Home Breaking Entertainment News Kannada Ravichandran : ಅರೇ, ರಶ್ಮಿಕಾಗೆ ಮಗನನ್ನು ಮದುವೆಯಾಗುವ ಆಫರ್ ನೀಡಿದ್ರಾ ಕನಸುಗಾರ ರವಿಚಂದ್ರನ್!

Ravichandran : ಅರೇ, ರಶ್ಮಿಕಾಗೆ ಮಗನನ್ನು ಮದುವೆಯಾಗುವ ಆಫರ್ ನೀಡಿದ್ರಾ ಕನಸುಗಾರ ರವಿಚಂದ್ರನ್!

Hindu neighbor gifts plot of land

Hindu neighbour gifts land to Muslim journalist

ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಲ್ಲದೆ, ಪುಷ್ಪ ಸಿನಿಮಾ ಹಿಟ್ ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ.

ಆದರೆ ಇದೀಗ ನ್ಯಾಷನಲ್ ಕ್ರಷ್ ಗೆ ನಟ ರವಿಚಂದ್ರನ್ ಅವರು ತಮ್ಮ ಮಗನನ್ನು ಮದುವೆಯಾಗುವ ಆಫರ್ ನೀಡಿದ್ರಾ ಎಂಬ ಮಾತು ನೆಟ್ಟಿಗರಲ್ಲಿ ಚರ್ಚೆಯಾಗುತ್ತಿದೆ. ಈ ಮಾತಿನ ಚರ್ಚೆಗೆ ಒಂದು ಕಾರಣವಿದೆ. ಹಾಗಾದರೆ ಆ ಕಾರಣ ಏನಿರಬಹುದು?

ನವನಕ್ಷತ್ರ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ವೇದಿಕೆಯಲ್ಲಿ ಮಾತನಾಡುತ್ತಾ, ನನ್ನ ಮಗ ಒಮ್ಮೆ ನನ್ನ ಬಳಿ ಬಂದು, ರಶ್ಮಿಕಾ ನನ್ ಜೊತೆನೇ ಜೀಮ್‌ನಲ್ಲಿ ವರ್ಕೌಟ್ ಮಾಡ್ತಾರೆ ಅಂತ ಹೇಳಿದ್ದ, ಆಗ ನಾನು ಬಿಟ್ ಬಿಟ್ಯಲ್ಲೋ ಅಂತ ಹೇಳಿದ್ದೆ, ಹೀಗೇ ಹೇಳುವ ಮೂಲಕ ಪರೋಕ್ಷವಾಗಿ ತಮ್ಮ ಮಗನನ್ನು ಮದುವೆ ಆಗುವಂತೆ ಕ್ರೇಜಿಸ್ಟಾರ್ ಆಫರ್ ನೀಡಿದ್ದರು. ರವಿಚಂದ್ರನ್ ಅವರ ಈ ಮಾತಿಗೆ ರಶ್ಮಿಕಾ ಮಂದಣ್ಣ ನಾಚಿ ನೀರಾದರು.

ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಆ ಚಿತ್ರದಿಂದ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆ ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದ್ಯ ರಶ್ಮಿಕಾ ಮಂದಣ್ಣ ಕಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ಜೊತೆ ವರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಲ್ಲದೆ, ಅಲ್ಲು ಅರ್ಜುನ್ ಜೊತೆ ಪುಷ್ಪ-2 ನಲ್ಲಿ ಮತ್ತೊಂದು ಬಾರಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಗುಡ್ ಬೈ ಸಿನಿಮಾ ಅಷ್ಟು ಪ್ರಭಾವ ಬೀರಲಿಲ್ಲ. ಇದೀಗ ರಣಬೀರ್ ಕಪೂರ್ ಜೊತೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಇನ್ನು ಭಾರತೀಯ ಸೆಲೆಬ್ರಿಟಿಗಳ ಮುಖಕ್ಕೆ ಡೇವಿಡ್ ವಾರ್ನರ್ ತನ್ನ ಮುಖವನ್ನು ಜೋಡಿಸಿ ವಿಡಿಯೋಗಳನ್ನು ಮಾಡುವ ಮೂಲಕ ವೀಡಿಯೋ ವೈರಲ್ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಕೇವಲ ಹೀರೋಗಳ ವಿಡಿಯೋಗಳನ್ನು ಮಾತ್ರ ಮಾಡುತ್ತಿದ್ದ ವಾರ್ನರ್ ಇದೀಗ ರಶ್ಮಿಕಾ ಮಂದಣ್ಣ ವಿಡಿಯೋವನ್ನು ಮಾರ್ಫ್ ಮಾಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.