Home Entertainment ತನ್ನ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ | ಅಭಿಮಾನಿಗಳಿಂದ...

ತನ್ನ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ | ಅಭಿಮಾನಿಗಳಿಂದ ಹಾರೈಕೆಗಳ‌ ಸುರಿಮಳೆ

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್ ವುಡ್ ನ ಖ್ಯಾತ ನಟಿ ಅಮೂಲ್ಯ ಹಲವಾರು ಹಿಟ್ ಸಿನಿಮಾಗಳನ್ನು ನೀಡಿ ನಂತರ ಮದುವೆಯಾಗಿ ಮುದ್ದು ಮಕ್ಕಳ ತಾಯಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮದುವೆಯಾದ ನಂತರ ನಟನೆಯತ್ತ ಅಷ್ಟೊಂದು ಗಮನಹರಸದ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದ ಅಮೂಲ್ಯ, ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟಿವ್ ಆಗಿದ್ದಾರೆ. ನಟಿ ಅಮೂಲ್ಯ ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳು ಜನಿಸಿದ್ದವು. ಮಗುವಿನ ಮುಖ ತೋರಿಸಿ ಎಂಬ ಒತ್ತಾಯ ಅಭಿಮಾನಿಗಳ ಕಡೆಯಿಂದ ತುಂಬಾನೇ ಬಂದಿದ್ದವು. ಆದರೆ, ನಟಿ ಅಮೂಲ್ಯ ಅವರು ಮಕ್ಕಳ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ. ರೀಲ್ಸ್ ಮೂಲಕ ಮಕ್ಕಳ ಮುಖವನ್ನು ಫ್ಯಾನ್ಸ್‌ಗೆ ತೋರಿಸಿದ್ದಾರೆ.

ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿಯ ಮುದ್ದು ಮಕ್ಕಳ ಫೋಟೋ ಹಾರೈಸಿದ್ದಾರೆ. ಹಲವಾರು ಒಳ್ಳೆಯ ಕಮೆಂಟ್ ಗಳು ಅಮೂಲ್ಯ ಮಕ್ಕಳಿಗೆ ಬಂದಿವೆ‌. ಈ ಫೋಟೋಶೂಟ್ ನಲ್ಲಿ ತಿಳಿ ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಅಮೂಲ್ಯ ಮಿಂಚಿದ್ದು, ‘ನಮ್ಮ ಕಂದಮ್ಮನ ಮೇಲೆ ಆಶೀರ್ವಾದ ಇರಲಿ’ ಎಂಬ ಕ್ಯಾಪ್ಶನ್ ನೀಡಲಾಗಿದೆ. ಈ ಬಾರಿ ಅಮೂಲ್ಯ ಗಿಂತ ಮುದ್ದು ಮಕ್ಕಳ ಫೋಟೋವೇ ಹೈಲೈಟ್ ಆಗಿದೆ ಎಂದೇ ಹೇಳಬಹುದು.