Home Interesting ತನ್ನ ಕೆಲಸಗಾರನನ್ನೇ ಮದುವೆಯಾದ ಶ್ರೀಮಂತ ಹಿರಿಯ ಮಹಿಳೆ!

ತನ್ನ ಕೆಲಸಗಾರನನ್ನೇ ಮದುವೆಯಾದ ಶ್ರೀಮಂತ ಹಿರಿಯ ಮಹಿಳೆ!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಎಂಬುದು ಅಂತರಾಳದಿಂದ ಹುಟ್ಟಬೇಕೇ ಹೊರತು ಆಸ್ತಿ ಅಂತಸ್ತಿನಿಂದ ಅಲ್ಲ. ಪ್ರೀತಿ ಕುರುಡು. ಹೀಗಾಗಿ, ಅಂದ, ಹಣ, ಕುಲ ಗೋತ್ರ ಯಾವುದು ಕಣ್ಣಿಗೆ ಕಾಣುವುದಿಲ್ಲ. ಬದಲಾಗಿ ಎರಡು ಹೃದಯಗಳ ಪ್ರೀತಿ ಮಾತ್ರ ನಿಜವಾದ ಪ್ರೇಮದಲ್ಲಿ ಕಾಣಸಿಗುವುದು. ಇದಕ್ಕೆ ನೈಜ ಉದಾಹರಣೆಯಂತಿದೆ ಇಲ್ಲೊಂದು ಪ್ರೇಮಕಥೆ.

ಹೌದು. ಪಾಕಿಸ್ತಾನದ ಶ್ರೀಮಂತ ಹಿರಿಯ ಮಹಿಳೆಯೊಬ್ಬರು ತನ್ನ ಕೆಲಸಗಾರನನ್ನು ಮದುವೆಯಾಗಿದ್ದಾರೆ. ಸದ್ಯ ಇವರ ಲವ್​ಸ್ಟೋರಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ನಿಜವಾದ ಪ್ರೀತಿ ಅಂದ್ರೆ ಇದಪ್ಪಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ, ಇವರ ಲವ್ ಸ್ಟೋರಿ ಕುರಿತು ಮೊದಲು ಕಣ್ಣಾಡಿಸೋಣ ಬನ್ನಿ.

ಶ್ರೀಮಂತ ಮಹಿಳೆ ಇಸ್ಲಾಮಾಬಾದ್ ನಿವಾಸಿಯಾದ ನಾಜಿಯಾ. ಇವರು ತನ್ನ ಜೀವನದ ಪ್ರೀತಿಯನ್ನು ಪಡೆಯುವವರೆಗೂ ಒಬ್ಬಂಟಿಯಾಗಿಯೇ ಇದ್ದರು. ಒಂದು ದಿನ, ದಿನನಿತ್ಯದ ಮನೆಕೆಲಸಕ್ಕಾಗಿ ಸ್ನೇಹಿತನೊಬ್ಬ ಸೂಫಿಯಾನ್ ಎಂಬ ವ್ಯಕ್ತಿಯನ್ನು ಪರಿಚಯಿಸಿದನು. ಅವನನ್ನು ತಿಂಗಳಿಗೆ 18,000 ರೂಪಾಯಿ ಸಂಬಳಕ್ಕೆ ನೇಮಿಸಿಕೊಂಡಳು.

ದಿನಕಳೆದಂತೆ, ನಾಜಿಯಾಗೆ ಸೂಫಿಯಾನ್ ಅವರ ಸರಳತೆ ಮತ್ತು ಒಳ್ಳೆಯ ಸ್ವಭಾವ ಭಾರೀ ಪ್ರಭಾವ ಬೀಳಿತು.ಅವನ ಸರಳತೆ ಅವಳ ಹೃದಯವನ್ನು ಗೆದ್ದಿದೆ. ಅವಳು ಅವನ ಎಲ್ಲಾ ಅಭ್ಯಾಸಗಳನ್ನು ಇಷ್ಟಪಡಲು ಪ್ರಾರಂಭಿಸಿದಳು. ಅದರ ನಂತರ ಅವಳು ತನ್ನ ಸರ್ವೆಂಟ್​ಗೆ ಪ್ರೇಮ ನಿವೇದನೆ ಮಾಡಿದ್ದಾಳೆ ಎಂದು ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಮತ್ತು ಯೂಟ್ಯೂಬರ್ ಸೈಯದ್ ಬಸಿತ್ ಹೇಳಿದ್ದಾರೆ.

ಮುಂದೊಂದು ದಿನ ಒಂದು ಹೆಜ್ಜೆ ಮುಂದೆ ಎಂಬಂತೆ ಪ್ರಪೋಸಲ್ ಮಾಡುತ್ತಾಳೆ. ಸೂಫಿಯಾನ್, “ನಾನೂ ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿ ಮುಗಿಸಿದರು. ಇದನ್ನು ಕೇಳಿದ ನಂತರ ಸೂಫಿಯಾನ್ ಮೂರ್ಛೆ ಹೋದರು ಎಂದು ನಾಜಿಯಾ ಹೇಳಿದರು.

ನಾಜಿಯಾ ಪ್ರಕಾರ ಸೂಫಿಯಾನ್, ಅನಾರೋಗ್ಯಕ್ಕೆ ಒಳಗಾದಾಗ ಅವಳನ್ನು ನೋಡಿಕೊಳ್ಳುತ್ತಾರೆ. ಅಲ್ಲದೆ, ಅವಳಿಗೆ ಅಡುಗೆ, ಔಷಧಿಗಳನ್ನೂ ಸಹ ಪಡೆಯುತ್ತಾರೆ. ಈಗ ಪಾಕಿಸ್ತಾನದ ಜೋಡಿಯ ವಿವಾಹ ಕಥೆ ನೆಟ್ಟಿಗರಿಗೆ ಫೇವರೇಟ್ ಆಗಿದ್ದು, ಸಲ್ಮಾನ್ ಖಾನ್ ಕತ್ರೀನಾ ಕೈಫ್​ಗೆ ಹೋಲಿಸಿ ಈ ಮದುವೆ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.