Home Breaking Entertainment News Kannada ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ...

ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ ಜೊತೆಗೆ ಕುಳಿತು ಕೈ ತುತ್ತು !!

Hindu neighbor gifts plot of land

Hindu neighbour gifts land to Muslim journalist

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ದಿನೇ ದಿನೇ ಒಂದಲ್ಲ ವಿಚಾರವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದರು. ಆದಿಲ್ ತನಗೆ ಮತ್ತೆ ಮೋಸ ಮಾಡಿದ ಎಂದು ಗಳಗಳನೆ ಅತ್ತಿದ್ದರು. ಈ ಬಗ್ಗೆ ರಾಖಿ ಪತಿ ವಿರುದ್ಧ ದೂರು ಕೂಡ ಕೊಟ್ಟಿದ್ದರು. ಅಷ್ಟೆಲ್ಲಾ ಡ್ರಾಮಾ ಮಾಡಿದ ರಾಖಿ ಇದೀಗ ಆದಿಲ್ ಜೊತೆಯೇ ರಸ್ತೆಯ ಬದಿಯ ಹೋಟೆಲ್ ನಲ್ಲಿ ಪರೋಟ ತಿನ್ನುತ್ತಿದ್ದು, ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಆದಿಲ್ ಖಾನ್ ರಾಖಿ ಸಾವಂತ್ ಮದುವೆ ನಡೆದಿರುವ ವಿಚಾರ ಗೌಪ್ಯವಾಗಿತ್ತು. ಮೈಸೂರಿನ ಆದಿಲ್ ಹಾಗೂ ಬಾಲಿವುಡ್ ಡ್ರಾಮ ಕ್ವೀನ್ ರಾಖಿ ಸಾವಂತ್ ಎಂಟು ತಿಂಗಳ ಹಿಂದೆಯೇ ಮದುವೆಯಾಗಿದ್ದಾರೆ ಎಂಬ ವಿಚಾರವನ್ನು ನಂತರ ರಾಖಿ ಬಹಿರಂಗಪಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೇಳಿಕೊಂಡಿದ್ದರು. ಹಾಗೇ ರಾಖಿ ಮದುವೆಯ ನಂತರ ತನ್ನ ಹೆಸರನ್ನು ಬದಲಿಸಿದ್ದು, ರಾಖಿ ಬದಲು ಫಾತಿಮಾ ಆಗಿದ್ದರು.

ನಂತರ ಪತಿಯ ವಿರುದ್ಧ ಒಂದೊಂದಾಗಿ ಆರೋಪಗಳನ್ನು ಮಾಡುತ್ತಾ ಬಂದ ರಾಖಿ, ನನ್ನನ್ನು ಮದುವೆಯಾಗಿ ಬೇರೆ ಹುಡುಗಿಯರೊಂದಿಗೆ ಆದಿಲ್ ಶೋಕಿ ಮಾಡುತ್ತಿದ್ದಾನೆ. ನನಗೆ ಬೆದರಿಸುತ್ತಿದ್ದಾನೆ ಎಂದು ಹೇಳಿದ್ದರು. ಅಲ್ಲದೆ, ಬಾಲಿವುಡ್ ನಲ್ಲಿ ಹೆಸರು ಗಿಟ್ಟಿಸಿಕೊಳ್ಳಲು ನನ್ನನ್ನು ಬಳಸಿಕೊಳ್ಳುತ್ತಿದ್ದಾನೆ ಎಂದೂ ಹೇಳಿದ್ದಳು.

ಈ ರೀತಿ ರಾಖಿ ವೈಯಕ್ತಿಕ ಜೀವನದ ಪ್ರತಿಯೊಂದು ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದಕ್ಕೆ ಆದಿಲ್ ಬೇಸರ ಮಾಡಿಕೊಂಡು ದಯವಿಟ್ಟು ನನಗೆ ಕರೆ ಮಾಡಬೇಡ ಎಂದಿದ್ದರು. ಈ ವೇಳೆ ತನ್ನ ಜೀವನ ಹಾಳಾಯ್ತು ಎಂದು ಹೇಳುತ್ತಲೇ ರಾಖಿ ಓಶಿವಾರ ಪೊಲೀಸ್ ಠಾಣೆ ಮುಂಬೈನಲ್ಲಿ ಆದಿಲ್ ವಿರುದ್ಧ ದೂರು ನೀಡಿದ್ದಾರೆ. ಆದಿಲ್‌ಗೆ ಅನೈತಿಕ ಸಂಬಂಧವಿದೆ ಇದರಿಂದ ನನ್ನ ಜೀವನ ಕಷ್ಟವಾಗುತ್ತಿದೆ ನನ್ನ ಪತಿ ನನ್ನ ಜೊತೆಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ.

ಪತಿ ವಿರುದ್ಧ ದೂರು ನೀಡಿದ್ದ ರಾಖಿ ಇದೀಗ ಮುಂಬೈ ರಸ್ತೆ ಬದಿಯಲ್ಲಿ ಆದಿಲ್ ಖಾನ್ ಜೊತೆ ಪರೋಟ ತಿನ್ನುತ್ತಿರುವ ವಿಡಿಯೋವನ್ನು ಪ್ಯಾಪರಾಜಿಗಳು ಸೆರೆ ಹಿಡಿದಿದ್ದಾರೆ. ಆದಿಲ್ ವಿರುದ್ಧ ಹಿಗ್ಗಾಮುಗ್ಗಾ ಆರೋಪ ಮಾಡಿ, ಇದೀಗ ಒಟ್ಟಿಗೆ ಕೂತು ಪರೋಟ ತಿನ್ನುತ್ತಿದ್ದಾರೆ. ರಾಖಿ ಕ್ಯಾಮೆರಾ ನೋಡುತ್ತಿದ್ದಂತೆ ದುಃಖದ ಮುಖ ಮಾಡಿಕೊಂಡಿದ್ದಾರೆ. ನೆಟ್ಟಿಗರಂತು ಕಾಮೆಂಟ್ ಗಳ ಮಳೆಸುರಿಸಿದ್ದಾರೆ. ‘ಈ ಕ್ಷಣವೂ ರಾಖಿ ಏನು ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಆದರೆ ರಾಖಿ ಕ್ಯಾಮೆರಾ ಕಂಡಾಗ ಸೃಷ್ಟಿ ಮಾಡುವ ನಾಟಕ ಅದ್ಭುತವಾಗಿರುತ್ತದೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.