Home latest ಧೂಮಪಾನಿಗಳೇ ಕೇಂದ್ರ ಸರಕಾರ ನಿಮಗೆ ನೀಡಿದೆ ಶಾಕಿಂಗ್ ನ್ಯೂಸ್!

ಧೂಮಪಾನಿಗಳೇ ಕೇಂದ್ರ ಸರಕಾರ ನಿಮಗೆ ನೀಡಿದೆ ಶಾಕಿಂಗ್ ನ್ಯೂಸ್!

Hindu neighbor gifts plot of land

Hindu neighbour gifts land to Muslim journalist

ಧೂಮಪಾನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ದೇಶದಲ್ಲಿ ಸಿಂಗಲ್ ಸಿಗರೇಟ್ ಮಾರಾಟದ ಮೇಲೆ ನಿಷೇಧ ಹೇರುವಂತೆ ಶಿಫಾರಸ್ಸು ಮಾಡಲಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯು ಸಿಂಗಲ್ ಸಿಗರೇಟ್ ಮಾರಾಟವನ್ನು ನಿಷೇಧಿಸಲು ಪ್ರಸ್ತಾಪಿಸಿದ್ದು, ಇದು ತಂಬಾಕು ನಿಯಂತ್ರಣ ಅಭಿಯಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ದಿನದಿಂದ ದಿನಕ್ಕೆ ಸಿಂಗಲ್ ಸಿಗರೇಟ್ ಬಳಕೆ ಹೆಚ್ಚಾಗುತ್ತಿದ್ದು, ವಿಮಾನ ನಿಲ್ದಾಣದ ಧೂಮಪಾನ ವಲಯವನ್ನ ಮುಚ್ಚುವಂತೆಯೂ ಶಿಫಾರಸ್ಸು ಮಾಡಲಾಗಿದೆ. ಗುಟ್ಕಾ, ಸುವಾಸನೆಯುಕ್ತ ತಂಬಾಕು ಮತ್ತು ಮೌತ್ ಫ್ರೆಶ್ನರ್’ಗಳ ಹೆಸರಿನಲ್ಲಿ ಮಾರಾಟ ಮಾಡುವ ಉತ್ಪನ್ನಗಳನ್ನು ಸಹ ನಿಷೇಧಿಸಲಾಗಿದೆ.

ಸ್ಥಾಯಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸರ್ಕಾರವು ಕಾರ್ಯನಿರ್ವಹಿಸಿದರೆ, ಸಂಸತ್ತು ಶೀಘ್ರದಲ್ಲೇ ಸಿಂಗಲ್ ಸಿಗರೇಟ್ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸಬಹುದು. ಜಿಎಸ್‌ಟಿ ಜಾರಿಯಾದ ನಂತರವೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ಸ್ಥಾಯಿ ಸಮಿತಿ ಗಮನಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ಬಜೆಟ್’ನಲ್ಲಿ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳವಾಗುವ ಸಾಧ್ಯತೆಯಿದೆ. ಆಲ್ಕೋಹಾಲ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಮಿತಿಯು ಎತ್ತಿ ತೋರಿಸಿದೆ.

ಫೌಂಡೇಶನ್ ಫಾರ್ ಸ್ಮೋಕ್-ಫ್ರೀ ವರ್ಲ್ಡ್ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 6.6 ಕೋಟಿ ಜನರು ಸಿಗರೇಟ್ ಸೇದುತ್ತಾರೆ, ಆದರೆ 26 ಕೋಟಿಗೂ ಹೆಚ್ಚು ಜನರು ಇತರ ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಭಾರತದಲ್ಲಿ ಸುಮಾರು 21% ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್ಗೆ ಒಳಗಾಗುತ್ತಾರೆ.

ಭಾರತದಲ್ಲಿ ಪ್ರತಿ ವರ್ಷ ಸುಮಾರು 3.5 ಲಕ್ಷ ಜನರು ಸಿಗರೇಟ್ ಸೇವನೆಯಿಂದ ಸಾಯುತ್ತಾರೆ. 2018 ರಲ್ಲಿ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಸಮೀಕ್ಷೆಯನ್ನು ನಡೆಸಿದ್ದು, ಧೂಮಪಾನ ಮಾಡುವವರಲ್ಲಿ 46% ಜನರು ಅನಕ್ಷರಸ್ಥರಾಗಿದ್ದಾರೆ ಮತ್ತು 16% ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಈಗಾಗಲೇ ನಿಷೇಧಿಸಲಾಗಿದ್ದೂ, ನಿಯಮ ಉಲ್ಲಂಘಿಸಿದರೆ 200 ರೂ.ವರೆಗೆ ದಂಡ ವಿಧಿಸುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಜಾಹೀರಾತನ್ನೂ ಸರ್ಕಾರ ನಿಷೇಧಿಸಿದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕ್ಯಾನ್ಸರ್ ಪೀಡಿತರ ಚಿಕಿತ್ಸೆಯಲ್ಲಿ ಬಳಸಲಾಗುವುದು. ಅಲ್ಲದೇ, ಹೆಚ್ಚುವರಿ ಮೊತ್ತವನ್ನು ತಂಬಾಕಿನ ವಿರುದ್ಧ ಜಾಗೃತಿ ಮೂಡಿಸಲು ಬಳಸಬೇಕು.