Home Breaking Entertainment News Kannada ಮತ್ತೆ ಕಿಡಿಕಾರಿದ ಚೇತನ್ | ಈ ಬಾರಿ ಕಾಂತಾರ ವಿಷ್ಯ ಅಲ್ಲ, ಟಿಪ್ಪು ಪ್ರತಿಮೆ ವಿಷಯ!

ಮತ್ತೆ ಕಿಡಿಕಾರಿದ ಚೇತನ್ | ಈ ಬಾರಿ ಕಾಂತಾರ ವಿಷ್ಯ ಅಲ್ಲ, ಟಿಪ್ಪು ಪ್ರತಿಮೆ ವಿಷಯ!

Hindu neighbor gifts plot of land

Hindu neighbour gifts land to Muslim journalist

ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಮೈ ಮೇಲೆ ಎಳೆದುಕೊಂಡು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ನ(Sandalwood) `ಆ ದಿನಗಳು’ ಖ್ಯಾತಿಯ ನಟ ಚೇತನ್ ಇದೀಗ ಇದೀಗ ಸಿಎಂ ಇಬ್ರಾಹಿಂ ಹೇಳಿಕೆಗೆ ಕಿಡಿ ಕಾರಿದ್ದಾರೆ.

`ಕಾಂತಾರ’ ಚಿತ್ರದ ಎಲ್ಲೆಡೆಯೂ ಪ್ರಶಂಸನೀಯ ಮಾತುಗಳನ್ನು ಕೇಳುತ್ತಿದ್ದ ನಡುವೆಯೂ ಕರಾವಳಿಯ ಕಲೆ, ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಪ್ರಶ್ನಿಸುವ ರೀತಿಯಲ್ಲಿ, ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ನೀಡಿ ಚೇತನ್ ಕುಮಾರ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ(Ibrahim) ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಟ ಚೇತನ್, ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ ಟಿಪ್ಪು ಸುಲ್ತಾನ್ ಪ್ರತಿಮೆ ಬೇಡ ಪ್ರತಿಮೆ ಸ್ಥಾಪಿಸುವುದನ್ನು ಇಸ್ಲಾಂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆಯು ಅವರ ಅವಿವೇಕ ಮತ್ತು ಮೂರ್ಖತನದ ಹೇಳಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕೆಂದುಹೇಳಿಕೊಂಡಿದ್ದು ಅಲ್ಲದೆ, ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್ ಎಂದು ಸಹ ಬರೆದುಕೊಂಡಿದ್ದಾರೆ.