Home Breaking Entertainment News Kannada ಬಾಲಿವುಡ್ ನ ಕಾಸ್ಟಿಂಗ್ ಕೌಚ್ ನ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ರಣ್ವೀರ್ ಸಿಂಗ್!

ಬಾಲಿವುಡ್ ನ ಕಾಸ್ಟಿಂಗ್ ಕೌಚ್ ನ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ರಣ್ವೀರ್ ಸಿಂಗ್!

Hindu neighbor gifts plot of land

Hindu neighbour gifts land to Muslim journalist

ಹೆಚ್ಚಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ಆದರೆ ಬಾಲಿವುಡ್ ಸ್ಟಾರ್ ನಟರೊಬ್ಬರು ತಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳಿದ್ದಾರೆ. ಇದರಿಂದ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ತಿಳಿಯುತ್ತದೆ.

ನಟಿ ದೀಪಿಕಾ ಪಡುಕೋಣೆಯ ಪತಿ, ನಟ ರಣ್ವೀರ್ ಸಿಂಗ್ ತಮಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿಕೊಳ್ಳುವ ಮೂಲಕ ಬಾಲಿವುಡ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಇದೀಗ ರಣ್ವೀರ್ ಸಿಂಗ್ ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದರು.

ಈ ಚಿತ್ರೋತ್ಸವದಲ್ಲಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರಣ್ವೀರ್ ಸಿಂಗ್, ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ದುಷ್ಟರು, ದುರುಳರು ತಮಗೂ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇಷ್ಟೆಲ್ಲಾ ಹೇಳಿದ ರಣ್ವೀರ್ ಆ ವ್ಯಕ್ತಿ ಗಳು ಯಾರು ಎಂದು ಮಾತ್ರ ಹೇಳಲಿಲ್ಲ.

ಆದರೆ ನಟ ಇಷ್ಟು ಮಾತ್ರ ಹೇಳಿದರು, ‘ಅವರು ಚಿತ್ರವೊಂದರ ನಿರ್ಮಾಪಕರು. ನನ್ನನ್ನು ತುಂಬಾ ಕೆಟ್ಟದ್ದಾಗಿಯೇ ನಡೆಸಿಕೊಂಡರು. ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ, ಏನೆಲ್ಲ ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆಗಳಿಗೆಲ್ಲಾ ನನ್ನ ಉತ್ತರ ಒಂದೇ ಆಗಿತ್ತು. ನಾನು ಹಾರ್ಡ್ ವರ್ಕ್ ಮಾಡಿ ಅದರ ಮೂಲಕ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ, ಅವರು ನನ್ನ ಡಾರ್ಲಿಂಗ್, ಬಿ ಸೆಕ್ಸಿ ಎಂದೆಲ್ಲ ಕರೆದರು. ಅವರು ನನ್ನನ್ನು ಯಾಕೆ ಹಾಗೆ ಕರೆಯುತ್ತಿದ್ದಾರೆ ಎಂದು ನನಗೆ ಅರ್ಥವಾಗಲು ಬಹಳ ಸಮಯ ಹಿಡಿಯಲಿಲ್ಲ’ ಎಂದು ರಣ್ವೀರ್ ಆಶ್ಚರ್ಯಕರ ವಿಷಯ ಹೇಳಿದರು.

ಸಿನಿಮಾರಂಗಕ್ಕೆ ಎಂಟ್ರಿಯಾದ ಬಳಿಕ ಸುಮಾರು ಮೂರುವರೆ ವರ್ಷಗಳ ಕಾಲ ನನಗೆ ಈ ರೀತಿಯ ಕೆಟ್ಟ ಅನುಭವಗಳು ಆಗಿವೆ. ಅವುಗಳನ್ನು ನಾನು ಸಮರ್ಥವಾಗಿಯೇ ಎದುರಿಸಿದ್ದೇನೆ. ಹಾಗಂತ ಎಲ್ಲರೂ ಈ ರೀತಿ ಮಾಡಲಿಲ್ಲ. ಕೆಲವರು ತುಂಬಾ ಗೌರವದಿಂದ ನಡೆಸಿಕೊಂಡವರೂ ಇದ್ದಾರೆ. ನಿರ್ದೇಶಕರಿಗಿಂತ ನಿರ್ಮಾಪಕರಿಂದ ನಾನು ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸಿದ್ದೇನೆ. ಮೂರು ವರ್ಷಗಳ ಕಾಲ ಪಟ್ಟ ಯಾತನೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಉರಿಯುತ್ತದೆ ಎಂದು ರಣ್ವೀರ್ ಸಿಂಗ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.