Home Entertainment ನ್ಯಾಷನಲ್‌ ಕ್ರಶ್ ಕೊಟ್ರು ವ್ಯಾಲೆಂಟೈನ್‌ ಡೇ ಗೆ ಬ್ಯೂಟಿಫುಲ್‌ ಟಾಸ್ಕ್‌ ! ಏನೆಂದು ಊಹಿಸೋಕೆ ನೀವು...

ನ್ಯಾಷನಲ್‌ ಕ್ರಶ್ ಕೊಟ್ರು ವ್ಯಾಲೆಂಟೈನ್‌ ಡೇ ಗೆ ಬ್ಯೂಟಿಫುಲ್‌ ಟಾಸ್ಕ್‌ ! ಏನೆಂದು ಊಹಿಸೋಕೆ ನೀವು ರೆಡಿನಾ?

Hindu neighbor gifts plot of land

Hindu neighbour gifts land to Muslim journalist

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಗಳಿಸಿರುವ ರಶ್ಮಿಕಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಮನಗೆದ್ದಿದ್ದಾರೆ. ಹಾಗೆಯೇ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿರುವ ಸೆಲೆಬ್ರಿಟಿ ಕೂಡಾ ಹೌದು. ರಶ್ಮಿಕಾ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯ ‘ಪುಷ್ಪ 2’ ಹಾಗೂ ‘ಅನಿಮಲ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಕೊಡಗಿನ ಬೆಡಗಿ ಇದೀಗ ಸೋಷಿಯಲ್ಸ್ ಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ. ಏನು ಅಂತೀರಾ? ಸಖತ್ ಸುದ್ದಿಯನ್ನೇ ಕೊಟ್ಟಿದ್ದಾರೆ. ಏನು ಅಂತ ನೋಡೋಣ ಬನ್ನಿ.

ಇನ್ನೇನು ವ್ಯಾಲೆಂಟೈನ್ ಡೇ ಹತ್ತಿರ ಬರುತ್ತಿದೆ. ಫೆ.14ರಂದು ಎಲ್ಲಾ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಕೊಟ್ಟು, ಅವರನ್ನು ಖುಷಿಯಾಗಿಸುತ್ತಾರೆ. ಹಾಗೇ ಕ್ರಶ್ ಅಂತ ಮನಸಲ್ಲೇ ಪೂಜೆ ಮಾಡೋರು ಹೇಗೋ ಧೈರ್ಯ ತಂದುಕೊಂಡು ಪ್ರಪೋಸ್ ಮಾಡುವ ದಿನ. ಈ ದಿನ ಅಂದ್ರೆ ಫೆ.14ರಂದು ರಶ್ಮಿಕಾ ಅಭಿಮಾನಿಗಳಿಗೆ ಏನೋ ಸರ್ಪ್ರೈಸ್ ಕೊಡುತ್ತಾರಂತೆ. ಸದ್ಯ ರಶ್ಮಿಕಾ ಅಭಿಮಾನಿಗಳಿಗೆ ಒಂದು ಟಾಸ್ಕ್ ಕೊಟ್ಟಿದ್ದಾರೆ. ಆ ಟಾಸ್ಕ್ ಏನು ಗೊತ್ತಾ ?

ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ‘ನನ್ನ ವ್ಯಾಲೆಂಟೈನ್ ಯಾರು ಎಂದು ಊಹಿಸುತ್ತೀರಾ?’ ಎಂದು ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಕುತೂಹಲ, ಚರ್ಚೆಗಳಿಗೆ ಫೆ.14ರಂದು ರಶ್ಮಿಕಾ ತೆರೆ ಎಳೆಯಲಿದ್ದಾರೆ. ಅಲ್ಲಿವರೆಗೂ ರಶ್ಮಿಕಾ ವ್ಯಾಲೆಂಟೈನ್ ಯಾರು ಎಂದು ತಿಳಿಯಲು ಕಾಯಬೇಕಿದೆ.