Home latest ದೋಷ ಪರಿಹಾರ ಮಾಡುವುದಾಗಿ ನಂಬಿಸಿ, ಯುವತಿ ಮೇಲೆ ಜ್ಯೋತಿಷಿ ರೇಪ್, ಪತ್ನಿಯಿಂದ ವೀಡಿಯೋ | ನಿಶ್ಚಯವಾಗಿದ್ದ...

ದೋಷ ಪರಿಹಾರ ಮಾಡುವುದಾಗಿ ನಂಬಿಸಿ, ಯುವತಿ ಮೇಲೆ ಜ್ಯೋತಿಷಿ ರೇಪ್, ಪತ್ನಿಯಿಂದ ವೀಡಿಯೋ | ನಿಶ್ಚಯವಾಗಿದ್ದ ಯುವತಿಯ ಮದುವೆ ರದ್ದು

Hindu neighbor gifts plot of land

Hindu neighbour gifts land to Muslim journalist

ದೋಷ ಪರಿಹಾರಕ್ಕೆಂದು ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಡಿ ಜ್ಯೋತಿಷಿ ಹಾಗೂ ಆತನ ಪತ್ನಿ ವಿರುದ್ಧ ದೂರು ದಾಖಲಾಗಿದೆ.

ಆವಲಹಳ್ಳಿಯ ಇರಂಡನಹಳ್ಳಿಯ ಆನಂದಮೂರ್ತಿ ಮತ್ತು ಪತ್ನಿ ಲತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಪಿ ಜ್ಯೋತಿಷಿ ಮನೆಯಲ್ಲಿ ಮಾಟ-ಮಂತ್ರ ಹಾಗೂ ದೋಷ ಪರಿಹಾರದ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.

ಐದಾರು ವರ್ಷದ ಹಿಂದೆ ಸಂಬಂಧಿಕರ ಮನೆಯ ವಿಶೇಷ ಪೂಜೆಯೊಂದರ ಸಂದರ್ಭ ಆರೋಪಿ ಆನಂದಮೂರ್ತಿ ಸಂತ್ರಸ್ತ ಯುವತಿಗೆ ಪರಿಚಿತನಾಗಿದ್ದಾನೆ. ಈ ವೇಳೆ ಆತ ಯುವತಿಗೆ ‘ನಿನಗೆ ದೋಷವಿದ್ದು, ಕೆಲ ಪೂಜೆ ಮಾಡಿಸಿದರೆ ಪರಿಹಾರವಾಗುತ್ತದೆ. ಇಲ್ಲವಾದರೆ, ಕುಟುಂಬಕ್ಕೆ ಕೆಟ್ಟದಾಗಲಿದೆ’ ಎಂದು ಹೇಳಿದ್ದಾನೆ. ಈತನ ಮಾತನ್ನು ನಂಬಿದ ಯುವತಿ ಆನಂದಮೂರ್ತಿ ಮನೆಗೆ ದೋಷ ಪರಿಹಾರದ ಪೂಜೆಗೆಂದು ತೆರಳಿದ್ದಳು. ಈ ಸಂದರ್ಭದಲ್ಲಿ ಪೂಜೆ ನೆಪದಲ್ಲಿ ಆರೋಪಿ ಆಕೆಗೆ ಮತ್ತು ಬರುವ ಔಷಧಿಯನ್ನು ಪಾನೀಯದಲ್ಲಿ ಬೆರಸಿ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾನೆ. ಈ ವೇಳೆ ಆರೋಪಿ ಆನಂದಮೂರ್ತಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಇದನ್ನು ಆತನ ಪತ್ನಿ ಶೀಲಾ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ.

ಬಳಿಕ ಆರೋಪಿಗಳು ಯುವತಿಗೆ ಲೈಂಗಿಕ ದೌರ್ಜನ್ಯದ ವೀಡಿಯೋ ತೋರಿಸಿ ಬೆದರಿಸಿ ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ 2.50 ಲಕ್ಷ ವಸೂಲಿ ಮಾಡಿದ್ದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಲೀಕ್ ಮಾಡುತ್ತೇವೆ. ಪಾಲಕರು ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಯುವತಿ ಹೆದರಿ ಸುಮ್ಮನಿದ್ದಳು.

ಆದರೆ, ಇತ್ತೀಚೆಗೆ ಪೋಷಕರು ಯುವತಿಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿ ಆನಂದಮೂರ್ತಿ, ಯುವತಿಗೆ ನಿಶ್ಚಯವಾಗಿರುವ ಹುಡುಗನನ್ನು ಭೇಟಿಯಾಗಿ ಯುವತಿಯ ಖಾಸಗಿ ವೀಡಿಯೋ ತೋರಿಸಿದ್ದಾನೆ. ಕೂಡಲೇ ಯುವಕನ ಕಡೆಯವರು ಮದುವೆ ಮುರಿದಿದ್ದಾರೆ. ಈ ವೇಳೆ ಪೋಷಕರು, ಯುವತಿಯನ್ನು ಪ್ರಶ್ನೆ ಮಾಡಿದಾಗ, ಐದಾರು ವರ್ಷದಿಂದ ಆರೋಪಿ ಆನಂದಮೂರ್ತಿ ಎಸಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿದ್ದಾಳೆ. ಹೀಗಾಗಿ ಪೋಷಕರು, ವಕೀಲರ ಸಹಾಯದಿಂದ ಆರೋಪಿಗಳಾದ ಆನಂದಮೂರ್ತಿ ಹಾಗೂ ಆಕೆಯ ಪತ್ನಿ ವಿರುದ್ಧ ಪೊಲೀಸರಿಗೆ ದೂರು ಮಾಡಿದ್ದರು.

ಈ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿರುವ ಕೆ.ಆರ್.ಪುರ ಠಾಣೆ ಪೊಲೀಸರು ವಂಚಕ ದಂಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.