್ನ ಪತ್ನಿ ಮೂಲಕ ಜಾತಿ ನಿಂದನೆ, ಅತ್ಯಾಚಾರ ಯತ್ನ, ಮಾನಹಾನಿ‌ ಪ್ರಕರಣ ದಾಖಲಿಸಿದ್ದ.‌ ಪೊಲೀಸ್ ಸಿಬ್ಬಂದಿಗಳ ವಿರುದ್ದವೇ ಪ್ರಕರಣ ದಾಖಲಿಸಿ ಅವರನ್ನೂ ಹೆದರಿಸುತ್ತಿದ್ದ‌.

ರಾಜಕಾರಣಿಗಳ ಸ್ನೇಹ ಬೆಳೆಸಿದ ಬಳಿಕ ತನ್ನ ಪಿಂಪ್ ವ್ಯವಹಾರಕ್ಕೆ ರಾಜಕಾರಣಿಗಳ ರಕ್ಷೆಯನ್ನೇ ಪಡೆದುಕೊಂಡ. ಅಲ್ಲದೆ ತನ್ನ ಕೆಲಸ ಗೊತ್ತಾಗಬಾರದು ಎಂದು ಸರ್ಕಾರಿ ಅತಿಥಿ ಗೃಹವನ್ನೇ ಕುಮಾರ ಕೃಪಾ ಗೆಸ್ಟ್ ಹೌಸ್ ಆಗಿಸಿ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ. ಗೆಸ್ಟ್‌ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಅದರಲ್ಲೂ ರಷ್ಯಾ ಇರಾನ್ ದೆಹಲಿ ಮುಂಬೈ ಕೊಲ್ಕಾತ್ತಾದಿಂದ ದಂಧೆಗೆ ಯುವತಿಯರನ್ನು ಕರೆಸುತ್ತಿದ್ದ.

ಮೈಸೂರು ಬೆಂಗಳೂರಿನಲ್ಲಿ ವಾಸವಾಗಿರುವ ಈತನ ವಿರುದ್ದ ಸದ್ಯ ಮಹಿಳೆಯೊಬ್ಬರು, ಸ್ಯಾಂಟ್ರೋ ರವಿ ನನ್ನನ್ನು ವಂಚಿಸಿ‌ ಅತ್ಯಾಚಾರವೆಸಗಿ ಮದುವೆಯಾಗಿದ್ದಾನೆ. ಗರ್ಭಪಾತ ಮಾಡಿಸಿರುವುದಲ್ಲದೆ ಅಲ್ಲದೆ ಬೇರೆಯವರ ಜೊತೆ ಮಲಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಇದರಿಂದಾಗಿ ಮಂಜುನಾಥ್ ವಿರುದ್ದ ಸೆಕ್ಷನ್ 506, 498A, 504, 376, 270, 313, 323 ಅಡಿಯಲ್ಲಿ ಜನವರಿ 2 2023ರಂದು ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾದ ನಂತರ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಮೈಸೂರು ಪೊಲೀಸರು ಬಲೆ ಬೀಸಿದ್ದಾರೆ‌.

ಒಂದು ಕಡೆ ಸಿಎಂ ಜೊತೆ ಫೋಟೋಗೆ‌ ಪೋಸ್​ ಮತ್ತೊಂದು ಕಡೆ ಮಿನಿಸ್ಟರ್‌ಗಳ ಒಡನಾಟ. ಚಿನ್ನದ ಬಿಸ್ಕೆಟ್‌ಗಳ ಜೊತೆ‌, ಕಂತೆ ಕಂತೆ ನೋಟುಗಳನ್ನು ಮುಂದೆ ಫೋಟೋಗೆ ಪೋಸ್ ಕೊಡುವುದು. ಇವೆಲ್ಲಾ ಹೇಗೆ ಸಾಧ್ಯ? ಇದೆಲ್ಲಾ ಏನೇ ಇರಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಈ ರೀತಿ ಸಿಎಂ ಸೇರಿ ಸಚಿವರು, ಅಧಿಕಾರಿಗಳ ಹೆಸರನ್ನು ಅಷ್ಟು ಸುಲಭವಾಗಿ ಹೇಗೆ ಬಳಸಿಕೊಳ್ಳುತ್ತಿದ್ದಾನೆ ಅನ್ನೋದು ಸದ್ಯ ಯಕ್ಷಪ್ರಶ್ನೆಯಾಗಿದೆ.

ಸದ್ಯ ರಾಜಕೀಯ ನಾಯಕರು ಕೂಡ ಫೋಟೋ, ವಿಡಿಯೋ ಹಂಚಿಕೊಳ್ಳುವ ಮೂಲಕ ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡುತ್ತಾ ತಾವು ಜನ ಪ್ರತಿನಿಧಿಗಳು ಎಂಬುದನ್ನು ಮರೆಯುತ್ತಿದ್ದಾರೆ. ಜನರ ಹಿತ ಕಾಯುವವರೇ ಇಂತವರ ಸಹವಾಸ ಮಾಡಿ ರಕ್ಷಣೆಗೆ ಮುಂದಾಗುತ್ತಿದ್ದಾರ ಎಂಬ ಗುಮಾನಿ ಮಾಡುತ್ತಿರುವುದು ಮಾತ್ರ ಸತ್ಯ.