Home Breaking Entertainment News Kannada Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ!

Yashoda Collections : ಯಶೋದಾ ಕಲೆಕ್ಷನ್ ಎಷ್ಟು? ಸಮಂತಾ ಸಿನಿಮಾ ಭರ್ಜರಿ ಪ್ರದರ್ಶನ!

Hindu neighbor gifts plot of land

Hindu neighbour gifts land to Muslim journalist

ಪತಿ ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಸಮಂತಾ ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಅವರ ಇತ್ತೀಚಿನ ಚಿತ್ರ ‘ಯಶೋದಾ’ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ನವೆಂಬರ್ 11 ರಂದು ಈ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹರಿ ಮತ್ತು ಹರೀಶ್ ನಿರ್ದೇಶನದ ಯಶೋದಾ ಸಿನಿಮಾ ಉತ್ತಮ ನಿರೀಕ್ಷೆಗಳಿಂದ ತೆರೆಕಂಡಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಮಂತಾ ಜೊತೆಗೆ ಉಣ್ಣಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ರಾವ್ ರಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಹಾಗೂ ಈ ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ.

‘ಯಶೋದಾ’ ಬಿಡುಗಡೆಯಾದ ಮೊದಲ ದಿನದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ, ಈ ಚಿತ್ರವು ಅಮೆರಿಕದಲ್ಲಿಯೂ ಭರ್ಜರಿ ಸದ್ದು ಮಾಡಿದ್ದು, ಅಲ್ಲಿ ಅರ್ಧ ಮಿಲಿಯನ್​ಗೂ ಅಧಿಕ ಗಳಿಸಿದೆ.

ಇನ್ನೂ, ಯುಎಸ್ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ 5 ಲಕ್ಷ ಡಾಲರ್ ಗಡಿ ದಾಟಿದ್ದು, ಇದೀಗ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಈ ಸಿನಿಮಾದ 5ನೇ ದಿನದ ಕಲೆಕ್ಷನ್ ಹೆಚ್ಚೇನೂ ಆಗಿಲ್ಲ. ಕಾರಣ ಕೃಷ್ಣ ಅವರ ಸಾವಿನಿಂದ ಹೆಚ್ಚು ಕಲೆಕ್ಷನ್ ಆಗಿಲ್ಲವಂತೆ.

ಈವರೆಗೆ ಈ ಸಿನಿಮಾ ಎರಡು ತೆಲುಗು ರಾಜ್ಯಗಳಲ್ಲಿ 6.02 ಕೋಟಿ ಶೇರ್ ಹಾಗೂ 10.60 ಕೋಟಿ ಗ್ರಾಸ್ ಪಡೆದಿದೆ. ವಿಶ್ವದಾದ್ಯಂತ 10 ಕೋಟಿ ಶೇರ್ ಮತ್ತು 21.45 ಕೋಟಿ ಗಳಿಕೆಯಾಗಿದೆ. 12 ಕೋಟಿ ಗಳಿಕೆಯ ಗುರಿಯೊಂದಿಗೆ ಈ ಸಿನಿಮಾ ಬಾಕ್ಸ್ ಆಫೀಸ್ ಸರ್ಕಲ್ ಪ್ರವೇಶಿಸಿದೆ.

ಕ್ರೈಮ್ ಮತ್ತು ಸೈಕಲಾಜಿಕಲ್ ಥ್ರಿಲ್ಲರ್ ನಿಂದ ಕೂಡಿರುವ ಈ ಚಿತ್ರ ಪಾಸಿಟಿವ್ ಟಾಕ್ ನಿಂದಾಗಿ ಉತ್ತಮ ಕಲೆಕ್ಷನ್ ಮಾಡುತ್ತಿದೆ ಎನ್ನುತ್ತಾರೆ ಟ್ರೇಡ್ ಪಂಡಿತರು. ಸಮಂತಾ ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇನ್ನೊಂದೆಡೆ ವೆಬ್ ಸೀರಿಸ್ ನಲ್ಲಿ ಕೂಡ ನಟಿಸುತ್ತಿದ್ದಾರೆ. ಈಗಾಗಲೇ ಅಮೆಜಾನ್ ಪ್ರೈಮ್‌ಗಾಗಿ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಹಾಗೇ ಇನ್ನೊಂದು ವೆಬ್ ಸರಣಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.