Home latest Jaipur: ಮದುವೆಯಿಂದ ಮಸಣಕ್ಕೆ, ವ್ಯಾನ್ ಗೆ ಮುಖಾಮುಖಿ ಹೊಡೆದ ಬಸ್ಸು, ಒಂದೇ ಕುಟುಂಬದ 7 ಜನರ...

Jaipur: ಮದುವೆಯಿಂದ ಮಸಣಕ್ಕೆ, ವ್ಯಾನ್ ಗೆ ಮುಖಾಮುಖಿ ಹೊಡೆದ ಬಸ್ಸು, ಒಂದೇ ಕುಟುಂಬದ 7 ಜನರ ದಾರುಣ ಮರಣ

Jaipur

Hindu neighbor gifts plot of land

Hindu neighbour gifts land to Muslim journalist

Jaipur: ವ್ಯಾನ್ ಗೆ ಬಸ್ಸು (Van and Bus Accident) ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ರಾಜಸ್ಥಾನದ ದಿಡ್ವಾನಾ-ಕುಚಮನ್ ಜಿಲ್ಲೆಯಲ್ಲಿ ಖುಂಖುನಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಥಾಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಈ ಭೀಕರ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಬಂಗಾರ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ (Jaipur) ರವಾನಿಸಲಾಗಿದೆ ಎಂದು ಎಂದು ಅಲ್ಲಿನ ಡಿಎಸ್ಪಿ ಧರಂಚಂದ್ ಬಿಷ್ಣೋಯ್ ಹೇಳಿದ್ದಾರೆ.

ವ್ಯಾನ್‍ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕುಟುಂಬ ಸದಸ್ಯರುಗಳು ಸಾಗುತ್ತಿದ್ದರು. ರಾಜಸ್ಥಾನದ ಸಿಕಾರ್ ನಿಂದ ನಾಗೌರ್ ಗೆ ಅವರು ಮದುವೆಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದರು. ಈ ಅಪಘಾತಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದು ಬರಬೇಕಿದೆ. ಘಟನೆಯ ತೀವ್ರತೆಗೆ ವಾನ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇದನ್ನೂ ಓದಿ: Viral News: 14 ರ ಹುಡುಗಿಯ ಮುಂದೆ ವಿಮಾನದಲ್ಲಿ ವೈದ್ಯನ ಹಸ್ತ ಮೈಥುನ ! ಹೊದ್ದುಕೊಂಡು ಬೆಡ್ ಶೀಟ್ ಕಳಚಿ ಬಿದ್ದಾಗ…..!!!