Home News Puttur: ಪುತ್ತೂರು: ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಲು ಹೋಗಿ 9.97 ಲಕ್ಷ ರೂ ಕಳಕೊಂಡ...

Puttur: ಪುತ್ತೂರು: ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಲು ಹೋಗಿ 9.97 ಲಕ್ಷ ರೂ ಕಳಕೊಂಡ ಯುವತಿ!

mobile data

Hindu neighbor gifts plot of land

Hindu neighbour gifts land to Muslim journalist

Puttur: ಗೋಳಿತ್ತೊಟ್ಟಿನ ಯುವತಿ ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಲು ಹೋಗಿ 9.97 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಯುವತಿಗೆ ಫೆ. 15ರಂದು ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲಿಟ್ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದರು. ಯುವತಿಯ ಬ್ಯಾಂಕ್ ಖಾತೆ ವಿವರ ತೆಗೆದುಕೊಂಡು ಟಾಸ್ಕ್ ಕಂಪ್ಲೇಟ್ ಮಾಡಿದ್ದಕ್ಕೆ 150 ರೂ., 250 ರೂ. ಕಳುಹಿಸಿದ್ದರು. ಯುವತಿ ಆರು ಟಾಸ್ಕ್ ಕಂಪ್ಲೇಟ್ ಮಾಡಿದ ನಂತರ ಹಣ ಡೆಪಾಸಿಟ್ ಮಾಡಲು ತಿಳಿಸಿದ್ದು ಅದರಂತೆ ಯುವತಿ 1 ಸಾವಿರ ರೂ. ಕಳುಹಿಸಿದ್ದಕ್ಕೆ 1300 ರೂ., 2000 ರೂ. ಕಳುಹಿಸಿದ್ದಕ್ಕೆ 2600 ರೂ., ಹೀಗೆ ಹಂತ ಹಂತವಾಗಿ ಒಟ್ಟು 9,97,450 ಅಪರಿಚಿತ ವ್ಯಕ್ತಿಯ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದು ಸದ್ರಿ ಹಣವನ್ನು ಮರುಪಾವತಿಸುವಂತೆ ಕೇಳಿದಾಗ ನೆಫ್ಟ್ ಮಾಡಲು ಅಸಾಧ್ಯವಾಗಿದ್ದು ಇನ್ನು ಹೆಚ್ಚಿನ ಹಣ ಹಾಕಿದರೆ ಮರುಪಾವತಿಸುವುದಾಗಿ ತಿಳಿಸಿದ್ದಾರೆ.ಅಷ್ಟರಲ್ಲಿ ತಾನು ವಂಚಕರ ಬಲೆಗೆ ಬಿದ್ದ ವಿಚಾರ ತಿಳಿದ ಯುವತಿ ಠಾಣೆಗೆ ದೂರು ನೀಡಿದ್ದಾರೆ.